Siddaramaiah vs DK Shivakumar: ಸಿದ್ದರಾಮಯ್ಯ ಶಕ್ತಿ ಪರೀಕ್ಷೆಗಾಗಿ 75ನೇ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ರಾಜ್ಯ ನಾಯಕರಿಗೆ ಮತ್ತು ಕೇಂದ್ರ ನಾಯಕರಿಗೆ ಈ ಮೂಲಕ ತಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ತೋರಿಸಿಕೊಡಲು ಸಿದ್ದರಾಮಯ್ಯ ಬಲಪ್ರದರ್ಶನಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಈಗ ಮತ್ತೆ ನಾನೇ ಸಿಎಂ ಎಂಬ ರೀತಿ ಬಿಂಬಿಸಿಕೊಂಡಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಬಿಂಬಿಸುತ್ತಲೇ ಬರುತ್ತಿದ್ದಾರೆ. ಅದಕ್ಕೆ ಆಗಸ್ಟ್ ತಿಂಗಳಲ್ಲಿ ಇಟ್ಟುಕೊಂಡಿರುವ ಅಮೃತ ಮಹೋತ್ಸವವೇ ಸಾಕ್ಷಿ. 75ನೇ ಹುಟ್ಟುಹಬ್ಬದ ಅಂಗವಾಗಿ ಸಿದ್ದರಾಮಯ್ಯ ವಿಜ್ರಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಾರಂಭಕ್ಕೆ ಹೊಸ ಇಮೇಲ್ ಐಡಿಯೊಂದನ್ನು ಅವರ ತಂಡ ಕ್ರಿಯೇಟ್ ಮಾಡಿದೆ. ಅದು ಇಂಟರೆಸ್ಟಿಂಗ್ ಆಗಿದೆ. ವಿಷಯ ಏನೆಂದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಇಮೇಲ್ ಐಡಿ ಸೂಚ್ಯವಾಗಿ ಹೇಳುತ್ತದೆ.
ಇಮೇಲ್ ಐಡಿಯಲ್ಲೂ ಸಿಎಂ ನಾನೇ ಎಂಬ ಸಂದೇಶ:
ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾವೇಶ ಹಿನ್ನೆಲೆ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಕ್ರಿಯೆಟ್ ಮಾಡಿರುವ ಇಮೇಲ್ ಐಡಿ ವೇರಿ ಇಟ್ರೆಸ್ಟಿಂಗ್ ಆಗಿದೆ. ಆಗಸ್ಟ್ ಸಮಾವೇಶಕ್ಕೂ ಮೊದಲೇ ಮುಂದಿನ ಸಿಎಂ ಅಂತ ಬಿಂಬಿಸಿವ ಯತ್ನಕ್ಕೆ ಸಿದ್ದರಾಮಯ್ಯ ಆಪ್ತಬಳಗ ಸಜ್ಜಾಗಿರೋದು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈಗ ಹೊಸ ಇಮೇಲ್ ಐಡಿ ನೋಡಿ ಕಾಂಗ್ರೆಸ್ ನಾಯಕರೇ ಗಾಬರಿಯಾಗಿದ್ದಾರೆ ಎನ್ನಲಾಗಿದೆ. ಇಮೇಲ್ ಐಡಿ: srlopcm75@gmail.com ಎಂದು ಕ್ರಿಯೇಟ್ ಮಾಡಲಾಗಿದೆ.
ಇದನ್ನೂ ಓದಿ: 'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?
ಇದರ ಅರ್ಥ ಬಹಳ ಸ್ಪಷ್ಟವಾಗಿದೆ ಎನ್ನುತ್ತಾರೆ ಸಮಿತಿ ಸದಸ್ಯರು. ಈ ಮೇಲ್ ಕ್ರಿಯೆಟ್ ಮಾಡಿದ್ದು ಬಸವರಾಜ ರಾಯರೆಡ್ಡಿ. ಇದಕ್ಕೆ ಅಧಿಕೃತ ಮುದ್ರೆ ಹಾಕಿದ್ದು ಸಮಿತಿ ಸದಸ್ಯರು. Sr ಅಂದ್ರೆ ಸಿದ್ದರಾಮಯ್ಯ, lop ಅಂದ್ರೆ ಲೀಡರ್ ಆಫ್ ಅಪೋಸಿಷನ್ (ವಿಪಕ್ಷ ನಾಯಕ), CM ಅಂದ್ರೆ ಚೀಫ್ ಮಿನಿಸ್ಟರ್ (ಮುಖ್ಯಮಂತ್ರಿ). ಸಿದ್ದರಾಮಯ್ಯ ವಿಪಕ್ಷನಾಯಕ ಮುಖ್ಯಮಂತ್ರಿ75 ಎಂದು ಆಗುತ್ತದೆ ಅಂತಿದ್ದಾರೆ ಸಿದ್ದರಾಮಯ್ಯ ಆಪ್ತರು.
ಹುಟ್ಟುಹಬ್ಬ ಆಚರಣೆಯ ಬಗ್ಗೆ ಸಿದ್ದರಾಮಯ್ಯ ಏನಂತಾರೆ?:
ನಾನು ಈವರೆಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ನಾನು 75ನೇ ವರ್ಷದ ಮೈಲುಗಲ್ಲು ಪೂರೈಸುತ್ತಿರುವುದರಿಂದ ಸ್ನೇಹಿತರು, ಹಿತೈಷಿಗಳ ಒತ್ತಾಯದ ಮೇರೆಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಶಕ್ತಿ ಪ್ರದರ್ಶನವೂ ಅಲ್ಲ ಏನೂ ಅಲ್ಲ, ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಾರಂಭಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಆಗಮಿಸುತ್ತಿದ್ದಾರೆ. ಬಿಜೆಪಿಯವರೂ ಸೇರಿದಂತೆ ರಾಜ್ಯದ ಜನತೆಗೂ ಆಹ್ವಾನ ನೀಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ಸಿದ್ದರಾಮೋತ್ಸವ: ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರ ಸಿದ್ದು?
ನನ್ನ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಬಿಜೆಪಿಯವರು ಹೊಟ್ಟೆಉರಿಯಿಂದ ವಿವಿಧ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ಸಿದ್ದು ಹಾಸ್ಯೋತ್ಸವ ಎಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು 77ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ನಾನೂ ಹೋಗಿದ್ದೆ. ಅವರ ಹುಟ್ಟುಹಬ್ಬ ಆಚರಣೆ ಬಗ್ಗೆ ಇವರು ಏಕೆ ಟೀಕೆ ಮಾಡಲಿಲ್ಲ? ಸಚಿವ ಅಶೋಕ್ ಪುಟಗಟ್ಟಲೇ ಜಾಹಿರಾತು ನೀಡಿ ಹುಟ್ಟಹಬ್ಬ ಆಚರಣೆ ಮಾಡಿಕೊಂಡಿದ್ದರ ಬಗ್ಗೆ ಏನು ಹೇಳುತ್ತಾರೆ? ಹೊಟ್ಟೆಕಿಚ್ಚು, ದುರುದ್ದೇಶದಿಂದ ರಾಜಕೀಯ ವೈರಿಗಳು ಈ ರೀತಿ ಟೀಕೆ ಮಾಡುತ್ತಾರೆ. ಇದಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಕಿಡಿಕಾರಿದರು.
ವಾಸ್ತವವಾಗಿ ನನಗೆ ಜನ್ಮದಿನಾಂಕ ಗೊತ್ತಿಲ್ಲ. 1984ರಲ್ಲಿ ನಾನು ಮೊದಲ ಬಾರಿಗೆ ಸಚಿವನಾದ ದಿನದಿಂದಲೂ ಸಹ ನಾನು ಎಂದೂ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಹಿಂದೆ 12ನೇ ತಾರೀಖು ಆಚರಣೆ ಮಾಡಿಕೊಳ್ಳುತ್ತಿದ್ದೆ. ಆದರೆ ಶಾಲೆಯ ದಾಖಲೆಗಳಲ್ಲಿ ಆ.3 ಎಂದು ಇರುವುದರಿಂದ ಈಗ ಆ.3ರಂದು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 2022ರ ಆ.3ಕ್ಕೆ ನನಗೆ 75 ವರ್ಷ ತುಂಬಲಿದೆ. ಇದೊಂದು ವಿಶೇಷ ಸಂದರ್ಭ ಎಂದು ನನ್ನ ಸ್ನೇಹಿತರು, ಹಿತೈಷಿಗಳು ಸೇರಿ ಜನ್ಮದಿನ ಆಚರಣೆ ಮಾಡುತ್ತಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನೂ ಸಹ ಒಪ್ಪಿದ್ದೇನೆ ಎಂದರು.
ಇದನ್ನೂ ಓದಿ: ಬಿಟಿ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ, ಟಾರ್ಗೆಟ್ ಲಿಸ್ಟ್‌ನಲ್ಲಿ ಮಾಜಿ ಸಿಎಂ ಹೆಸರು!
ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ನೀವು ಹೋಗಿದ್ದಿರಿ ಅವರೂ ನಿಮ್ಮ ಹುಟ್ಟುಹಬ್ಬಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹುಟ್ಟುಹಬ್ಬ ಆಚರಣೆಗೆ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಯಾರಾರಯರನ್ನು ಆಹ್ವಾನಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ನಾನು ಮಾಧ್ಯಮದ ಮೂಲಕ ಬಿಜೆಪಿಯವರೂ ಸೇರಿದಂತೆ ರಾಜ್ಯದ ಜನತೆ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
5 ಲಕ್ಷ ಜನರನ್ನು ಸೇರಿಸಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ 75ನೇ ಜನ್ಮದಿನ ಆಚರಣೆ ಮಾಡುವ ಬಗ್ಗೆ ‘ಕನ್ನಡಪ್ರಭ’ ಜೂ.28ರಂದೇ ವಿಶೇಷ ವರದಿ ಪ್ರಕಟಿಸಿತ್ತು.
