ಬೆಂಗಳೂರು,[ಜ.15]:  ಇಬ್ಬರು ಪಕ್ಷೇತರ ಶಾಸಕರು ರಾಜ್ಯ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದು, ಬಿಜೆಪಿಯ ಮೊದಲ ಪ್ಲ್ಯಾನ್ ಸಕ್ಸಸ್ ಆಗಿದೆ.ಬಿಜೆಪಿ ಮೊದಲ ಹಂತದಲ್ಲಿ ಪಕ್ಷೇತರರ ಆಪರೇಷನ್ ಸಕ್ಸಸ್ ಹಿನ್ನೆಲೆ ಕಾಂಗ್ರೆಸ್  ಹೈಲರ್ಟ್ ಆಗಿದ್ದು, ತನ್ನೆಲ್ಲ ಶಾಸಕರನ್ನು ಒಟ್ಟಿಗೆ ಸೇರಿಸಿ ಸ್ಪಷ್ಟತೆ ಪಡೆಯಲು  ಸಿದ್ಧತೆ ನಡೆಸಿದೆ.

"

ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಬರಲ್ಲ, ಇನ್ನೊಂದು ಆಯ್ಕೆಯೂ ಇದೆ!

ನಾಳೆ [ಬುಧವಾರ] ಸಂಜೆಯೊಳಗೆ ಬೆಂಗಳೂರಿಗೆ ಬರುವಂತೆ ತನ್ನ ಶಾಸಕರಿಗೆ ಕಾಂಗ್ರೆಸ್ ಹಿರಿಯ ನಾಯಕರು ಬುಲಾವ್ ನೀಡಿದ್ದಾರೆ.  ಪ್ರತಿಯೊಬ್ಬ ಶಾಸಕರಿಗೂ ಫೋನ್ ಮಾಡಿ ಬೆಂಗಳೂರಿಗೆ ಕರೆಸಿಕೊಳ್ಳುವಂತೆ ಹಿರಿಯ ನಾಯಕರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚನೆ  ನೀಡಿದ್ದಾರೆ.ಕಾಂಗ್ರೆಸ್ ನ 80 ಶಾಸಕರಲ್ಲಿ 13 ಶಾಸಕರ ನಂಬರ್ ನಾಟ್ ರೀಚಬಲ್ ಆಗಿದ್ದು, ಕೂಡಲೇ ಅವರನ್ನು ಸಂಪರ್ಕಿ ಕರೆಸಿಕೊಳ್ಳುವಂತೆ ಸೂಚಿಸಿದ್ದಾರೆ.

"

ಸರ್ಕಾರಕ್ಕೆ ಪಕ್ಷೇತರರ ಬೆಂಬಲ ವಾಪಸ್: ಸಂ‘ಕ್ರಾಂತಿ’ ಸಕ್ಸಸ್!

ಬಿಜೆಪಿಯ ಆಪರೇಷನ್ ಭೀತಿಯಿಂದ ತಮ್ಮೆಲ್ಲ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರ ಪ್ಲ್ಯಾನ್ ಆಗಿದ್ದು, ನಾಳೆ ಕಾಂಗ್ರೆಸ್ ಸಭೆ ಬಳಿಕ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ. 

ಒಟ್ಟಿನಲ್ಲಿ ನಾಳೆ ನಡೆಯುವ ಕಾಂಗ್ರೆಸ್ ಸಭೆಯಲ್ಲಿ ಯಾವೆಲ್ಲ ಶಾಸಕರು ಭಾಗವಹಿಸುತ್ತಾರೆ? ಯಾರೆಲ್ಲ ಗೈರಾಗಲಿದ್ದಾರೆ ಎನ್ನುವುದ ಮಾತ್ರ ಕುತೂಹಲ ಕೆರಳಿಸಿದೆ.