ಆಪ್‌ನಿಂದಲೇ ಆತಂಕ, ನಾಮಪತ್ರ ಹಿಂಪಡೆದ ಅಭ್ಯರ್ಥಿ ಜರಿವಾಲ ಉತ್ತರಕ್ಕೆ ಕೇಜ್ರಿವಾಲ್ ಕಂಗಾಲು!
ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಹೈಡ್ರಾಮವೇ ನಡೆದು ಹೋಗಿದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕಾಂಚನ್ ಜರಿವಾಲರನ್ನು ಬಿಜೆಪಿ ಅಪಹರಿಸಿದೆ ಎಂದು ಕೇಜ್ರಿವಾಲ್ ಆರೋಪದ ಬೆನ್ನಲ್ಲೇ ಜರಿವಾಲ ಪ್ರತ್ಯಕ್ಷಗೊಂಡು ನಾಮಪತ್ರ ವಾಪಸ್ ಪಡೆದಿದ್ದಾರೆ. ಇಷ್ಟೇ ಅಲ್ಲ ಕೇಜ್ರಿವಾಲ್ ಆರೋಪಕ್ಕೆ ಉತ್ತರ ನೀಡಿದ್ದಾರೆ.
ಗುಜರಾತ್(ನ.16): ಗುಜರಾತ್ ಚುನಾವಣಾ ಕಣ ರಂಗೇರಿದೆ. ಆಮ್ ಆದ್ಮಿಯ ಪೂರ್ವ ಸೂರತ್ ಅಭ್ಯರ್ಥಿ ಕಾಂಚನ್ ಜರಿವಾಲರನ್ನು ಬಿಜೆಪಿ ಅಪಹರಿಸಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ನಾಯಕರು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ದಿಢೀರ್ ಪ್ರತ್ಯಕ್ಷಗೊಂಡ ಕಾಂಚನ್ ಜರಿವಾಲ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಷ್ಟೇ ಅಲ್ಲ ಕೇಜ್ರಿವಾಲ್ ಆರೋಪಕ್ಕೂ ಉತ್ತರ ನೀಡಿದ್ದಾರೆ. ತನಗೆ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಿಂದ ಬೆದರಿಕೆ ಇದೆ. ಆಪ್ ಕಾರ್ಯಕರ್ತರು ಹಣ ಕೇಳುತ್ತಿದ್ದಾರೆ. ಚುನಾವಣೆಗೆ 70 ಲಕ್ಷ ರೂಪಾಯಿಂದ 1 ಕೋಟಿ ರೂಪಾಯಿ ಖರ್ಚು ಮಾಡಲು ನನ್ನ ಬಳಿ ಹಣವಿಲ್ಲ ಎಂದು ಕಾಂಚನ್ ಜರಿವಾಲ್ ಹೇಳಿದ್ದಾರೆ. ಈ ಕಾರಣಕ್ಕೆ ನಾಮಪತ್ರ ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ. ಕಾಂಚನ್ ಜರಿವಾಲ ಉತ್ತರಿಂದ ಇದೀಗ ಕೇಜ್ರಿವಾಲ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯಿಂದ ತೀವ್ರ ಒತ್ತಡ ಹಾಕಲಾಗುತ್ತಿದೆ. ಪಕ್ಷದ ಹಲವರು ತೀವ್ರ ಕಿರುಕುಳು ನೀಡುತ್ತಿದ್ದಾರೆ. ನನ್ನ ಪುತ್ರನ ಗೆಳೆಯರ ಜೊತೆ ಹೋಗಿದ್ದೆ. ಈ ಗುಂಪಿನಲ್ಲಿ ಯಾರೂ ಬಿಜೆಪಿ ಪಕ್ಷದವರು ಇರಲಿಲ್ಲ. 5 ರಿಂದ 6 ದಿನಗಳಲ್ಲಿ ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ಕಾಂಚನ್ ಜರಿವಾಲ ಹೇಳಿದ್ದಾರೆ
ದಿಲ್ಲಿ ಪಾಲಿಕೆ ಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ಟವರ್ ಏರಿದ ಆಪ್ ಮುಖಂಡ..!
ಗುಜರಾತ್ ವಿರೋಧಿ, ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ಯಾರು ಮತ ಹಾಕುವುದಿಲ್ಲ. ಕ್ಷೇತ್ರದಲ್ಲಿ ಮತದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೋಟಿ ಕೋಟಿ ಹಣ ಸುರಿದು ಚುನಾವಣೆ ಗೆಲ್ಲುವ ತಾಖತ್ತು ನನ್ನಲ್ಲಿ ಇಲ್ಲ ಎಂದು ಕಾಂಚನ್ ಜರಿವಾಲ ಹೇಳಿದ್ದಾರೆ. ಕಾಂಚನ್ ಜರಿವಾಲ ಹೇಳಿಕೆಯಿಂದ ಆಮ್ ಆದ್ಮಿ ನಾಯಕರಿಗೆ ಮುಖಭಂಗವಾಗಿದೆ.
ಕಾಂಚನ್ ಜರಿವಾಲ ನಾಪತ್ತೆಯಾಗಿರುವದರ ಹಿಂದೆ ಬಿಜೆಪಿ ನೇರ ಕೈವಾಡವಿದೆ ಎಂದು ಆಮ್ ಆದ್ಮಿ ನಾಯಕರು ಆರೋಪಿಸಿದ್ದರು. ಮೊದಲು ಕಾಂಚನ್ ಜರಿವಾಲ್ ನಾಮಪತ್ರ ಸಲ್ಲಿಕೆಗೆ ಬಿಜೆಪಿ ಅಡ್ಡಿಪಡಿಸಿತ್ತು. ಇದೀಗ ಅಪಹರಣ ಮಾಡಿ ನಾಮಪತ್ರ ವಾಪಸ್ ತೆಗೆಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಆಪ್ ಹೇಳಿದೆ.
ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!
ಗುಜರಾತ್: ಮೊದಲ ಹಂತದ ಚುನಾವಣೆಗೆ 1362 ಜನರ ಸ್ಪರ್ಧೆ
ಗುಜರಾತ್ ವಿಧಾನಸಭೆಯ 89 ಸ್ಥಾನಗಳಿಗೆ ಡಿ.1ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ 1362 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿತ್ತು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭೂಪೇಂದ್ರ ಪಟೇಲ್, ಆಪ್‌ನ ಸಿಎಂ ಅಭ್ಯರ್ಥಿ ಇಸುದನ್ ಗಢ್ವಿ ಮೊದಲ ಸುತ್ತಿನಲ್ಲಿ ಕಣಕ್ಕೆ ಇಳಿದ ಪ್ರಮುಖರು. ಡಿ.5ರಂದು ರಾಜ್ಯದ 93 ಸ್ಥಾನಗಳಿಗೆ 2ನೇ ಸುತ್ತಿನ ಚುನಾವಣೆ ನಡೆಯಲಿದೆ. ಫಲಿತಾಂಶ ಡಿ.8ಕ್ಕೆ ಪ್ರಕಟವಾಗಲಿದೆ. 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನ.17 ಕೊನೆಯ ದಿನ.