Asianet Suvarna News Asianet Suvarna News

Assembly election: ಯಾವ ಪಂಚರತ್ನಗಳು ಕ್ಷೇತ್ರದಲ್ಲಿ ಕೆಲಸ ಮಾಡಲ್ಲ; ಶಿವರಾಮೇಗೌಡ ತಿರುಗೇಟು

ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಯಾವ ಪಂಚರತ್ನ ಸಹ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಮ್ಮಿಕೊಂಡಿರುವ ಜೆಡಿಎಸ್‌ ರಥಯಾತ್ರೆಗೆ ಮಾಜಿ ಸಂಸದ ಎಲ….ಆರ್‌.ಶಿವರಾಮೇಗೌಡ ತಿರುಗೇಟು ನೀಡಿದರು.

Pancharatnas do not work in the field says Sivaramegowda in mandya rav
Author
First Published Dec 27, 2022, 10:12 PM IST

ನಾಗಮಂಗಲ (ಡಿ.27) : ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಯಾವ ಪಂಚರತ್ನ ಸಹ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಮ್ಮಿಕೊಂಡಿರುವ ಜೆಡಿಎಸ್‌ ರಥಯಾತ್ರೆಗೆ ಮಾಜಿ ಸಂಸದ ಎಲ….ಆರ್‌.ಶಿವರಾಮೇಗೌಡ ತಿರುಗೇಟು ನೀಡಿದರು.

ತಾಲೂಕಿನ ಕದಬಹಳ್ಳಿಯ ಕಾವೇಟಿ ರಂಗನಾಥಸ್ವಾಮಿ ದೇವಸ್ಘಾನದಲ್ಲಿ ಮಂಗಳವಾರ ನಡೆದ ಎಲ…ಆರ್‌ಎಸ್‌ ಸ್ವಾಭಿಮಾನಿ ಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಚ್‌ಡಿಕೆ ನನಗೆ ಬುದ್ಧಿ ಹೇಳಿಸುವ ಬದಲು ತಾಲೂಕಿನಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಅರಿತು ತಮ್ಮದೇ ಆದ ಕಂಪನಿ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿರುವ ಶಾಸಕ ಸುರೇಶ್‌ಗೌಡರಿಗೆ ಬುದ್ಧಿಹೇಳಬೇಕು ಎಂದು ಸಲಹೆ ನೀಡಿದರು.

Mandya: ಪಂಚರತ್ನ ರಥಯಾತ್ರೆಯಲ್ಲಿ ಹೂ ಮಳೆ ಸುರಿಸಿದ ಹೆಲಿಕಾಪ್ಟರ್‌

ಅತ್ತ ಪ್ರಧಾನಿ ಮೋದಿ(Narendra Modi) ರಾಷ್ಟ್ರ ಸುಭೀಕ್ಷವಾಗಿದೆ ಎಂದು ಈ ದೇಶದ ಜನರನ್ನು ಬಕರಾ ಮಾಡುತ್ತಿದ್ದಾರೆ. ಇತ್ತ ಜೆಡಿಎಸ್‌(JDS) ಅಧಿಕಾರಕ್ಕೆ ಬರಲು ಪಂಚರತ್ನ ಯಾತ್ರೆ(Pancharatna rathayatre) ನಡೆಸುತ್ತಿದ್ದಾರೆ. ಆದರೆ, ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಯಾವ ಪಂಚರತ್ನಗಳೂ ಕೆಲಸ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕೇವಲ ಐದು ತಿಂಗಳ ಅವಧಿಗೆ ಸಂಸತ್‌ ಸದಸ್ಯನಾಗಿಸಲು ನನ್ನಿಂದ .32 ಕೋಟಿ ಖರ್ಚು ಮಾಡಿಸಿ ಸಾಲವಂತರನ್ನಾಗಿಸಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ(HD Kumaraswamy)ಗೆ ಲೋಕಸಭಾ ಟಿಕೆಟ್‌ ಕೊಟ್ಟರು. ಎರಡು ಬಾರಿ ಸಿಎಂ ಆಗಿ ನೀವು ತಾಲೂಕಿಗೆ ಯಾವ ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಅಂಬರೀಶ್‌ ಪತ್ನಿ ಸುಮಲತಾ(Sumalata ambarish) ಮತದಾರರ ಮುಂದೆ ಸ್ವಾಭಿಮಾನದ ಹೆಸರಿನಲ್ಲಿ ಸೆರಗೊಡ್ಡಿ ಮತಯಾಚಿಸಿದಾಗ ಯಾವ ಕುಮಾರಸ್ವಾಮಿಯೂ ಲೆಕ್ಕಕ್ಕೆ ಬರಲಿಲ್ಲ. ಅದೇ ರೀತಿ ನಾನೂ ಸಹ 2023ರ ಚುನಾವಣೆ(Assembly election 2023)ಯಲ್ಲಿ ಸ್ವಾಭಿಮಾನದ ಮತಭಿಕ್ಷೆ ಬೇಡುತ್ತೇನೆ ಎಂದು ವೇದಿಕೆಯಲ್ಲಿ ಭಾವುಕರಾದರು.

