ಮೋದಿ ಸೆಕ್ರೆಟರಿ ಮಗಳು ಅಂತ ಹೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ಸುಂದ್ರಿ! ಈಕೆ ಕಥೆ ಕೇಳಿ...

ಪ್ರಧಾನಿ ನರೇಂದ್ರ  ಮೋದಿಯವರ ಪ್ರಧಾನ ಕಾರ್ಯದರ್ಶಿಯ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಪಂಗನಾಮ ಹಾಕಿದ ಜೋಡಿ ಸಿಕ್ಕಿಬಿದ್ದಿದೆ. ಏನಿದು ವಿಷ್ಯ? 
 

Odisha Couple Pose As Daughter Son In Law Of Prime Ministers Principal Secretary Arrested suc

ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಅವರ ಪುತ್ರಿ ಮತ್ತು ಅಳಿಯ ಎಂದು ಸೋಗು ಹಾಕಿಕೊಂಡು ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಜೋಡಿಯನ್ನು  ಪೊಲೀಸರು ಬಂಧಿಸಿದ್ದಾರೆ.  ಹಲವು ವರ್ಷಗಳಿಂದ ಹಲವರನ್ನು ಸುಲಭದಲ್ಲಿ ವಂಚಿಸಿರುವ ಈ ಜೋಡಿಯ ಮೋಸ ಈಗ ಬಯಲಾಗಿದೆ.    38 ವರ್ಷದ ಹನ್ಸಿತಾ ಅಭಿಲಿಪ್ಸಾ ಮತ್ತು  ಆಕೆಯ ಸಹಚರ ಅನಿಲ್ ಕುಮಾರ್ ಮೊಹಂತಿ ತಾವು ಮಿಶ್ರಾ ಅವರು ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು. ಇಂಥ ವಂಚಕರ ಬಲೆಗೆ ಶ್ರೀಮಂತರು ಸುಲಭದಲ್ಲಿ ಬೀಳುವುದು ಹೊಸ ವಿಷಯವೇನಲ್ಲ. ಒಂದಿಷ್ಟು ಪ್ರಭಾವಿಗಳು ಸಿಕ್ಕರೆ ಸಾಕು, ದುಡ್ಡು ಕೊಟ್ಟು ಏನು ಬೇಕಾದರೂ ಕೆಲಸ ಮಾಡಿಕೊಳ್ಳಬಹುದು ಎಂದು ಕಾಯುತ್ತಾ ಇರುವ ದೊಡ್ಡ ದೊಡ್ಡ ಕುಳಗಳು ಇದ್ದೇ ಇರುತ್ತಾರೆ. ಅಂಥ ಮಿಕಗಳನ್ನೇ ಇಂಥ ಮೋಸಗಾರರು ಸುಲಭದಲ್ಲಿ ಬಲೆಗೆ ಬೀಳಿಸಿಕೊಳ್ಳುತ್ತಾರೆ.

ಈಗಲೂ ಆದದ್ದು ಅದೇ ರೀತಿ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಎಂದರೆ ಸುಲಭದಲ್ಲಿ ಉನ್ನತ ಮಟ್ಟದ ಕಾಂಟ್ಯಾಕ್ಟ್​ ಇರುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಈ ಖದೀಮರು. ತಾವು ಮಿಶ್ರಾ ಅವರ ಮಗಳು-ಅಳಿಯ ಎಂದು ಹೇಳಿಕೊಂಡು ದೊಡ್ಡ ದೊಡ್ಡ ಟೆಂಡರ್​ ಕೊಡಿಸುವುದಾಗಿ  ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಗೆ ವಂಚಿಸಿದ್ದಾರೆ. ತಮ್ಮ ಕೆಲಸ ಸುಲಭವಾಯಿತು ಎಂದು ಬಂದು ಈ ಎಲ್ಲಾ ಸಿರಿವಂತರು ಪಂಗನಾಮ ಹಾಕಿಸಿಕೊಂಡಿದ್ದಾರೆ. ಕೊನೆಗೆ ಕೆಲವರಿಗೆ ತಾವು ಹಳ್ಳಕ್ಕೆ ಬಿದ್ದಿರುವುದು ತಿಳಿಯುತ್ತಲೇ ಪೊಲೀಸರಲ್ಲಿ ದೂರಿದ್ದಾರೆ. 

