‘ನೆಕ್ಸ್ಟ್ಸಿಎಂ’ ಎಂದು ಅಭಿಮಾನಿಗಳ ಜೈಕಾರ
- ಕೊರೋನಾಗೆ ಬಲಿಯಾದ ಕೈ ಮುಖಂಡನ ಮನೆಗೆ ಡಿಕೆಶಿ ಭೇಟಿ
- ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಅಭಿಮಾನಿಗಳು
- ನಾನಾ ಚರ್ಚೆಗೆ ಕಾರಣವಾದ ಮುಂದಿನ ಸಿಎಂ ಘೋಷಣೆ
ಕೊಳ್ಳೇಗಾಲ (ಜೂ.28): ಕೊರೋನಾಗೆ ಬಲಿಯಾದ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಇಕ್ಕಡಹಳ್ಳಿಯ ಕೆಂಪಯ್ಯ ಅವರ ಮನೆಗೆ ಶಿವಕುಮಾರ್ ಭೇಟಿ ನೀಡಿದರು.
ಕುಟುಂಬಕ್ಕೆ ಸಾಂತ್ವಾನ ಹೇಳಿ ಹಿಂತಿರುಗುವ ವೇಳೆ ಅಭಿಮಾನಿಗಳು ‘ನೆಕ್ಟ್ ಸಿಎಂ, ನೆಕ್ಟ್ ಸಿಎಂ’(ಮುಂದಿನ ಸಿಎಂ, ಮುಂದಿನ ಸಿಎಂ) ಎಂದು ಜೈಕಾರ ಕೂಗಿದರು.
ಈ ಹಿಂದೆ ಸಿದ್ದರಾಮಯ್ಯ, ಬಳಿಕ ಪರಮೇಶ್ವರ್ ಹಾಗೂ ಈಗ ಶಿವಕುಮಾರ್ ಅವರನ್ನು ಮುಂದಿನ ಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಇಳಿದ ಕೊರೋನಾ ಕೇಸ್: ಪಾಸಿಟಿವಿಟಿ ದರ ಶೇ 2.18ಕ್ಕೆ ಇಳಿಕೆ
ಕೊರೋನಾದಿಂದ ಜಿಲ್ಲೆಯಲ್ಲಿ ಮೃತರಾದವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಆಕ್ಸಿಜನ್ ದುರಂತದಲ್ಲಿ ಸತ್ತವರನ್ನು ಕೇವಲ 3 ಮಂದಿ ಎಂದು ಹೇಳಿದೆ. ಕೋರ್ಟ್ ಇದನ್ನು ಗಮನಿಸಿ, ಇಬ್ಬರು ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸಿ ಸತ್ತವರು ಮೂರು ಮಂದಿ ಅಲ್ಲ 36 ಮಂದಿ ಎಂದು ವರದಿ ಮಾಡುವ ಮೂಲಕ ನೊಂದವರಿಗೆ ನ್ಯಾಯ ಸಿಗುವಂತೆ ಮಾಡಿ, ತಲಾ 2 ಲಕ್ಷ ಪರಿಹಾರ ಕೊಡಿಸಿದೆ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona