ಬೆಂಗಳೂರು(ಜ. 15)  ಒಂದು ವೇಳೆ ರಾಜ್ಯ ಸರ್ಕಾರ ಪತನ ಆದರೆ ಮುಂದೆ ರಾಜ್ಯದಲ್ಲಿ ಏನಾಗುತ್ತದೆ ಎಂಬುದು ಅಷ್ಟೆ ಮಹತ್ವದ ಪ್ರಶ್ನೆ. ಏಕಾಏಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿಡುತ್ತದೆಯೇ? ಅಥವಾ ಬೇರೆ ಆಯ್ಕೆಗಳು ಇರುತ್ತವೆಯೇ?

ಹಂತ 1: ಪಕ್ಷೇತರ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ತಾವು ಹೇಳಿದಂತೆ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ ಪತ್ರ ನೀಡಬೇಕಾಗುತ್ತದೆ.

ಸರ್ಕಾರಕ್ಕೆ ಪಕ್ಷೇತರರ ಬೆಂಬಲ ವಾಪಸ್: ಸಂ‘ಕ್ರಾಂತಿ’ ಸಕ್ಸಸ್!

ಹಂತ 2: ಕಾಂಗ್ರೆಸ್ ಅತೃಪ್ತರು  ಶಾಸಕರು ಎಂದು ಕರೆಸಿಕೊಂಡಿರುವ 6 ಜನರನ್ನು ಮೊದಲ ಹಂತದಲ್ಲಿ ರಾಜೀನಾಮೆ ಕೊಡಿಸಿದರೆ ಸಂಖ್ಯಾ ಬಲ 120 ರಿಂದ 112 ಕ್ಕೆ ಇಳಿಯುತ್ತದೆ. ಇದನ್ನು ಇಟ್ಟುಕೊಂಡು ರಾಜ್ಯಪಾಲರು ಬಹುಮತ ಸಾಬೀತಿಗೆ ಸರ್ಕಾರವನ್ನು ಕೇಳಬಹುದು.

ಹಂತ 3: ಶಾಸಕರು ರಾಜೀನಾಮೆ ಸಲ್ಲಿಕೆಗೆ ಮುಂದಾದರೆ ಸ್ಪೀಕರ್ ಪಾತ್ರ ಸಹ ಮುಖ್ಯವಾಗುತ್ತದೆ. ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂಬುದನ್ನು ಸ್ಪೀಕರ್‌ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ.

ಜೆಡಿಎಸ್‌ ಶಾಸಕರಿಗೆ ದೇವೇಗೌಡರ ತುರ್ತು ಬುಲಾವ್! 

ಬಿಜೆಪಿಯ ನಾಯಕರು ಹರಸಾಹಸ ಮಾಡುತ್ತಿರುವ ಉದ್ದೇಶ ಸರ್ಕಾರ ಕೆಡುವುದೆ ಹೊರತು ಸದ್ಯಕ್ಕೆ ಹೊಸ ಸರ್ಕಾರ ರಚನೆ ಅಲ್ಲ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ದೋಸ್ತಿ ಸರ್ಕಾರದ ಬಹುಮತ ಕುಸಿದರೆ ಶಾಸಕರು ರಾಜೀನಾಮೆ ನೀಡಿರುವ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಾಗುತ್ತದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ರಾಜೀನಾಮೆ ನೀಡಿದ್ದರೆ ಆ ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತದೆ.  ಬಹುಮತ ಸಾಬೀತಿಗೆ ಈ ದೋಸ್ತಿ ಸರಕಾರ ವಿಫಲವಾದರೆ ಅಲ್ಲಿಯವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು.