ಮಾತು-ಸಾಧನೆ... ಅಂದು ಹೇಳಿದ್ದನ್ನು ಇಂದು ಸಾಧಿಸಿಯೇ ತೋರಿಸಿದ್ರು ಡಾ. ಮಂಜುನಾಥ್​: ವಿಡಿಯೋ ವೈರಲ್​

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ಡಾ.ಮಂಜುನಾಥ್​ ಅವರು ಕೆಲವು ದಿನಗಳ ಹಿಂದೆ ಹೇಳಿದ ಮಾತೊಂದು ವೈರಲ್​ ಆಗ್ತಿದೆ. ಏನದು?
 

Old video of Dr Manjunath who has won a victory from Bangalore rural constituency   gone viral suc

ರಾಜ್ಯದ ಉಪ ಮುಖ್ಯಮಂತ್ರಿಯ ಸಹೋದರ ಮತ್ತು ಮೂರು ಬಾರಿ ಕ್ಷೇತ್ರವನ್ನು ಗೆದ್ದು ಬೀಗಿದ್ದ ನಾಯಕನೊಬ್ಬನನ್ನು ಸೋಲಿಸುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಒಂದು ಪಕ್ಷದ ಭದ್ರಕೋಟೆಯೆಂದೇ ಬಿಂಬಿಸಲಾಗುವ ಯಾವುದೇ ಕ್ಷೇತ್ರಕ್ಕೆ ಲಗ್ಗೆ ಹಾಕಿ ಗೆಲ್ಲುವುದೂ ಅಲ್ಲದೇ, ಐತಿಹಾಸಿಕ ಮತಗಳಿಂದ ಗೆಲುವು ಸಾಧಿಸುವುದು ಕನಸಿನ ಮಾತೇ ಸರಿ. ಅದನ್ನು ಇಂದು ಮಾಡಿ ತೋರಿಸಿದ್ದಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ, ಹೃದ್ರೋಗ ತಜ್ಞ (cardiologist) ಡಾ.ಮಂಜುನಾಥ್​.

2009ರ ತನಕ ‘ಕನಕಪುರ ಲೋಕಸಭಾ ಕ್ಷೇತ್ರ’ ಎಂಬ ಹೆಸರು ಹೊಂದಿದ್ದ ಈ ಕ್ಷೇತ್ರವನ್ನು 2009 ಲೋಕಸಭೆ ಚುನಾವಣೆ ಸಮಯದಲ್ಲಿ ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ’ ಎಂದು ಮರು ನಾಮಕರಣ ಮಾಡಲಾಗಿತ್ತು. 2013ರ ಉಪಚುನಾವಣೆ ವೇಳೆ ಡಿ.ಕೆ. ಸುರೇಶ್ ಗೆದ್ದು ಬೀಗಿದರು. ಈ ಮೂಲಕ 2014 & 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಸತತವಾಗಿ 3 ಬಾರಿ ಡಿ.ಕೆ. ಸುರೇಶ್ ಸಂಸದರಾಗಿ ಆಯ್ಕೆ ಆಗಿದ್ದರು. ಆ ಕ್ಷೇತ್ರದಲ್ಲೀಗ ಡಾ. ಮಂಜುನಾಥ್​ ಅವರು ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ದಿನಗಳ ಹಿಂದಷ್ಟೇ ಅವರು ರ್ಯಾಪಿಡ್​ ರಶ್ಮಿ ಷೋನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿರುವ ಹೇಳಿಕೆಯೊಂದು ಸಕತ್​ ವೈರಲ್​ ಆಗುತ್ತಿದೆ.

ಸೀತಾರಾಮ ಪ್ರಿಯಾ-ಅಶೋಕ್​ ಭರ್ಜರಿ ಸ್ಟೆಪ್​ ಹಾಕಿದ್ರೆ ಅಭಿಮಾನಿಗಳು ಹೀಗೆ ಹೇಳೋದಾ?

ರಶ್ಮಿ ಅವರು, ನಿಮ್ಮನ್ನು ಡಾಕ್ಟರೇ ಎಂದು ಮಾತನಾಡಿಸಲಾ, ಸರ್​ ಎಂದು ಮಾತನಾಡಿಸಲಾ ಎಂದು ಕೇಳಿದರು. ಆಗ ಮಂಜುನಾಥ್​ ಅವರು ನನಗೆ ಮಂಜುನಾಥ್​ ಅಂತ ಕರೆದರೆ ಸಾಕು. ಕೆಲವರು ಎಷ್ಟು ಸಂಕುಚಿತ ಮನೋಭಾವದವರು ಇರುತ್ತಾರೆ ಎಂದರೆ, ಡಾಕ್ಟರ್​ ಎಂದು ಬರೆದಿಲ್ಲ ಎಂದು ಇನ್​ವಿಟೇಷನ್​ ತೆಗೆದುಕೊಳ್ಳದವರೂ ಇದ್ದಾರೆ. ಆದರೆ ನಾನು ಹಾಗಲ್ಲ. ಅದಕ್ಕಾಗಿಯೇ ಆಸ್ಪತ್ರೆಯಲ್ಲಿ ಕೆಲವರು ನನ್ನನ್ನು ಮಂಜುನಾಥ್​ ಎಂದೇ ನೇರವಾಗಿ ಕರೆಯುತ್ತಾರೆ. ಅದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುವುದೂ ಇದೆ. ಅದಕ್ಕೆ ನಾನು ನೋಡಿ ಹೆಸರಿನಲ್ಲಿ ಏನೂ ಇರುವುದಿಲ್ಲ, ನಾವು ಕೆಲಸ ಮಾಡಿದ್ದರಲ್ಲಿ ಇರುತ್ತದೆ. ಕೆಲಸವೇ ಹೆಸರಾಗಬೇಕು. ಸಾಧನೆ ಮಾತನಾಡಬೇಕೇ ಹೊರತು, ಮಾತುಗಳು ಸಾಧನೆಯಾಗಬಾರದು ಎಂದಿದ್ದರು. ಅವರ ಸಾಧನೆ ಇಂದು ಮಾತನಾಡಿದ್ದು, ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೂ ಅವರು ಮಾತನಾಡಿದ್ದಾರೆ.  ಕಳೆದ 40 ವರ್ಷಗಳಿಂದ  ಲಕ್ಷಾಂತರ ಜನಕ್ಕೆ ಚಿಕಿತ್ಸೆ ಒದಗಿಸಿದ್ದು ನೆರವಿಗೆ ಬಂದಿದೆ. ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ತನ್ನಿಂದ ಚಿಕಿತ್ಸೆ ಪಡೆದ 15-20 ಜನ ಸಿಗುತ್ತಿದ್ದರು, ಅವರಲ್ಲಿ ಡಾಕ್ಟರ್ ಅನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಯಿತು ಎಂದಿದ್ದಾರೆ.  ಕೆಲವು ಊರುಗಳಲ್ಲಿ ಜನ ನಾವು ಇದುವರೆಗೆ ನಿದ್ರೆಯಲ್ಲಿದ್ದೆವು ಈಗ ಜಾಗೃತರಾಗಿದ್ದೇವೆ ಅಂತ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ ಎಂದಿದ್ದಾರೆ. ಈ ಮೂಲಕ ತಮ್ಮ ಕೆಲಸ ಸಾಧನೆಯಾಗಿರುವ ಬಗ್ಗೆ ಡಾ.ಮಂಜುನಾಥ್​ ತಿಳಿಸಿದ್ದಾರೆ. 

ಹೀರೋಯಿನ್​ ಆದ್ಮೇಲೆ ಎಷ್ಟೊಂದು ಬದಲಾದ ಹಿಟ್ಲರ್​ ಕಲ್ಯಾಣದ ಪೆದ್ದು ಲೀಲಾ! ಸೋ ಕ್ಯೂಟ್​ ಎಂದ ಫ್ಯಾನ್ಸ್​

Latest Videos
Follow Us:
Download App:
  • android
  • ios