ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ, ನಡೆದಿರುವುದು ಬಿಜೆಪಿ ಕಾಲದಲ್ಲೇ: ಡಿ.ಕೆ.ಶಿವಕುಮಾರ್‌

ನಮ್ಮ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲೇ. ಅವರ ಎಲ್ಲಾ ಪ್ರಶ್ನೆಗಳಿಗೂ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 
 

No scams have happened in our time it happened in BJP time says DK Shivakumar gvd

ಚನ್ನಪಟ್ಟಣ (ಜು.04): ನಮ್ಮ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲೇ. ಅವರ ಎಲ್ಲಾ ಪ್ರಶ್ನೆಗಳಿಗೂ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಬಿ ಬೆಟ್ಟದಲ್ಲಿ ಪ್ರಯೋಗಾತ್ಮಕ ಸ್ಫೋಟ ಕುರಿತು ಪ್ರತ್ರಿಕಿಯಿಸಿ, ಕೆಆರ್‌ಎಸ್‌ನಲ್ಲಿ ಯಾರೂ ಟ್ರಯಲ್ ಬ್ಲಾಸ್ಟ್ ಮಾಡಲ್ಲ. ಡಿಸ್ಟೆನ್ಸ್‌ನಲ್ಲಿ ಸೇಫ್ಟಿ ಇಟ್ಟುಕೊಂಡು ಟ್ರಯಲ್ ಬ್ಲಾಸ್ಟ್ ಮಾಡ್ತಾರೆ. ಎಲ್ಲಾ ಟೆಕ್ನಿಕಲ್ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.

ಇಲಾಖಾವಾರು ಅರ್ಜಿಗಳ ವಿಂಗಡಣೆ: ಮೊದಲು ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹರನ್ನು ಗುರುತಿಸಲಾಗುವುದು. ನಂತರ ನಾನೇ ಖುದ್ದಾಗಿ ಬಂದು ಸರ್ಕಾರಿ ಜಮೀನು, ಖಾಸಗಿ ಜಮೀನು ಪರಿಶೀಲನೆ ನಡೆಸಿ ಹಂಚಿಕೆ ಮಾಡುತ್ತೇನೆ. ಇಲಾಖಾವಾರು ಅರ್ಜಿಗಳನ್ನು ವಿಂಗಡಣೆ ಮಾಡಿ ಆಯಾಯ ಇಲಾಖೆಯ ಸಚಿವರಿಂದ ಸಭೆ ನಡೆಸಲಾಗುವುದು ಎಂದು ನಿವೇಶನ ಹಂಚಲು ಗಡುವು ಕುರಿತ ಪ್ರಶ್ನೆಗೆ ಉತ್ತರಿಸಿದರು. ಚನ್ನಪಟ್ಟಣವನ್ನು ಬದಲಾವಣೆ ಮಾಡಬೇಕು. ಮುನಿಸಿಪಾಲಿಟಿ, ತಾಲೂಕು ಕಚೇರಿ, ಆಸ್ಪತ್ರೆ ಸೇರಿದಂತೆ ಎಲ್ಲವನ್ನು ಬದಲಾವಣೆ ಮಾಡಬೇಕು. ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲ, ಬಡವರಿಗೆ, ಬೀಡಿ ಕಾರ್ಮಿಕರಿಗೆ ಮನೆಯಿಲ್ಲ, ಈ ಬದಲಾವಣೆಗಳು ಏಕೆ ಆಗಲಿಲ್ಲವೋ ಗೊತ್ತಿಲ್ಲ. 

