Asianet Suvarna News Asianet Suvarna News

ಎಲೆಕ್ಷನ್‌ನಲ್ಲಿ ಹೊಸಬರಿಗೆ ಅವಕಾಶ: ಡಿಕೆಶಿ ಸುಳಿವು

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 

Opportunity for Newcomers in Karnataka Assembly Elections 2023 Says DK Shivakumar grg
Author
First Published Dec 10, 2022, 1:00 AM IST

ಬೆಂಗಳೂರು(ಡಿ.10): ‘ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವು. ಉದಯಪುರ ಸಭೆಯ ನಿರ್ಣಗಳನ್ನು ಜಾರಿ ಮಾಡುವುದಾಗಿ ಖರ್ಗೆ ಅವರು ಪ್ರಾರಂಭದಲ್ಲೇ ಹೇಳಿದ್ದಾರೆ. ಎಲ್ಲವೂ ಒಂದೇ ದಿನ ಆಗದಿದ್ದರೂ ಉದಯಪುರ ಮಾರ್ಗಸೂಚಿ ಪ್ರಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. - ತನ್ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ-ವಿಚಾರ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದಾಗಿದೆ. ಹೊಸಬರಿಗೆ ಆದ್ಯತೆ ನೀಡುವ ಇರಾದೆಯನ್ನು ಮೊದಲೇ ಹೇಳಿದ್ದಾರೆ. ಆದರೆ ಇವೆಲ್ಲವೂ ರಾಜಕೀಯ ತಂತ್ರಗಾರಿಕೆಯಾಗಿದ್ದು, ಎಲ್ಲವೂ ಒಂದೇ ದಿನ ಆಗುವುದಿಲ್ಲ. ಉದಯಪುರ ಮಾರ್ಗಸೂಚಿಯನ್ನು ನಾವೆಲ್ಲರೂ ಪಾಲಿಸಬೇಕು. ಹೀಗಾಗಿ ಹಂತ-ಹಂತವಾಗಿ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಡಿ: ಡಿಕೆಶಿ ಖಡಕ್‌ ವಾರ್ನಿಂಗ್‌

ಒಂದೇ ದಿನ ಹೇಳಲಾಗಲ್ಲ:

ಹಾಗಾದರೆ ಉದಯಪುರ ನಿರ್ಣಯದಂತೆ ಹಿರಿಯರು ಹಾಗೂ ಕುಟುಂಬ ರಾಜಕಾರಣದಲ್ಲಿರುವವರ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ‘ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಉತ್ತರಿಸಲು ನಿರಾಕರಿಸಿದರು.

ಪಕ್ಷ ಇದ್ದರಷ್ಟೇ ಅಧಿಕಾರ:

ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ, ‘ಪಕ್ಷ ಇದ್ದರಷ್ಟೇ ಅಧಿಕಾರ ಅನುಭವಿಸಬಹುದು. ಚಿಕ್ಕಮಗಳೂರು ಸೇರಿ ಕೆಲವು ಕಡೆ ಈ ಸಮಸ್ಯೆಯಿದೆ. ಈಗಾಗಲೇ ಚಿಕ್ಕಮಗಳೂರಿಗೆ ಹೋಗಿ ಎಲ್ಲರ ಜತೆ ಮಾತನಾಡಿದ್ದೇನೆ. 350ಕ್ಕೂ ಹೆಚ್ಚು ನಿಗಮ-ಮಂಡಳಿ ಅಧ್ಯಕ್ಷ, ಸದಸ್ಯ ಸ್ಥಾನಗಳ ಅಧಿಕಾರ ಇದೆ. 75 ಪರಿಷತ್‌ ಸ್ಥಾನ, 16 ರಾಜ್ಯಸಭೆ ಸ್ಥಾನಗಳಿವೆ. ಅರ್ಹತೆಗೆ ತಕ್ಕಂತೆ ಎಲ್ಲರಿಗೂ ಅಧಿಕಾರ ನೀಡುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದಿಂದಲೇ ಕಾಂಗ್ರೆಸ್‌ ಶಾಸಕರಾಗಲು 1,350 ಜನ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ಗೆ ಹಲವು ಮಂದಿ ಬರುತ್ತಾರೆ

ಕಾಂಗ್ರೆಸ್‌ ತೊರೆದು ಹೋದ ವಲಸಿಗರು ಮಾತ್ರವಲ್ಲ, ವಲಸಿಗರಲ್ಲದವರೂ ಪಕ್ಷಕ್ಕೆ ಬರಲು ಕಾಯುತ್ತಿದ್ದಾರೆ. ಸಾಕಷ್ಟುಅಚ್ಚರಿ ಬೆಳವಣಿಗೆಗೆಳು ಕಾದಿವೆ. ಜೆಡಿಎಸ್‌ ಅಭ್ಯರ್ಥಿಯಾಗಿ ಸೋತಿದ್ದ 15 ಮಂದಿ ಕಾಂಗ್ರೆಸ್‌ ಸೇರಲು ಅರ್ಜಿ ಹಾಕಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios