Asianet Suvarna News Asianet Suvarna News

Chikkamagaluru: ಮಳೆಗಾಗಿ ದೇವರ ಮೊರೆ: ಕಿಗ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ!

ಮಳೆಯಾಗಲೆಂದು ಮಳೆ ದೇವರೆಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿಗೆ ಕೊಪ್ಪ ತಾಲೂಕಿನ ಹರಿಹರಪುರ ಮಠದ ಸಚ್ಚಿದಾನಂದ ಶ್ರೀಗಳು ಕಿಗ್ಗಾದ ಋಷ್ಯ ಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

Special Pooja and Prayer at Chikkamagaluru Kigga for Rain gvd
Author
First Published Apr 12, 2024, 9:45 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಏ.12): ರಾಜ್ಯದಲ್ಲಿ  ಭೀಕರ ಬರಗಾಲದಿಂದ ಜನರು ತತ್ತರಿಸಿದ್ದು ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಮಳೆ ದೇವರೆಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿಗೆ ಕೊಪ್ಪ ತಾಲೂಕಿನ ಹರಿಹರಪುರ ಮಠದ ಸಚ್ಚಿದಾನಂದ ಶ್ರೀಗಳು ಕಿಗ್ಗಾದ ಋಷ್ಯ ಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲದ ಮುಂಭಾಗದ ಹರಕೆ ಬಸವನಿಗೂ ವಿಶೇಷ ಪೂಜೆ ಸಲ್ಲಿಸಿ ಬಸವನ ಕಿವಿಯಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. 

ಪೂಜೆ ಸಲ್ಲಿಸಿದರೆ ಮಳೆ ಬರುತ್ತೆ ಎನ್ನುವ ನಂಬಿಕೆ: ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ ಮಳೆ ದೇವರೆಂದೇ ಖ್ಯಾತಿಯಾಗಿರೋ ದೇವರು. ಬರಗಾಲದಲ್ಲಿ ಇಲ್ಲಿ ಪೂಜೆ ಸಲ್ಲಿಸಿದರೆ ಮಳೆ ಬರುತ್ತೆ. ಮಳೆ ಹೆಚ್ಚಾದರೆ ಇಲ್ಲಿ ಮಳೆ ಸಲ್ಲಿಸಿದರೆ ಮಳೆ ನಿಲ್ಲುತ್ತೆ ಎಂಬ ನಂಬಿಕೆ ಇದೆ. ಆ ನಂಬಿಕೆ ಭಕ್ತವೃಂದದಲ್ಲಿ ಇಂದಿಗೂ ಸುಳ್ಳಾಗಿಲ್ಲ. ಈ ಹಿಂದೆ ಸರ್ಕಾರಗಳು ಕೂಡ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸಂದರ್ಭದಲ್ಲಿ ಇಲ್ಲಿ ಪೂಜೆ ಸಲ್ಲಿಸಿವೆ. 

ಪ್ರಧಾನಿ ಮೋದಿ ಕನ್ನಡಿಗರಿಗೇನು ಕೊಟ್ಟಿದ್ದಾರೆಂದು ಹೇಳಲಿ: ಸಚಿವ ಪ್ರಿಯಾಂಕ್ ಖರ್ಗೆ

ಆಗ ಅತಿವೃಷ್ಠಿಯಲ್ಲಿ ಮಳೆ ನಿಂತಿದೆ. ಅನಾವೃಷ್ಠಿಯಲ್ಲಿ ಮಳೆ ಬಂದಿದೆ. ಆಸ್ಟ್ರೇಲಿಯಾದ ಕಾಡಿಗೆ ಬೆಂಕಿ ಬಿದ್ದು ಪ್ರಾಣಿಪಕ್ಷಿಗಳು ಸಾವನ್ನಪ್ಪುತ್ತಿದ್ದ ವೇಳೆ ಆಸ್ಟ್ರೇಲಿಯಾದಲ್ಲಿ ಮಳೆ ನಿಲ್ಲಲಿ ಎಂದು ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಅಲ್ಲಿ ಮಳೆ ನಿಂತಿತ್ತು. ಇದೀಗ, ರಾಜ್ಯದಲ್ಲಿ ತೀವ್ರ ಬರ ಇರೋದ್ರಿಂದ ಮಳೆಯಾಗಲಿ ಎಂದು ಹರಿಹರಪುರ ಮಠದ ಶ್ರೀಗಳು ಮಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios