Asianet Suvarna News Asianet Suvarna News

ಗ್ಯಾರಂಟಿ ಯೋಜನೆಗೆ ಹಣ ನೀಡಿ ಸಿದ್ದು ಸರ್ಕಾರ ಪಾಪರ್ ಆಗಿದೆ: ಆರ್‌. ಅಶೋಕ್ ಕಿಡಿ

ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ, ರಾಹುಲ್‌, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದು ಕಿಡಿಕಾರಿದ ಆರ್.ಅಶೋಕ್ 

Opposition Party Leader R Ashok Slams CM Siddaramaiah grg
Author
First Published Nov 26, 2023, 12:07 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ನ.26):  ವಿಪಕ್ಷ ನಾಯಕರಾದ ಮೇಲೆ ಮೊಟ್ಟ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ ಆರ್.ಅಶೋಕ್, ಮೊದಲಿಗೆ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ಆಶೀರ್ವಾದ ಪಡೆದರು. ಸಿಬಿಐ ತನಿಖೆಯಿಂದ ಡಿಕೆಶಿ ಕೇಸ್ ವಾಪಸ್‌ಗೆ ಸಂಪುಟ ತೀರ್ಮಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾದ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ, ರಾಹುಲ್‌, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಈ ತೀರ್ಮಾನ ಇಡೀ ಸಂಪುಟಕ್ಕೆ ಕಪ್ಪು ಚುಕ್ಕೆ, ಡಿಕೆಶಿ ರಕ್ಷಣೆಗಾಗಿಯೇ ವಿಶೇಷ ಸಂಪುಟ ಸಭೆ ನಡೆದಿದೆ. ಎಲ್ಲವನ್ನೂ ರಹಸ್ಯವಾಗಿ ಸಿದ್ಧಪಡಿಸಿಕೊಂಡು ಏಕಾಏಕಿ ಘೋಷಣೆ ಮಾಡಿದ್ದಾರೆ. ನ್ಯಾಯಾಂಗಕ್ಕೆ ಮಣ್ಣೆರಚುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಸಿಬಿಐ ಶೇ.70ರಷ್ಟು ತನಿಖೆ‌ ಮುಗಿಸಿದ ವೇಳೆ ವಾಪಸ್ ಗೆ ನಿರ್ಧಾರ. ಡಿಕೆಶಿ ಸದಸ್ಯರಾಗಿರುವ ಸಂಪುಟದಲ್ಲಿ ಅವರ ಪರ ತೀರ್ಮಾನ, ಡಿಕೆಶಿ ಸಂಪುಟ ಸಭೆಯಲ್ಲಿ ಇರಲಿಲ್ಲ ಎಂಬುದು ಲೆಕ್ಕ ಅಲ್ಲ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಕೋರ್ಟ್ ಛೀಮಾರಿ ಹಾಕಿದ್ದಿದೆ. ಬಿಜೆಪಿ ಆಡಳಿತದಲ್ಲಿ ಅಕ್ರಮವಾಗಿ ಡಿಕೆಶಿ ಕೇಸ್ ಸಿಬಿಐಗೆ ನೀಡಿದ ಆರೋಪ‌ ವಿಚಾರಕ್ಕೆ ತಿರುಗೇಟು ನೀಡಿದರು. ಇಷ್ಟು ವರ್ಷದ ಬಳಿಕ ಸ್ಪೀಕರ್ ಒಪ್ಪಿಗೆ ಪಡೆದಿಲ್ಲ ಎಂಬುದು ? ಕಾಂಗ್ರೆಸ್ ಅವರಿಗೆ ಸಾಮಾನ್ಯ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ಸಿಎಂ ಮೌಖಿಕ ಆದೇಶವಿದ್ದರೂ ಸಹ ಊರ್ಜಿತ ಆಗುತ್ತದೆ. ಸರ್ಕಾರ, ಸಚಿವ ಸಂಪುಟ ನಗೆಪಾಟಲಿಗೀಡಾಗಿದೆ ಈ ಬಗ್ಗೆ ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಗೋವಿಂದ: ಅಶೋಕ್‌ ಭವಿಷ್ಯ

ಬಿಎಸ್ ವೈ ಸ್ಥಿತಿ ಬಿ..ವೈ.ವಿಜಯೇಂದ್ರಗೆ ಬರಲಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರ್. ಅಶೋಕ್‌, ತಿಮ್ಮಾಪುರ ಮೊದಲು ಬೆಳಗಾವಿ ಕಡೆ ನೋಡಲಿ, ದುಬೈಗೆ ಹೋಗಿ ಅವರನ್ನು ಕರೆದುಕೊಂಡು ಬರಲಿ, ಆಮೇಲೆ ನಮ್ಮ ಪಕ್ಷದ ಬಗ್ಗೆ ತಿಮ್ಮಪುರ ಮಾತಾಡಲಿ ಎಂದು ಟಾಂಗ್ ಕೊಟ್ಟರು. 

ಮಂಡ್ಯ, ದಾವಣಗೆರೆಯಲ್ಲಿ ಮುಂದಿನ ಸಿಎಂ ಡಿಕೆಶಿ ಎಂದು ಹೇಳಿದ್ದಾರೆ. ಅವರ ಕಾಂಗ್ರೆಸ್ ಪಕ್ಷದಲ್ಲೇ ನೂರು ತೂತುಗಳಿವೆ, ಅಳೆದು ತೂಗಿ ನಮ್ಮ ಹೈಕಮಾಂಡ್ ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದೆ. ನಾವು ಒಟ್ಟಾಗಿ ಹೋಗುತ್ತೇವೆ ಎಂದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ನೀಡಿ ಪಾಪರ್ ಆಗಿದೆ. ಪಾಪರ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ವ್ಯಂಗ್ಯ ಮಾಡಿದರು.

ಸಿದ್ಧಗಂಗಾ ಶ್ರೀಗಳ ಬಳಿ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಶೋಕ್‌, ನಾನು ಸಹ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ದಿಸಿದ್ದೆ, ವಿ‌.ಸೋಮಣ್ಣ ಜತೆಗೆ ನಮ್ಮ ಮುಖಂಡರು ಮಾತಾಡುತ್ತಿದ್ದಾರೆ. ಮಾತಾಡಿ ಎಲ್ಲವನ್ನೂ ಸರಿ ಮಾಡುತ್ತೇವೆ, ಈಗ ಸಿ.ಟಿ.ರವಿ, ರಮೇಶ ಜಾರಕಿಹೊಳಿ ಅಸಮಾಧಾನ ಸರಿಪಡಿಸಲಾಗಿದೆ. ಶೇ.98ರಷ್ಟು ಅಸಮಾಧಾನ ಸರಿಪಡಿಸಲಾಗಿದೆ, ಶೇ 2ರಷ್ಟು ಬಾಕಿಯಿದೆ. ವಿ.ಸೋಮಣ್ಣ, ಯತ್ನಾಳ್ ಕುರಿತು ಶೇ.2 ರಷ್ಟು ಬಾಕಿಯಿದೆ ಎಂದ ಅಶೋಕ್ ತಿಳಿಸಿದರು. ‌

ಕಾಂಗ್ರೆಸ್‌ ಗ್ಯಾರಂಟಿಗೆ ಸರ್ಕಾರದ ಖಜಾನೆ ಖಾಲಿ: ಆರ್‌.ಅಶೋಕ್‌

135 ಸ್ಥಾನ ಗೆದ್ದರೂ ಸಿದ್ಧರಾಮಯ್ಯ 4 ದಿನ ದೆಹಲಿಯಲ್ಲಿದ್ದರು. ಸಿಎಂ ಮಾಡದಿದ್ದರೆ ಹೊರ ಹೋಗುವುದಾಗಿ ಡಿಕೆಶಿ ಹೇಳಿದ್ದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಶ್ನೆಗಳು ಸಹಜ ಅಂತ ಹೇಳಿದ್ದಾರೆ. 

ಸಚಿವ ಜಮೀರ್ ಅಹ್ಮದ್ ತೆಲಂಗಾಣದಲ್ಲಿ ವಿವಾದಾತ್ಮಕ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಆರ್‌. ಅಶೋಕ್‌ ಅವರು, ಹಿಂದುಗಳೂ, ಬಿಜೆಪಿಯವರು ಮುಸ್ಲಿಂ ಸ್ಪೀಕರ್ ಎದುರು ತಲೆಬಾಗಬೇಕಿಂದಿದ್ದರು. ಸಚಿವ ಜಮೀರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಸದನದಲ್ಲಿ ಪ್ರಶ್ನಿಸುತ್ತೇವೆ, ಸರಿಯಾದ ಶಿಕ್ಷೆಗೆ ಆಗ್ರಹಿಸುತ್ತೇವೆ ಎಂದರು. 

Follow Us:
Download App:
  • android
  • ios