ಕಳೆದ ಚುನಾವಣೆಯಲ್ಲಿ ‘ಕುಮಾರ ಪರ್ವ’ದ ಹಿಂದೆ ನಾವೆಲ್ಲಾ ಓಡಿ ಬಂದು ಸುರೇಶ್‌ಗೌಡರನ್ನು ಗೆಲ್ಲಿಸಲು ಶ್ರಮ ಹಾಕಿದ್ದೆವು. ಆದರೆ, ಪಕ್ಷಕ್ಕಾಗಿ ದುಡಿದ ನಮ್ಮಂತಹ ನಿಷ್ಟಾವಂತರನ್ನು ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಪಕ್ಷದಿಂದ ಹೊರ ಹಾಕಿದ್ದೀರಿ ಎಂದು ಕಿಡಿಕಾರಿದರು.

ನಾನು ಪಕ್ಷದಿಂದ ಹೊರ ಬಿದ್ದಮೇಲೆ ಸ್ವಾಭಿಮಾನಿ ಹೆಸರಿನಲ್ಲಿ ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಂತದಲ್ಲಿರುವಾಗ ನನ್ನನ್ನು ಕರೆಸಿ ಚುನಾವಣೆಗೆ ನಿಲ್ಲಬೇಡಿ ಎಂದು ಕೇಳಿಕೊಂಡಿಲ್ಲವೇ?, ಅದಕ್ಕೆ ಏನು ಉತ್ತರ ಕೊಡಬೇಕೋ ಅದನ್ನು ನಾನು ಕೊಟ್ಟು ಬಂದಿಲ್ಲವೇ? ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ತಮ್ಮ ನಡುವಿನ ರಹಸ್ಯ ಭೇಟಿಯನ್ನು ಬಿಚ್ಚಿಟ್ಟರು.

ಕಳೆದ 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂಎಲ್‌ಎ, ಎಎಲ್ಸಿ ಮಾಡುತ್ತೇನೆ ಎಂದು ಮೋಸ ಮಾಡಿದರು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧ. ತಾಲೂಕಿನ ಜನತೆ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅವ್ವೇರಹಳ್ಳಿ ಗೇಟ್‌ನಿಂದ ಶಿವರಾಮೇಗೌಡರನ್ನು ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. 5 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ಕ್ರೇನ್‌ ಮೂಲಕ ಬೃಹತ್‌ ಗಾತ್ರದ ಹಾರವನ್ನು ಹಾಕುವ ಮೂಲಕ ಅಭಿಮಾನ ಮೆರೆದರು.

ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲ: ಎಚ್‌.ಡಿ.ಕುಮಾರಸ್ವಾಮಿ

ಈ ವೇಳೆ ಪುತ್ರ ಎಲ….ಎಸ್‌.ಚೇತನ್‌, ವಕೀಲ ರಾಮೇಗೌಡ, ಮುಖಂಡ ಪಾಳ್ಯ ರಘು ಮಾತನಾಡಿದರು. ಬಿದರಕೆರೆ ಮಂಜೇಗೌಡ, ಮುಸ್ಲಿಂ ಮುಖಂಡ ಶೇಕ್‌ ಅಹಮದ್‌, ತಾಪಂ ಸದಸ್ಯರಾದ ಹೇಮರಾಜ್‌, ಕರಿಯಣ್ಣ. ಜುಬೇದಾರ್‌, ಶ್ರೀಹರಿ ಮಂಜುನಾಥ್‌, ತುರುಬನಹಳ್ಳಿ ಚೇತನ್‌, ಲಾರಿ ಚನ್ನಪ್ಪ, ನಾರಾಯಣಗೌಡ, ಮಾವಿನಕೆರೆ ಮಹೇಶ್‌, ಆನಂದ್‌, ಸಿ.ಜೆ.ಕುಮಾರ್‌ ಸಾವಿರಾರು ಮಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios