Lok Sabha Election 2024: ವಿಜಯಪುರ ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ: ಶಾಸಕ ಬಸನಗೌಡ ಯತ್ನಾಳ

ನಮ್ಮ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ. ದೇಶದ ರಕ್ಷಣೆ, ಏಳ್ಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣೆ ಮಾಡುತ್ತಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

No split in Vijayapura BJP Says MLA Basanagouda Patil Yatnal gvd

ವಿಜಯಪುರ (ಏ.12): ನಮ್ಮ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ. ದೇಶದ ರಕ್ಷಣೆ, ಏಳ್ಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣೆ ಮಾಡುತ್ತಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಪಾಲಿಕೆಯ ಐದು ವಾರ್ಡ್‌ಗಳ ವ್ಯಾಪ್ತಿಯ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ‌ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ಸಿಗರಿಗೆ ಮೋದಿ‌ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ ಎಂದರು.ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಭ್ರಷ್ಟಾಚಾರ ರಹಿತ‌ ಆಡಳಿತ, ಅಭಿವೃದ್ಧಿ ಪರ್ವ ಕಾಂಗ್ರೆಸ್ಸಿಗರ ಬಾಯಿ ಕಟ್ಟಿ ಹಾಕಿದೆ. ದೇಶದಲ್ಲಿ ಮೊದಲು‌ 400 ವಿಶ್ವವಿದ್ಯಾಲಯಗಳಿದ್ದವು. 

Chikkamagaluru: ಮಳೆಗಾಗಿ ದೇವರ ಮೊರೆ: ಕಿಗ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ!

ಆದರೆ ಕಳೆದ 10 ವರ್ಷಗಳಲ್ಲಿ 1100 ವಿವಿಗಳಾಗಿವೆ. 41 ವಂದೇ ಭಾರತ್ ರೈಲುಗಳು ಓಡುತ್ತಿವೆ. ಮೆಡಿಕಲ್‌ ಕಾಲೇಜುಗಳ ಸಂಖ್ಯೆ 384 ರಿಂದ 700 ತಲುಪಿವೆ. ದೇಶದಲ್ಲಿ 74 ಇದ್ದ ವಿಮಾನ ನಿಲ್ದಾಣಗಳು ಇಂದು ವಿಜಯಪುರ ಸೇರಿ 154 ವಿಮಾನ ನಿಲ್ದಾಣಗಳಾಗಿವೆ. ಕೇವಲ 5 ನಗರಗಳಲ್ಲಿದ್ದ ಮೆಟ್ರೋ ಇಂದು 20 ನಗರಗಳಲ್ಲಿ ಮೆಟ್ರೋ ಸೇವೆ ಇದೆ. ಯುಪಿಎ ಅವಧಿಯಲ್ಲಿ 96 ಸಾವಿರ ಕಿ.ಮೀ‌ ಇದ್ದ ರಾಷ್ಟ್ರೀಯ ಹೆದ್ದಾರಿ ಇಂದು 1.50 ಲಕ್ಷ‌ ಕಿ.ಮೀ ನಷ್ಟು ಅಭಿವೃದ್ಧಿಯಾಗಿದೆ. 3.75 ಲಕ್ಷ ಕಿ.ಮೀ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಿವೆ. ಹೀಗೆ ಹತ್ತು ಹಲವು ಅಪರಿಮಿತ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ಸಂಸದ‌ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಕಳೆದ 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶದ ಏಲ್ಗೆಗೆ ಏನನ್ನು ಮಾಡದೇ ಕೇವಲ ತಮ್ಮ ಪಕ್ಷ ಹಾಗೂ ತಮ್ಮ ಮನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದರು‌. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಇಡಿ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಕನ್ನಡಿಗರಿಗೇನು ಕೊಟ್ಟಿದ್ದಾರೆಂದು ಹೇಳಲಿ: ಸಚಿವ ಪ್ರಿಯಾಂಕ್ ಖರ್ಗೆ

ಮುಖಂಡರಾದ ವಿವೇಕಾನಂದ ಡಬ್ಬಿ, ಪಾಲಿಕೆ‌‌ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ‌ ಪ್ರ.ಕಾರ್ಯದರ್ಶಿ ಮಳುಗೌಡ ಪಾಟೀಲ, ನಗರ ಮಂಡಲ‌ ಅಧ್ಯಕ್ಷ ಶಂಕರ ಹೂಗಾರ ಹಾಗೂ ಸುರೇಶ್ ಬಿರಾದಾರ್, ಬಸವರಾಜ್ ಬೈಚಬಾಳ, ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಕನ್ನೊಳ್ಳಿ, ರಾಹುಲ್ ಔರಂಗಬಾದ್, ಮಹೇಶ್ ಒಡೆಯರ, ಸುನಿಲ್ ಜೈನಾಪುರ, ಪ್ರಭು ಕೆಂಗಾರ, ಪ್ರವೀಣ್ ಕೂಡ್ಗಿ, ಪಾಪುಸಿಂಗ್ ರಜಪೂತ ಇತರರಿದ್ದರು.

Latest Videos
Follow Us:
Download App:
  • android
  • ios