ಉಪಚುನಾವಣೆಯಲ್ಲಿ ಒಳಒಪ್ಪಂದಕ್ಕೆ ಅವಕಾಶವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಗ್ರಾಮೀಣ ಮಹಿಳೆಯರಿಗೆ ಸ್ವೀಕೃತಿ ಪತ್ರ ಪಡೆದುಕೊಳ್ಳುವ ತಾಳ್ಮೆಯಿತು. ಚನ್ನಪಟ್ಟಣ ನಗರದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಧಾವಂತದಲ್ಲಿದ್ದಾರೆ. ಅಂದರೆ ಜನರ ಸಮಸ್ಯೆಗಳನ್ನು ಸರಿಯಾಗಿ ಆಲಿಸಿಲ್ಲ ಎಂದರ್ಥ. ಇದಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ, ಮತದಾರರು, ಸ್ಥಳೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜನಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ನಾನು ಅಧಿಕಾರದಲ್ಲಿದ್ದು ಈ ಕಾರ್ಯಕ್ರಮದ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದೇನೆ.

ಈ ಹಿಂದಿನ ಸರ್ಕಾರ ವೃದ್ಧಾಪ್ಯ ವೇತನ ನೀಡಲು ೫೦೦ ರು. ತೆಗೆದುಕೊಳ್ಳುತ್ತಿತ್ತು. ನಾನು ಕನಕಪುರದಲ್ಲಿ ೧೩ ಸಾವಿರ ಜನರಿಗೆ ಪಿಂಚಣಿ ಬರುವಂತೆ ಮಾಡಿದೆ. ಪ್ರತಿ ವಾರ್ಡ್‌ವಾರು ಸಭೆ ನಡೆಸಿ ಸುಮಾರು ೩ ತಿಂಗಳ ಕಾಲ ನಿವೇಶನಗಳನ್ನು ಹಂಚಿದ್ದೇನೆ ಎಂದು ಹೇಳಿದರು. ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜನಸಂಪರ್ಕ ಸಭೆ ನಡೆಸುವ ಕುರಿತು ಉತ್ತರಿಸಿ, ‘ಮಾಡಲಿ, ಒಳ್ಳೆಯ ಕೆಲಸ ಯಾರು ಮಾಡಿದರೆ ಏನಂತೆ. ಜನಸೇವೆ ಮಾಡುವುದನ್ನು ನಾನು ಬೇಡ ಎಂದು ಹೇಳಲು ಆಗುತ್ತದೆಯೇ? ಎಂದು ಹೇಳಿದರು. ಉಪ ಚುನಾವಣೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಪ್ರಶ್ನೆಗೆ, ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ, ಅವರೇ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂದರು.

ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ: ಡಿಸಿಎಂ ಡಿ.ಕೆ.ಶಿವಕುಮಾರ್

ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ಡಿಕೆಶಿ ಜೈಲಿಗೆ ಹಾಕಿಸಿದರು ಎಂಬ ದೇವರಾಜೇಗೌಡ ಆರೋಪಕ್ಕೆ ಉತ್ತರಿಸಿ, ‘ಹೌದಾ, ಸಂತೋಷ, ಅವರಿಗೆ ಒಳ್ಳೆಯದಾಗಲಿ. ನನ್ನ ನೆನೆಸಿಕೊಳ್ತಾ ಇರಲಿ ಎಂದು ತಿರುಗೇಟು ನೀಡಿದರು. ಚನ್ನಪಟ್ಟಣ ಬೆಂಗಳೂರು ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಮ್ಮ ಪಠ್ಯ ಪುಸ್ತಕಗಳನ್ನು ತೆಗೆದುನೋಡಿ. ರಾಮನಗರ, ಮಾಗಡಿ, ಕನಕಪುರ ಎಲ್ಲಾ ಬೆಂಗಳೂರು ಗ್ರಾಮಾಂತರ. ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತದೆ. ಇದು ರಾಮನಗರ ಡಿವಿಜನ್ ಅಂತಾನೆ ಇರುತ್ತದೆ. ಆದರೆ ಎಲ್ಲಾ ಬೆಂಗಳೂರಿಗೆ ಸೇರುತ್ತದೆ’ ಎಂದು ರಾಮನಗರ ಜಿಲ್ಲೆ ಬೆಂಗಳೂರು ಸೇರ್ಪಡೆ ಬಗ್ಗೆ ಪುನರುಚ್ಚರಿಸಿದರು.

Latest Videos
Follow Us:
Download App:
  • android
  • ios