ಸಿಎಂ ಜನಪ್ರಿಯತೆ ಹೆಚ್ಚಾದಂತೆ ಅಡೆತಡೆ ಸಹಜ: ಎಚ್.ಕೆ ಪಾಟೀಲ್

ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ ಎಂಬುದು ಬಿಜೆಪಿ ಅವರು ಒತ್ತಾಯ ಮಾಡುತ್ತಿದ್ದಾರೆ. ಅದರಂತೆ ಚುನಾವಣಾ ಬಾಂಡ್ ಹಗರಣದಲ್ಲಿ ಪ್ರಧಾನಿಗಳೂ ರಾಜೀನಾಮೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ್‌ 

Obstacles are natural as CM's popularity increases Says Minister HK Patil grg

ಹುಬ್ಬಳ್ಳಿ(ನ.07):  ಮುಖ್ಯಮಂತ್ರಿಗಳ ಜನಪ್ರಿಯತೆ ಹೆಚ್ಚಾದಂತೆ ಅಡ್ಡಿ-ಆತಂಕಗಳೂ ಹೆಚ್ಚಾಗಿವೆ. ಮುಡಾ ಹಗರಣದ ವಿಚಾರಣೆಗೆ ಹಾಜರಾಗಿದ್ದಾರೆ. ಯಾವ ಸಮಸ್ಯೆಗಳು ಆಗದಂತೆ ಆರೋಪದಿಂದ ಹೊರ ಬರಲಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ ಎಂಬುದು ಬಿಜೆಪಿ ಅವರು ಒತ್ತಾಯ ಮಾಡುತ್ತಿದ್ದಾರೆ. ಅದರಂತೆ ಚುನಾವಣಾ ಬಾಂಡ್ ಹಗರಣದಲ್ಲಿ ಪ್ರಧಾನಿಗಳೂ ರಾಜೀನಾಮೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು. 

ಕೇಂದ್ರ ಅನುದಾನ ನೀಡಿರುವ ಬಗ್ಗೆ ಸಷ್ಟಪಡಿಸಿದರೆ ನಾನು ರಾಜಕೀಯವನ್ನೇ ಬಿಡ್ತೇನೆ: ಜೋಶಿಗೆ ಸಿದ್ದು ಸವಾಲು!

ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಬಿಜೆಪಿಗರಿಗೆ ಶಂಕೆ ಯಾಕೆ ವ್ಯಕ್ತವಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸಾವಿರಾರು ಕೋಟಿ ರು. ಗಣಿ ಹಗರಣ ತನಿಖೆ ನಡೆಸಿದ್ದು ನಮ್ಮ ಲೋಕಾಯುಕ್ತ ಅಲ್ಲವೆ? ಲೋಕಾಯುಕ್ತ ಅಧಿಕಾರಿಗಳ ಮೇಲೆ ಸಿಎಂ ಪ್ರಭಾವ ಬೀರುತ್ತಾರೆ ಎನ್ನುವುದಾದರೆ ಕೇಂದ್ರ ಸಚಿವರ ವಿರುದ್ದದ ಹಗರಣದ ಬಗ್ಗೆ ಯಾರು ತನಿಖೆ ನಡೆಸಬೇಕು ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios