Asianet Suvarna News Asianet Suvarna News

ನಮ್ದು ವರ್ಜಿನಲ್‌ ಜೆಡಿಎಸ್‌, ಬಿಜೆಪಿಯೊಂದಿಗೆ ಮೈತ್ರಿಗೆ ನಮ್ಮ ಬೆಂಬಲವಿಲ್ಲ: ಸಿಎಂ ಇಬ್ರಾಹಿಂ

ನಮ್ಮದು ಒರಿನಿನಲ್‌ ಜೆಡಿಎಸ್‌ ಆಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ. ಜೆಡಿಎಸ್‌- ಬಿಜೆಪಿ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ.

Ours party is original JDS no support for JDS BJP alliance CM Ibrahim sat
Author
First Published Oct 16, 2023, 7:11 PM IST

ಬೆಂಗಳೂರು (ಅ.16): ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ.  ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ನನ್ನನ್ನು ತೆಗೆಯಬೇಕಾದ್ರೆ 2/3 ನಲ್ಲಿ  ಸಭೆ ಮಾಡಿ ತೆಗೆಯಬೇಕು. ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ. ಎನ್‌ಡಿಎ ಸೋಲಿಸಲು ಇಂಡಿ ಮೈತ್ರಿಕೂಟಕ್ಕೆ ಬೆಂಬಲ ನೀಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಜೆಡಿಎಸ್‌ ಚಿಂತನ ಮಂಥನ ಸಭೆಯಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಬಗ್ಗೆ ಮಾತನಾಡಿದ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ. ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ.  ಒಂದು ವೇಳೆ ನನ್ನನ್ನು ಪಕ್ಷದಿಂದ ತೆಗೆಯಬೇಕಾದ್ರೆ 2/3 ನಲ್ಲಿ  ಸಭೆ ಮಾಡಿ ತೆಗೆಯಬೇಕು. ಇನ್ನು ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ ಎಂದು ಹೇಳಿದರು.

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!

ಮುಂದುವರೆದು, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸೋಲಿಸಬೇಕಾದರೆ, ಕಾಂಗ್ರೆಸ್ ಪಕ್ಷ ನಮ್ಮೆಲ್ಲರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ಗೆ ಬೆಂಬಲ ಕೊಡೊಕೆ ರೆಡಿ ಅಂತ ಸಂದೇಶ ನೀಡಿದರು. ಇಂಡಿ (INDIA) ಒಕ್ಕೂಟಕ್ಕೆ ಬೆಂಬಲ ಕೊಡ್ತೀನಿ. ಇಂದಿನ ಸಭೆ ನಿರ್ಣಯ ದೇವೆಡಗೌಡರಿಗೆ ತಿಳಿಸೋಕೆ ಒಂದು ಕೋರ್ ಕಮಿಟಿ ರಚನೆ ಮಾಡಲಾಗಿದೆ. ಈ ಕಮಿಟಿಯೂ ದೇವೇಗೌಡರನ್ನ ಭೇಟಿಯಾಗಿ ಸಭೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!

ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಳ್ಳಬೇಡಿ ಅಂತ ದೇವೇಗೌಡರಿಗೆ ಮನವಿ ಮಾಡಲಾಗುತ್ತದೆ. ನಮ್ಮ ಮಾತಿನ್ನು ಧಿಕ್ಕರಿಸಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಿದರೆ ಮುಂದಿನ ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡೋಕೆ ಕಾಲ ಪಕ್ವ ಆಗಿಲ್ಲ. ನಮ್ಮ ನಿರ್ಣಯವನ್ನ ವಿರೋಧ ಮಾಡಿದರೆ ಏನು ಆಗುತ್ತೆ ಅಂತ ಮುಂದೆ ಕಾದು ನೋಡಿ. ನಾನು ಜೆಡಿಎಸ್ ಪಕ್ಷ ಬಿಡೊಲ್ಲ. ಪಕ್ಷದಲ್ಲಿ ಇದ್ದು ಅಧಿಕಾರ ಚಲಾವಣೆ ಮಾಡ್ತೀನಿ ಎಂದು ತಿಳಿಸಿದರು.

Follow Us:
Download App:
  • android
  • ios