MLC Election: 'ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ'
* ಜೂ. 13 ರಂದು ನಡೆಯುವ ವಾಯವ್ಯ ಶಿಕ್ಷಕರ ಮತಕ್ಷೆತ್ರದ ಚುನಾವಣೆ
* ಈ ಬಾರಿ ಅನುಕಂಪ ಹಾಗೂ ಹೋರಾಟಗಾರ ಎಂಬ ಕಾರಣಕ್ಕೆ ನನ್ನ ಗೆಲುವು ಖಚಿತ
* ಎದುರಾಳಿಗಳಿಗೆ ಸೋಲು ಖಚಿತ ಎಂಬ ಭಾವನೆ ಮೂಡಿದೆ
ಬೆಳಗಾವಿ(ಜೂ.01): ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ವಿಧಾನಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಎನ್.ವಿ.ಬನ್ನೂರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ಮುಜುಗರ ತರಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಜೂ. 13 ರಂದು ನಡೆಯುವ ವಾಯವ್ಯ ಶಿಕ್ಷಕರ ಮತಕ್ಷೆತ್ರದ ಚುನಾವಣೆಗೆ ನಾನು ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವೆ. ಈ ಬಾರಿ ಅನುಕಂಪ ಹಾಗೂ ಹೋರಾಟಗಾರ ಎಂಬ ಕಾರಣಕ್ಕೆ ನನ್ನ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
'ನಿರಾಣಿ ಕುಟುಂಬದ 3ನೇ ವ್ಯಕ್ತಿ ರಾಜಕೀಯಕ್ಕೆ ಬರಲ್ಲ'
ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆ ಮಾಡಿರುವುದನ್ನು ಹಿಂಪಡೆಯಬೇಕೆಂದು ನನಗೆ ಒತ್ತಾಯಿಸಿದರು. ಆದರೆ ಅವರಿಗೆ ನನ್ನ ಹೆಸರು ದೆಹಲಿಗೆ ಹೋದ ಮೇಲೆ ಹೆಸರು ಬದಲಾವಣೆಯಾಗಿದ್ದು ಹೇಗೆ ಎಂದು ಅವರಿಗೆ ಕೇಳಿದೆ. ಆದರೆ ಈಗ ಅವರ ಬಳಿ ಉತ್ತರ ಇರಲಿಲ್ಲ. ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಮೌಖಿಕವಾಗಿ ನನಗೆ ಚುನಾವಣಾ ಪ್ರಚಾರ ನಡೆಸುವುಂತೆ ಸೂಚನೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಚ್ ತಪ್ಪಿಸಿದರು. ಕಾಂಗ್ರೆಸ್ ನವರು ಯಾವ ಆಧಾರದ ಮೇಲೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಅಲ್ಲ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಯದ ವ್ಯಕ್ತಿಗೆ ಟಿಕೆಚ್ ಘೋಷಣೆ ಮಾಡಿದ್ದು ಎಷ್ಟುಸರಿ ಎಂದರು.
ಟಿಕೆಟ್ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ನನಗೆ ಅನ್ಯಾಯ ಮಾಡಿದೆ. ಹಾಗಾಗಿ, ಶಿಕ್ಷಕರ ಒತ್ತಾಸೆ ಮೇರೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಕಳೆದ ಬಾರಿ ನನಗೆ ಕಾಂಗ್ರೆಸ್ ಚುನಾವಣೆ 14 ದಿನಗಳ ಮುನ್ನ ಟಿಕೆಟ್ ನೀಡಿತ್ತು. ಆಗ ನನಗೆ ಕಾಂಗ್ರೆಸ್ ನಾಯಕರು ನನ್ನ ಪರವಾಗಿ ಪ್ರಚಾರ ಕೈಗೊಳ್ಳಲಿಲ್ಲ. ಸಹಕಾರವನ್ನೂ ನೀಡಲಿಲ್ಲ. ನನಗೆ ವೈಯಕ್ತಿಕವಾಗಿ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡಿದ್ದರು. ಕಾಂಗ್ರೆಸ್‌ನಿಂದ ನನಗೆ ಯಾವುದೇ ಲಾಭವಾಗಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ್ನೇ ನಪುಂಸಕವನ್ನಾಗಿ ಮಾಡಿದ ದೇಶದ ಜನ: ಈರಣ್ಣಾ ಕಡಾಡಿ
ಶಿಕ್ಷಕರ ಕಾಲ್ಪನಿಕ ವೇತನ, ವರ್ಗಾವಣೆ ಮುಂತಾದ ಸಮಸ್ಯೆಗಳ ಬಗ್ಗೆ ನಾನು 3 ದಶಕಗಳಿಂದ ಹೋರಾಟ ನಡೆಸುತ್ತಾ ಇದ್ದ ಶಿಕ್ಷಕರಿಗೆ ನನ್ನ ಹೋರಾಟಗಳ ಅರಿವಿದೆ. ಹೀಗಾಗಿ ಈ ಬಾರಿ ನನಗೆ ಅತ್ಯಂತ ಹೆಚ್ಚಿನ ಮತಗಳಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದು ಬನ್ನೂರ ಹೇಳಿದರು.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಅನುಭವಿಸಿದೆ. ಈ ಬಗ್ಗೆ ಶಿಕ್ಷಕರಿಗೆ ನೋವಿದೆ. ಆದ್ದರಿಂದ ಅವರು ಈ ಬಾರಿ ನನಗೆ ಬೆಂಬಲ ನೀಡಲಿದ್ದಾರೆ. ಶಿಕ್ಷಕರ ಅನುಕಂಪವೇ ನನ್ನ ಪಾಲಿಗೆ ಶ್ರೀರಕ್ಷೆಯಾಗಿದೆ. ಚುನಾವಣಾ ಕಣ ನನ್ನ ಪರವಾಗಿ ಪರಿವರ್ತಿತ ಗೊಳ್ಳುತ್ತಿದ್ದು ಇತರ ಅಭ್ಯರ್ಥಿಗಳು ನನಗೆ ಸಿಗುತ್ತಿರುವ ಬೆಂಬಲ ನೊಡಿ ಬೆಚ್ಚಿಬಿದ್ದಿದ್ದಾರೆ. ಎದುರಾಳಿಗಳಿಗೆ ಸೋಲು ಖಚಿತ ಎಂಬ ಭಾವನೆ ಮೂಡಿದೆ ಎಂದು ಅವರು ಹೇಳಿದರು.