Asianet Suvarna News Asianet Suvarna News

ಜಾತಿ ಗಣತಿ ವರದಿ ತಿಳಿಯದೇ ಕೆಲವರ ವಿರೋಧ: ಸಚಿವ ಶಿವರಾಜ ತಂಗಡಗಿ

ಜಾತಿ ಗಣತಿ ವರದಿ ಸಿದ್ಧಪಡಿಸಲು 168 ಕೊಟಿ ರು. ವೆಚ್ಚವಾಗಿದ್ದು ವರದಿ ಸಲ್ಲಿಕೆಯಾಗುವ ಸಮಯದಲ್ಲಿ ಕೆಲ ಸಮಸ್ಯೆ ಪ್ರಾರಂಭವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ವರದಿಯ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದು ಸರ್ಕಾರ ವರದಿ ಸ್ವೀಕರಿಸಲಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. 
 

Opposition by Some Without Knowing the Caste Census Report Says Minister Shivaraj Tangadagi gvd
Author
First Published Dec 11, 2023, 9:01 PM IST

ಬೆಂಗಳೂರು (ಡಿ.11): ಜಾತಿ ಗಣತಿ ವರದಿ ಸಿದ್ಧಪಡಿಸಲು 168 ಕೊಟಿ ರು. ವೆಚ್ಚವಾಗಿದ್ದು ವರದಿ ಸಲ್ಲಿಕೆಯಾಗುವ ಸಮಯದಲ್ಲಿ ಕೆಲ ಸಮಸ್ಯೆ ಪ್ರಾರಂಭವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ವರದಿಯ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದು ಸರ್ಕಾರ ವರದಿ ಸ್ವೀಕರಿಸಲಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಸರ್ಕಾರ ಇನ್ನೂ ಜಾತಿ ಗಣತಿ ವರದಿ ಸ್ವೀಕರಿಸಿಲ್ಲ. ವರದಿಯಲ್ಲಿ ಏನಿದೆ ಎಂದು ತಿಳಿಯದಿದ್ದರೂ ಕೆಲ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಯಾವ ಸಮುದಾಯದ ಸ್ಥಿತಿಗತಿ ಏನು ಎಂದು ತಿಳಿಯಬೇಕಾದರೆ ವರದಿಯ ಅಗತ್ಯವಿದೆ. ಆದ್ದರಿಂದ ಸರ್ಕಾರ ವರದಿ ಸ್ವೀಕರಿಸಲಿದೆ ಎಂದು ಸ್ಪಷ್ಟಪಡಿಸಿದರು.

ದೇವಾಂಗ ಸಮಾಜವು ನೇಕಾರಿಕೆಯನ್ನೇ ಪ್ರಮುಖ ಕಸುಬಾಗಿ ಮಾಡಿಕೊಂಡಿದ್ದು ಸರ್ಕಾರಕ್ಕೆ ನಿಮ್ಮ ಸಮಸ್ಯೆಗಳ ಅರಿವಿದೆ. ಹಾಸ್ಟೆಲ್‌ಗೆ ಅನುದಾನ ನೀಡಬೇಕು ಎಂದು ಸಂಘದವರು ಈ ಹಿಂದೆ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು. ಹಿಂದುಳಿದ ಸಮುದಾಯಗಳು ಆಗಾಗ ಸಭೆ ಸಮಾರಂಭಗಳನ್ನು ಹಮ್ಮಿಕೊಂಡು ಸರ್ಕಾರದ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ನಿಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ: ಸಚಿವ ಪರಮೇಶ್ವರ್‌

ಹಿಂದಿನ ಸರ್ಕಾರ ನಿಗಮಗಳ ನೋಂದಣಿಯನ್ನೇ ಮಾಡಿಲ್ಲ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 10 ನಿಗಮಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿ ನಿಗಮಗಳನ್ನು ಹಿಂದಿನ ಸರ್ಕಾರ ಕೇವಲ ಭಾಷಣ ಮಾಡಿ ಆದೇಶಿಸಿತೇ ಹೊರತು ಅವುಗಳ ನೋಂದಣಿ ಮಾಡಿರಲಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರ ಹೋದಲೆಲ್ಲಾ ಭಾಷಣದಲ್ಲಿ ನಿಗಮಗಳನ್ನು ಮಾಡುವ ಬಗ್ಗೆ ಘೋಷಣೆ ಮಾಡಿ ಆದೇಶ ಮಾಡಿತು. ಆದರೆ, ನಿಗಮಗಳ ನೋಂದಣಿ ಕೂಡ ಮಾಡಿಸಿರಲಿಲ್ಲ‌. ಇದೀಗ ಕಾಂಗ್ರೆಸ್‌ ಸರ್ಕಾರ ನಿಗಮಗಳ ನೋಂದಣಿ ಮಾಡಿಸಿದ್ದು, ನಿಗಮಗಳಿಗೆ ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಸರ್ಕಾರ ಬೀಳಿಸುತ್ತೇವೆ ಎಂಬುದು ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು: ಸಚಿವ ಎಚ್.ಕೆ.ಪಾಟೀಲ್

ಬೋರ್‌ವೆಲ್‌ ಮಂಜೂರಾತಿ ಆಗುತ್ತಿಲ್ಲ: ಇದೇ ವೇಳೆ ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಂದ ಸ್ವಾವಲಂಬಿ ಗಂಗಾಕಲ್ಯಾಣ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಬೋರ್‌ಗಳ ಮಂಜೂರಾತಿ ಆಗುತ್ತಿಲ್ಲ ಎಂದು ಪಕ್ಷಾತೀತವಾಗಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಾದ ಧೀರಜ್ ಮುನಿರಾಜು, ಪುಟ್ಟರಂಗಶೆಟ್ಟಿ, ಸಿದ್ದು ಸವದಿ ಸೇರಿದಂತೆ ಇತರ ಪ್ರಶ್ನೆ ಚರ್ಚೆಗೆ ಗ್ರಾಸವಾಯಿತು. ಇದಕ್ಕೆ ಉತ್ತರ ನೀಡಿದ ಸಚಿವ ಶಿವರಾಜ ತಂಗಡಗಿ, ದೇವರಾಜು ಅರಸು ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಅನುದಾನವಿದೆ. ಬೋರ್‌ವೆಲ್‌ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ಸಮುದಾಯಗಳ ನಿಗಮಗಳಿಗೆ ಅನುದಾನ ಇಲ್ಲ. ಆದರೂ ವಿವಿಧ ಸೌಲಭ್ಯಗಳ ಹಂಚಿಕೆಗೆ ಗುರಿ ನಿಗದಿಪಡಿಸಲಾಗಿದೆ ಎಂದರು.

Follow Us:
Download App:
  • android
  • ios