Asianet Suvarna News Asianet Suvarna News

ಅತಿಯಾದ ಆತ್ಮವಿಶ್ವಾಸ ಬಿಜೆಪಿ ಸೋಲಿಗೆ ಕಾರಣ: ಮಾಜಿ ಸಚಿವ ಬಿ.ಶ್ರೀರಾಮುಲು

ಅತಿಯಾದ ಆತ್ಮ ವಿಶ್ವಾಸ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ರಾಜಕಾರಣದಲ್ಲಿ ಸೋಲು-ಗೆಲವು ಸಹಜ ಕಾರ್ಯಕರ್ತರು ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವತ್ತ ಮುಂದಾಗಬೇಕೆಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. 

Overconfidence is the reason for BJPs defeat Says Former Minister B Sriramulu gvd
Author
First Published Jun 2, 2023, 2:20 AM IST

ಮೊಳಕಾಲ್ಮುರು (ಜೂ.02): ಅತಿಯಾದ ಆತ್ಮ ವಿಶ್ವಾಸ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ರಾಜಕಾರಣದಲ್ಲಿ ಸೋಲು-ಗೆಲವು ಸಹಜ ಕಾರ್ಯಕರ್ತರು ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವತ್ತ ಮುಂದಾಗಬೇಕೆಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ತಾಲೂಕಿನ ಬಿಜಿಕೆರೆ ವಸುಂದರ ಕೃಷಿ ಕ್ಷೇತ್ರದಲ್ಲಿ ಗುರುವಾರ ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಸಂದರ್ಭ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ತಿಪ್ಪೇಸ್ವಾಮಿಯವರಿಗೆ ಬಾರಿ ಬೆಂಬಲ ವ್ಯಕ್ತವಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ಜನಸಾಗರವೇ ಹರಿದು ಬಂದಿತ್ತು. 

ಇದರಿಂದ ಕಾರ್ಯಕರ್ತರಲ್ಲಿ ಬಲವಾದ ಆತ್ಮ ವಿಶ್ವಾಸವೂ ಮೂಡಿತ್ತು. ಆದರೆ ಕೊನೆ ಗಳಿಗೆಯಲ್ಲಿ ಹಣ ಮತ್ತು ಇನ್ನಿತರೆ ಕಾರಣಗಳಿಗೆ ಮತದಾರರು ಮಾರು ಹೋಗಿ ಪಕ್ಷಕ್ಕೆ ಹಿನ್ನಡೆಯಾಯಿತು. ಕಾರ್ಯಕರ್ತರು ಪಕ್ಷದ ಸೋಲಿಗೆ ಹತಾಶರಾಗದೆ ಮುಂಬರುವ ಚುನಾವಣೆಯತ್ತ ಗಮನ ಹರಿಸಬೇಕು. ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌ ನವೀನ್‌ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ತಿಪ್ಪೇಸ್ವಾಮಿಯವರಿಗೆ 87 ಸಾವಿರ ಮತಗಳು ಬಂದಿದ್ದರೂ ಪಕ್ಷಕ್ಕೆ ಸೋಲಾಗಿದೆ. 

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ: ಸಚಿವ ಮಧು ಬಂಗಾರಪ್ಪ

ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಶೇಕಡವಾರು ಮತಗಳು ಹೆಚ್ಚು ಬಂದಿದೆ. ಕೊನೆಯ ವರೆಗೂ ಗೆದ್ದೇ ಗೆಲ್ಲುತ್ತೇವೆನ್ನುವ ಬಲವಾದ ನಂಬಿಕೆಯಿಂದ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ಜತೆಗೆ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡುಗಳ ಭರವಸೆಯನ್ನು ನಂಬಿದ ಮರುಳಾದ ಮತದಾರರು, ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಎದೆಗುಂದುವ ಅಗತ್ಯ ಇಲ್ಲ. ಸೋಲಿನಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಿದ್ಧರಾಗಿ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಮಾತನಾಡಿ, ಕ್ಷೇತ್ರದ ಕೆಲವಡೆ ನಾನು ನಂಬಿದ್ದ ಮುಖಂಡರೆನಿಸಿಕೊಂಡವರು ಮಾಡಿದ ಕೆಲ ಲೋಪಗಳಿಂದಾಗಿ ನನಗೆ ಹಿನ್ನಡೆಯಾಗಿದೆ. ನಂಬಿದವರಿಗೆ ಯಾರೂ ಮೋಸ ಮಾಡಬಾರದು. ಅದು ಒಳ್ಳೆಯದೂ ಅಲ್ಲ. ಸೋತಿದ್ದೇನೆಂದು ಹೆದರುವುದಿಲ್ಲ. ರಾಜಕಾರಣದಿಂದ ಹಿಂದೆ ಸರಿಯಲ್ಲ. ಸದಾ ಕಾಲ ಕಾರ್ಯಕರ್ತರ ಜೊತೆಗಿದ್ದು ಪಕ್ಷ ಸಂಘಟನೆ ಮಾಡುತ್ತೇನೆ. ಕಾರ್ಯಕರ್ತರು ಎದೆಗುಂದಬಾರದು. ನಿಮ್ಮ ಜತೆ ನಾನು ಮತ್ತು ಪಕ್ಷ ಇದೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.

ಸರ್ಕಾರಿ ಶಾಲೆ ಉಳಿದರೆ ಮಾತ್ರ ಸರ್ವರಿಗೂ ಶಿಕ್ಷಣ ಸಾಧ್ಯ: ಶಾಸಕ ಕೊತ್ತೂರು ಮಂಜುನಾಥ್‌

ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಜಿಂಕ್ಲ ಬಸವರಾಜ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ ಮಂಜುನಾಥ, ಇ.ರಾಮರೆಡ್ಡಿ, ಎಂ.ವೈ.ಟಿ ಸ್ವಾಮಿ, ಟಿ. ರೇವಣ್ಣ, ಆರ್‌.ಜಿ ಗಂಗಾಧರಪ್ಪ, ಕಾಲುವೆಹಳ್ಳಿ ಶ್ರೀನಿವಾಸ್‌, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌, ಸಿದ್ದಾರ್ಥ, ಎಲ್‌.ಪರಮೇಶ, ಗೋವಿಂದಪ್ಪ, ಮಲ್ಲೇಶ, ಹರೀಶ್‌ ಪಾಳೇಗಾರ್‌ ಇದ್ದರು.

Follow Us:
Download App:
  • android
  • ios