ಬಿಜೆಪಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಎದುರಾಳಿ ಅಲ್ಲ, ನೇರ ಹಣಾಹಣಿ, ಅಮಿತ್ ಶಾ!
ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರು ಕಾರ್ಯಕರ್ತರ ಸಮಾವೇಶದಲ್ಲಿ ಅಮಿತ್ ಶಾ ಪ್ರಖರ ಮಾತಿಗೆ ಬಿಜೆಪಿ ಮೈಕೊಡವಿ ನಿಂತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಿದ್ದಾಂತ, ವೋಟ್‌ಬ್ಯಾಂಕ್ ನಾಟಕ, ರಾಜಕೀಯಕ್ಕಾಗಿ ರಾಜ್ಯದ ಹಿತರಕ್ಷಣೆ ಮರೆಯುವ ಪಕ್ಷಗಳನ್ನು ಕಿತ್ತೆಸೆದು ಪೂರ್ಣ ಬಹುಮತದ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಮನವಿ ಮಾಡಿದ್ದಾರೆ. ಶಾ ಭಾಷಣದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಡಿ.31): ದೇವೇಗೌಡಾ ಜಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಿಮ್ಮ ಸಾಧನೆ ಏನು? ನಿಮ್ಮ ಸಾಧನೆಗೆ ನಮ್ಮ ಕಾರ್ಯಕರ್ತರು ದಿಟ್ಟ ಉತ್ತರ ನೀಡಲಿದ್ದಾರೆ. ಕಳೆದ 8 ವರ್ಷದಲ್ಲಿ ಬಿಜೆಪಿ ಸಾಧನೆ ಏನು ಅನ್ನೋದನ್ನು ಕಾರ್ಯಕರ್ತರು ಉತ್ತರ ನೀಡಲಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಿಜೆಪಿ ತರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಬಸಬವಣ್ಣ, ಆದಿ ಶಂಕರಾಚಾರ್ಯರ ಜನ್ಮ ಭೂಮಿ ಕರ್ನಾಟಕಕ್ಕೆ ಪ್ರಣಾಮ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕೆಂಪೇಗೌಡ ಪ್ರತಿಮೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದರು. ಬೆಂಗಳೂರಿಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿದೆ ಸರ್ಕಾರ ರಚಿಸುವ ಸಂಕಲ್ಪದೊಂದಿದೆ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕಕ್ಕೆ ಕಾಂಗ್ರೆಸ್- ಜೆಡಿಎಸ್‌ನಿಂದ ಮುಕ್ತಿ ಕೊಡಿ: ಬಿಜೆಪಿಯನ್ನು ಗೆಲ್ಲಿಸಲು ಅಮಿತ್ ಶಾ ಮನವಿ
ದೇಶದ ಯಾವುದೇ ಮೂಲೆಗೆ ಹೋದರು ಕಾರ್ಯಕರ್ತರು ನಮಗೆ ಹಲವು ಬಾರಿ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಅನ್ನೋ ಮನವಿ ಮಾಡುತ್ತಾರೆ. ಇಂದು ಬೆಂಗಳೂರಿನ ಬೂತ್ ಮಟ್ಟದ ಅಧ್ಯಕ್ಷಕರು ಕಾರ್ಯಕರ್ತರಿಗೆ ಒಂದು ಮಾತು ಹೇಳುತ್ತೇನೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಎಂಟ್ರಿಯಾಗಿರುವುದು ಕರ್ನಾಟದ ಮೂಲಕ. ಹೀಗಾಗಿ ದಕ್ಷಿಣ ಭಾರತದಲ್ಲಿ ಸಂಪೂರ್ಣ ಬಿಜೆಪಿ ಅಧಿಕಾರಕ್ಕೆ ಬರವು ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಹಿಂದಿನ ಸರ್ಕಾರ ಭ್ರಷ್ಟಾಚಾರ ಕಾರಣದಿಂದ ಪತನಗೊಂಡಿತು. ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಇದೀಗ ಬಸವರಾಜ್ ಬೊಮ್ಮಾಯಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಇತ್ತೀಚೆಗೆ 7 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿದೆ. ಇದರಲ್ಲಿ 5 ರಾಜ್ಯಗಳಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೇಗಿದೆ ಎಂದರೆ ಈ ಹಿಂದಿನ ಎಲ್ಲಾ ದಾಖಲೆಯನ್ನು ಪುಡಿ ಮಾಡುವ ರೀತಿಯಲ್ಲಿ ಜನರು ಪ್ರೀತಿ ತೋರಿಸಿದ್ದಾರೆ. ಇತ್ತ ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ವಿಕ್ಷದಲ್ಲಿ ಕುಳಿತುಕೊಳ್ಳುವ ಸ್ಥಾನವೂ ಸಿಗಲಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ನೇತೃತ್ವ ವಹಿಸಲಿದ್ದಾರೆ. ನನ್ನ ಬೂತ್ ಮಟ್ಟದ ಕಾರ್ಯಕರ್ತರು ಮೋದಿ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ತೆರಳಲಿದ್ದಾರೆ ಎಂದಿದ್ದಾರೆ.
ಇಂದಿರಾ ಗಾಂಧಿ ಗರಿಬೀ ಹಠಾವೋ ಸೂತ್ರ ನೀಡಿದರು. ಆದರೆ ಕಾಂಗ್ರೆಸ್ ಯಾವತ್ತಿಗೂ ಬಡತನ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೆ ಮೋದಿ ಸರ್ಕಾರ ಬಡತನ ನಿರ್ಮೂಲನೆಗೆ ಹಲವು ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದೆ. ಪ್ರತಿ ಮನೆಗೆ ಶೌಚಾಲಯ, ಪ್ರತಿ ಮನೆಗೆ ಶುದ್ಧ ನೀರು, ಸಿಲಿಂಡರ್ ನೀಡುವ ವ್ಯವಸ್ಥೆಯನ್ನು ಮೋದಿ ಸರ್ಕಾರ ನೀಡಿದೆ. ಇದೀಗ ಕೊರೋನಾ ಮತ್ತೆ ವಕ್ಕರಿಸಿದೆ. ನೀವೆಲ್ಲಾ ಕೊರೋನಾದ ಕನಿಷ್ಠ 2 ಡೋಸ್ ಪಡೆದುಕೊಂಡಿದ್ದೀರಾ? ನರೇಂದ್ರ ಮೋದಿ ಸರ್ಕಾರ ಮಹಾಮಾರಿ ಕೊರೋನಾಗೆ ಉಚಿತ ಲಸಿಕೆ ನೀಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
Amit Shah: ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸದಾ ಸಿದ್ಧ: ಅಮಿತ್ ಶಾ
ದೇವೇಗೌಡ, ಸಿದ್ದರಾಮಯ್ಯ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿಗಳು ನಾಯಕರೇ, ನಿಮ್ಮ 70 ವರ್ಷದ ಸಾಧನೆಯನ್ನು ಹೇಳಿ, ನಮ್ಮ 8 ವರ್ಷದ ಸಾಧನೆಯನ್ನು ಕಾರ್ಯಕರ್ತರು ನಿಮಗೆ ವಿವರಿಸುತ್ತಾರೆ ಎಂದು ಅಮಿತ್ ಶಾ ಸವಾಲು ಹಾಕಿದ್ದಾರೆ. ಬೂತ್ ಮಟ್ಟದಲ್ಲಿ ನೀವು ಉತ್ತಮ ಕೆಲಸ ಮಾಡಿ, ಈ ದೇಶವನ್ನು ಮತ್ತಷ್ಟು ಉತ್ತಮ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಾರೆ. ಪ್ರತಿ ಮನೆಗೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು ಎಂದು ಅಮಿತ್ ಶಾಹೇಳಿದ್ದಾರೆ.
ಕರ್ನಾಟಕದಲ್ಲಿ ತ್ರಿಕೋಣ ಸ್ಪರ್ಧೆ ಎಂದು ಹಲವರು ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ನೇರಾ ನೇರಾ ಸ್ಪರ್ಧೆ, ಇಲ್ಲಿ ತ್ರಿಕೋಣ ಸ್ಪರ್ಧೆ ಇಲ್ಲ. ಬಿಜೆಪಿ ಯಾರೊಂದಿಗೆ ಹೊಂದಾಣಿಕೆ ಮಾಡುವುದಿಲ್ಲ, ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪಿಎಫ್ಐ ಸಂಘಟನೆಯನ್ನು ಪ್ರಧಾನಿ ಮೋದಿ ನಿಷೇಧ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಇದೇ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆದಿದೆ. ಕರ್ನಾಟಕದ ಸುರಕ್ಷತೆಗೆ ಬಿಜೆಪಿ ಮೊದಲ ಆದ್ಯತೆ ನೀಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿ, ಕರ್ನಾಟಕದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಬಿಜೆಪಿ ಕೆಲಸ ಮಾಡಲಿದೆ. ಪ್ರಧಾನಿ ಮೋದಿ ಬೆಂಗಳೂರಿಗಾಗಿ ಹಲವು ಯೋಜನೆ ನೀಡಿದ್ದಾರೆ. ಮೆಟ್ರೋ ವಿಸ್ತರಣೆಗೆ ಅನುದಾನ ನೀಡಿದ್ದಾರೆ. ಇದಕ್ಕಾಗಿ 3,000 ಕೋಟಿ ರೂಪಾಯಿ ನೀಡಲಾಗಿದೆ. ರಸ್ತೆ ಅಗಲೀಕರಣ, ಅಭಿವೃದ್ಧಿಗೆ ಹಣ ನೀಡಲಾಗಿದೆ. ಕಾಮಾಗಾರಿ ನಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಮಾಡಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲಾಗಿತ್ತು. ಪ್ರಧಾನಿ ಮೋದಿ 2019ರಲ್ಲಿ ಆರ್ಟಿಕಲ್ 370ಯನ್ನು ರದ್ದುಗೊಳಿಸಿತು. ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿತು. ತ್ರಿವಳಿ ತಲಾಖ್ ರದ್ದು ಪಡಿಸಿತು. ಪಿಎಫ್ಐನಿಂದ, ಉಗ್ರರಿಂದ, ಕಾಂಗ್ರೆಸ್ ಜೆಡಿಎಸ್ ಸುರಕ್ಷತೆ ಒದಗಿಸಲು ಸಾಧ್ಯವೇ? ಖಂಡಿತಾ ಇಲ್ಲ ಈ ಪಕ್ಷಗಳು ಮತಬ್ಯಾಂಕ್‌ಗಾಗಿ ಕಣ್ಮೀರಿಡುತ್ತದೆ. ಆದರೆ ಬಿಜೆಪಿ ವೋಟ್ ಬ್ಯಾಂಕ್ ಯೋಚಿಸುವುದಿಲ್ಲ. ದೇಶದ ಹಿತಕ್ಕಾಗಿ ಉತ್ತಮ ಕಾರ್ಯ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.