Asianet Suvarna News Asianet Suvarna News

ಡಿಕೆಶಿ ಭೇಟಿಯಾದ ಲಿಂಗಾಯತ, ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು

* ಡಿ.ಕೆ. ಶಿವಕುಮಾರ್ ಅವರನ್ನು ಉತ್ತರ ಕರ್ನಾಟಕದ ಸ್ವಾಮೀಜಿಗಳು
* ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು ಭೇಟಿ
* ಈ ವೇಳೆ ಡಿಕೆ ಶಿವಕುಮಾರ್ ಸನ್ಮಾನಿಸಿದ ಸ್ವಾಮೀಜಿಗಳು

North Karnataka lingayat and Obc Total 25 Mutt Seer Meets DK Shivakumar rbj
Author
Bengaluru, First Published Jun 28, 2021, 8:08 PM IST

ಬೆಂಗಳೂರು, (ಜೂನ್.28): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಉತ್ತರ ಕರ್ನಾಟಕದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು ಭೇಟಿ ಮಾಡಿದರು.

ಇಂದು (ಸೋಮವಾರ) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಗದಗದ ಬಾಲೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ 25 ಮಠಗಳ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

‘ನೆಕ್ಸ್ಟ್‌ಸಿಎಂ’ ಎಂದು ಅಭಿಮಾನಿಗಳ ಜೈಕಾರ

ಈ ವೇಳೆ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಡಿಕೆ ಶಿವಕುಮಾರ್ ಅವರನ್ನು ಶ್ಲಾಘಿಸಿ ಸನ್ಮಾನಿಸಿ ಆಶೀರ್ವದಿಸಿದರು. 

ಹಡಪದ ಗುರುಪೀಠ, ರೆಡ್ಡಿ ಗುರುಪೀಠ, ಬಳ್ಳಾರಿ ಕಲ್ಯಾಣಮಠ, ಭೋವಿ ಗುರುಪೀಠ, ಈಡಿಗ ಗುರುಪೀಠ, ಕಡಕೋಳ ಮಠ, ಅಕ್ಕಲಕೂಟ, ಗಡಿಗೌಡಗಾಂವ, ಉಗುರಗೋಳ, ಬೊಮ್ಮನಹಳ್ಳಿ ಮಠ, ಗೋಟೂರ ಮಠ, ಅಗಡಿ ಮಠ, ಸದಾಶಿವಪೇಟೆ ಮತ್ತಿತರ ಮಠಗಳು ಶ್ರೀಗಳು ಉಪಸ್ಥಿತರಿದ್ದರು.

ಆದ್ರೆ, ದಿಢೀರ್ ಅಂತ ಸ್ವಾಮೀಜಿಗಳು ಏಕೆ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದರು ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಆದ್ರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯದ ಬೆಳವಣಿಗೆಯಲ್ಲಿ ಈ ಭೇಟಿ ಭಾರೀ ಕುತೂಹಲ ಮೂಡಿಸಿದೆ.
North Karnataka lingayat and Obc Total 25 Mutt Seer Meets DK Shivakumar rbj

Follow Us:
Download App:
  • android
  • ios