450 ವರ್ಷಗಳ ಹಿಂದೆಯೇ ಮೋದಿ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್‌ 2025ರ ಬಗ್ಗೆ ಶಾಕಿಂಗ್‌ ಭವಿಷ್ಯ!

 ಭುವನೇಶ್ವರದ ಹೆಚ್ಚುವರಿ ಡಿಸಿಪಿ  ಸ್ವರಾಜ್ ದೇಬಾಟಾ ಅವರು ದೂರಿನ ಆಧಾರದ ಮೇಲೆ ತನಿಖೆ ನಡೆಸಿ, ಈ ಜೋಡಿಯನ್ನು ಬಂಧಿಸಿದೆ. ಇವರ ನಿವಾಸದಿಂದ ಪೊಲೀಸರು ಹಲವು ಛಾಯಾಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ಇರುವಂಥ ಭಾವಚಿತ್ರಗಳನ್ನು ತಯಾರಿಸಿಕೊಂಡಿರುವ ಈ ಖದೀಮರು, ಅದನ್ನೇ ಶ್ರೀಮಂತ ವ್ಯಕ್ತಿಗಳಿಗೆ ತೋರಿಸಿ ಆಮಿಷ ಒಡ್ಡಿದ್ದಾರೆ. ದುಡ್ಡು ಚೆಲ್ಲಿದರೆ ಇನ್ನಷ್ಟು ಶ್ರೀಮಂತರಾಗಬಹುದು ಎಂದುಕೊಂಡ ದೊಡ್ಡವರು, ತಾವು ಮೋಸ ಹೋಗುತ್ತಿದ್ದೇವೆ ಎನ್ನುವ ಎಳ್ಳಷ್ಟೂ ಸಂದೇಹ ಪಡದೇ ಬಲೆಗೆ ಬಿದ್ದಿದ್ದಾರೆ. 

ಇವರು ಅರೆಸ್ಟ್​ ಆಗುತ್ತಿದ್ದಂತೆಯೇ, ಉಳಿದ ಉದ್ಯಮಿಗಳಿಗೂ ಢವಢವ ಶುರುವಾಗಿದೆ. ಇದಾಗಲೇ ಕೋಟಿ ಕೋಟಿ ಹಣ ಕೊಟ್ಟು ತಾವೂ ಹಳ್ಳಕ್ಕೆ ಬಿದ್ದಿರುವುದು ತಿಳಿದಿದೆ. ಈ ಜೋಡಿ,  ಪ್ರಭಾವಿ ಅಧಿಕಾರಿಗಳೊಂದಿಗೆ ಛಾಯಾಚಿತ್ರಗಳನ್ನು ಮಾರ್ಫ್​  ಮಾಡಿಕೊಂಡಿರುವುದು ತಿಳಿದಿದೆ. ಅಂದಹಾಗೆ,  ಹನ್ಸಿತಾ ಕಂಧಮಾಲ್ ಜಿಲ್ಲೆಯ ನಿವಾಸಿಯಾಗಿದ್ದು, ಮೊಹಾಂತಿ ಅವರು ಮೂಲಸೌಕರ್ಯ ಸಂಸ್ಥೆಯನ್ನು ಹೊಂದಿರುವ ಸಣ್ಣ ಉದ್ಯಮಿಯಾಗಿದ್ದಾನೆ.  ಗಣಿ ಮಾಲೀಕರ ದೂರಿನ ಮೇರೆಗೆ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. 

ಸೈಫ್‌ ಅಲಿ ಖಾನ್‌ ಕುಟುಂಬದಿಂದ ಪ್ರಧಾನಿ ಭೇಟಿ: ಮಕ್ಕಳಿಗಾಗಿ ಆಟೋಗ್ರಾಫ್‌, ಅಸಲಿ ಉದ್ದೇಶ ಇಲ್ಲಿದೆ...

Latest Videos
Follow Us:
Download App:
  • android
  • ios