Asianet Suvarna News Asianet Suvarna News

Pancharatna Rathayatra: ಜನರ ನೆಮ್ಮದಿಯುತ ಬದುಕಿಗೆ ಪಂಚರತ್ನ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದರಲ್ಲಿ ಯಾವುದೇ ಜಾತಿ ಇಲ್ಲ, ಧರ್ಮ ಇಲ್ಲ. ಈ ನಾಡಿನ ಪ್ರತಿ ಕುಟುಂಬಕ್ಕೆ ಈ ಕಾರ್ಯಕ್ರಮ ತಲುಪುತ್ತವೆ. 

Pancharatna Yojana for the peaceful life of the people Says HD Kumaraswamy gvd
Author
First Published Dec 5, 2022, 11:20 PM IST

ಶಿರಾ (ಡಿ.05): ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದರಲ್ಲಿ ಯಾವುದೇ ಜಾತಿ ಇಲ್ಲ, ಧರ್ಮ ಇಲ್ಲ. ಈ ನಾಡಿನ ಪ್ರತಿ ಕುಟುಂಬಕ್ಕೆ ಈ ಕಾರ್ಯಕ್ರಮ ತಲುಪುತ್ತವೆ. ಪಂಚರತ್ನ ಕಾರ್ಯಕ್ರಮದಿಂದ ನಾಡಿನ ಪ್ರತಿಯೊಂದು ಕುಟುಂಬದ ಎಲ್ಲಾ ಸಮಾಜದ ಬಂಧುಗಳು ನೆಮ್ಮದಿಯ ಬದುಕುವ ಕಾರ್ಯಕ್ರಮ ಕೊಡುವುದು ಈ ಪಂಚರತ್ನ ಕಾರ್ಯಕ್ರಮದ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಾವಗಡ ತಾಲೂಕಿನಿಂದ ಪಂಚರತ್ನ ಯಾತ್ರೆಯು ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಜಗತ್ತು ಪಂಚಭೂತಗಳಿಂದ ಸೃಷ್ಟಿಯಾಗಿದೆ. ಅದೇ ರೀತಿಯಲ್ಲಿ ನಮ್ಮ ದೇಹ ಇಷ್ಟುಬಲಯುತವಾಗಿರಲು ಪಂಚೇಂದ್ರಿಯಗಳು ಕಾರಣ. ಅದೇ ರೀತಿ ರಾಜ್ಯದ ಜನತೆಯ ಅಭ್ಯುದಯಕ್ಕೆ ಪಂಚರತ್ನ ಯೋಜನೆ ಜಾರಿ ತರಲಾಗುವುದು ಎಂದರು.

‘ಪಂಚರತ್ನ’ ಯೋಜನೆಯಿಂದ ರಾಜ್ಯದ ಅಭಿವೃದ್ಧಿ: ಎಚ್‌.ಡಿ.ಕುಮಾರಸ್ವಾಮಿ

ಮದಲೂರು ಕೆರೆಗೆ ನೀರು ಹರಿಸಲು ಆದೇಶ ಮಾಡಿದ್ದು ನಾನು: 2006ರಲ್ಲಿ ಎನ್‌.ಸತ್ಯನಾರಾಯಣ ಅವರಿಗೆ ಮದಲೂರು ಕೆರೆಗೆ ನೀರು ಕೊಡುವುದಾಗಿ ಹೇಳಿದ್ದೆ. 2006ನೇ ಡಿ.26 ರಂದು ಮದಲೂರು ಕೆರೆಗೆ ನೀರು ತುಂಬಿಸುವುದಾಗಿ ಆದೇಶ ಮಾಡಿದ್ದೇ. ಬಿಜೆಪಿಯವರು ಈಗ ಬಂದು ಸುಳ್ಳುಹೇಳಿಕೊಂಡು ನೀರು ಹರಿಸಿದ್ದು ನಾವೇ ಎಂದು ಹೇಳುತ್ತಿದ್ದಾರೆ. ಜೆಡಿಎಸ್‌ ಸರ್ಕಾರ ಮಾಡಿದ್ದ ಕೆಲಸಗಳನ್ನು ಬಿಜೆಪಿಯವರು ನಾವೇ ಮಾಡಿದ್ದು ಎಂದು ಹೇಳುತ್ತಿದ್ದಾರೆ ಎಂದರು.

ಕುಮಾರಣ್ಣನಿಗೆ 500 ಕೆಜಿ ಸೇಬಿನ ಹಾರ: ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ಗೆ ಪಂಚರತ್ನ ರಥಯಾತ್ರೆ ಆಗಮಿಸಿದ ನಂತರ ಜೆಡಿಸ್‌ ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್‌ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು. ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲಾಯಿತು. ಹುಂಜನಾಳು ಗ್ರಾಮದಲ್ಲಿ ವಾಸ್ತವ್ಯ: ಪಂಚರತ್ನ ಯಾತ್ರೆಯು ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ನಿಂದ ಪ್ರಾರಂಭಗೊಂಡು ಬರಗೂರು ಗ್ರಾಮದಲ್ಲಿ ಸಮಾವೇಶ ನಡೆಸಿ ನಂತರ ಶಿರಾ ನಗರಕ್ಕೆ ಆಗಮಿಸಿ ನಂತರ ತಾಲೂಕಿನ ಹುಂಜನಾಳು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಡಿ.6ರಂದು ಗುಬ್ಬಿ ತಾಲೂಕನ್ನು ಪ್ರವೇಶಿಸಲಿದೆ.

Pancharatna Rathayatra: ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು: ಎಚ್‌.ಡಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ, ತಾಪಂ ಮಾಜಿ ಅಧ್ಯಕ್ಷ ಸತ್ಯಪ್ರಕಾಶ್‌, ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮುಖಂಡರಾದ ಕಲ್ಕೆರೆ ರವಿಕುಮಾರ್‌, ಶ್ರೀರಾಮೇಗೌಡ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಜಿ.ಪಂ. ಮಾಜಿ ಸದಸ್ಯ ರಾಮಕೃಷ್ಣ, ತಾಪಂ ಮಾಜಿ ಉಪಾಧ್ಯಕ್ಷ ರಂಗನಾಥ್‌ ಗೌಡ, ಬಿ.ಆರ್‌.ನಾಗಭೂಷಣ್‌, ರವಿಶಂಕರ್‌, ರಾಮು, ತಾಪಂ ಮಾಜಿ ಅಧ್ಯಕ್ಷ ನಿಡಗಟ್ಟೆಚಂದ್ರಶೇಖರ್‌, ಡಿಎನ್‌ ಪರಮೇಶ್‌ ಗೌಡ, ಭೂಪ್ಪಣ್ಣ, ಬೀರಲಿಂಗೇಗೌಡ, ಕೃಷ್ಣೇಗೌಡ, ಚಂಪಕಮಾಲ, ಮುದ್ದುಕೃಷ್ಣೇಗೌಡ, ಮಂಜುನಾಥ್‌ ಪಾಟೇಲ್‌, ರಹಮಾತ್‌ ಉಲ್ಲಾ, ದೊಡ್ಡಬಾಣಗೆರೆ ಈರಣ್ಣ, ಸುರೇಶ್‌, ತನುಜ್‌ ಗೌಡ, ಮನು, ಈರಣ್ಣ, ಬಿಸಿಎಂಡಿ. ಈರಣ್ಣ, ಸಣ್ಣೀರಪ್ಪ, ಸತೀಶ್‌ ಕುಮಾರ್‌, ರಂಗಸ್ವಾಮಿ ರಾಜಣ್ಣ.ಜಿ, ಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios