Asianet Suvarna News Asianet Suvarna News

ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಚನ್ನಪಟ್ಟಣವನ್ನ ಬದಲಾವಣೆ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಡವರಿಗೆ ಸೈಟ್ ಹಂಚಿಲ್ಲ, ಮನೆ ಕೊಟ್ಟಿಲ್ಲ, ರಸ್ತೆ ಸರಿ ಇಲ್ಲ. ನಗರಸಭೆ, ತಾಲೂಕು ಕಚೇರಿಗೆ ಒಳ್ಳೆಯ ಕಟ್ಟಡ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. 

Now channapatna will also join bengaluru says dcm dk shivakumar gvd
Author
First Published Jul 3, 2024, 3:43 PM IST

ಚನ್ನಪಟ್ಟಣ (ಜು.03): ಚನ್ನಪಟ್ಟಣವನ್ನ ಬದಲಾವಣೆ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಡವರಿಗೆ ಸೈಟ್ ಹಂಚಿಲ್ಲ, ಮನೆ ಕೊಟ್ಟಿಲ್ಲ, ರಸ್ತೆ ಸರಿ ಇಲ್ಲ. ನಗರಸಭೆ, ತಾಲೂಕು ಕಚೇರಿಗೆ ಒಳ್ಳೆಯ ಕಟ್ಟಡ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಇಡೀ ಚನ್ನಪಟ್ಟಣ ನಗರವನ್ನ ಸಂಪೂರ್ಣ ಅಭಿವೃದ್ಧಿ ಮಾಡಬೇಕು. ಕ್ಷೇತ್ರದ ಮತದಾರರು ಅರ್ಥ ಮಾಡಿಕೊಳ್ಳಬೇಕು‌. ನಿಮ್ಮ ಸೇವೆ ಮಾಡಲು ಅವಕಾಶ ಕೊಡಬೇಕು. ಸದ್ಯ ರಾಜ್ಯದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಜನರ ಸಮಸ್ಯೆ ಅರಿತು ಪರಿಹಾರ ನೀಡುವ ಹೊಸ ಪದ್ಧತಿ ತಂದಿದ್ದೇವೆ ಎಂದರು.

ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ: ಚನ್ನಪಟ್ಟಣ ಬೆಂಗಳೂರು ಸೇರ್ಪಡೆ ವಿಚಾರವಾಗಿ, ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಮ್ಮ ಟೆಕ್ಸ್ಟ್ ಬುಕ್ ಗಳನ್ನ ತೆಗೆದುನೋಡಿ. ರಾಮನಗರ, ಮಾಗಡಿ, ಕನಕಪುರ ಎಲ್ಲಾ ಬೆಂಗಳೂರು ಗ್ರಾಮಾಂತರ. ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ. ಇದು ರಾಮನಗರ ಡಿವಿಜನ್ ಅಂತಾನೆ ಇರುತ್ತೆ. ಆದರೆ ಎಲ್ಲಾ ಬೆಂಗಳೂರಿಗೆ ಸೇರುತ್ತೆ. ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಡಿಕೆಶಿ ಪುನರುಚ್ಚಾರಿಸಿದರು. ಸಿಎಂ ಮನೆಗೆ ಬಿಜೆಪಿ ನಾಯಕರ ಮುತ್ತಿಗೆ ವಿಚಾರವಾಗಿ, ನಮ್ಮ ಕಾಲದಲ್ಲಿ ಯಾವ ಹಗರಣವೂ ಆಗಿಲ್ಲ. ಎಲ್ಲಾ ಬಿಜೆಪಿ ಅವರ ಕಾಲದಲ್ಲೇ ಆಗಿರೋದು. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡಿದ್ರೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆಶಿ ತಿರುಗೇಟು ನೀಡಿದರು.

ಸಿಎಂ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ: ಸಚಿವ ಸತೀಶ್‌ ಜಾರಕಿಹೊಳಿ

ಡಿಸ್ಟೆನ್ಸ್‌ನಲ್ಲಿ ಸೇಫ್ಟಿ ಇಟ್ಟುಕೊಂಡು ಟ್ರಯಲ್ ಬ್ಲಾಸ್ಟ್ ಮಾಡ್ತಾರೆ: ಕೆಆರ್‌ಎಸ್‌ನಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವಿಚಾರವಾಗಿ ಮಾತನಾಡಿದ ಡಿಕೆಶಿ, ಕೆಆರ್‌ಎಸ್‌ನಲ್ಲಿ ಯಾರೂ ಟ್ರಯಲ್ ಬ್ಲಾಸ್ಟ್ ಮಾಡಲ್ಲ. ಡಿಸ್ಟೆನ್ಸ್‌ನಲ್ಲಿ ಸೇಫ್ಟಿ ಇಟ್ಟುಕೊಂಡು ಟ್ರಯಲ್ ಬ್ಲಾಸ್ಟ್ ಮಾಡ್ತಾರೆ. ಎಲ್ಲಾ ಟೆಕ್ನಿಕಲ್ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮಾಡ್ತಾರೆ ಎಂದರು.  ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿಕೆಯಿಂದ ಜನಸ್ಪಂದನಾ ಸಭೆ ವಿಚಾರವಾಗಿ ಮಾಡಲಿ, ಒಳ್ಳೆಯ ಕೆಲಸ ಅಲ್ವಾ.! ಜನರ ಸೇವೆ ಮಾಡೋದು, ಸಮಸ್ಯೆ ಆಲಿಸೋದು ಒಳ್ಳೆಯದು. ಸಭೆ ಮಾಡಿದ್ರೆ ಬಹಳ ಸಂತೋಷ ಎಂದರಲ್ಲದೇ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಡಿಕೆಶಿ ಜೈಲಿಗೆ ಹಾಕ್ಸಿದ್ರು ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ  ಹೌದಾ.. ಸಂತೋಷ, ಅವರಿಗೆ ಒಳ್ಳೆಯದಾಗಲಿ. ನನ್ನ ನೆನೆಸಿಕೊಳ್ತಾ ಇರಲಿ ಎಂದು ಡಿಕೆಶಿ ಟಾಂಗ್ ನೀಡಿದರು. 

ಸಿಎಂ ಪತ್ನಿ ಯಾಕೆ ಅಕ್ರಮ ಮಾಡುತ್ತಾರೆ?: ಮುಡಾದಲ್ಲಿ ೪ ಸಾವಿರ ಕೋಟಿ ರು. ಅಕ್ರಮನಾ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿ ವ್ಯಕ್ತಪಡಿಸಿದರು. ಚನ್ನಪಟ್ಟಣದ ಭೈರಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ೪ ಸಾವಿರ ಕೋಟಿ ರು. ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು. ಸಿಎಂ ಪತ್ನಿ ವಿರುದ್ಧವೂ ಅಕ್ರಮ ಸೈಟ್ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ? ಅವರ ಆಸ್ತಿ ಮುಡಾಗೆ ಭೂ ಸ್ವಾಧೀನ ಅಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ ಅವರಿಗೆ ಸೈಟ್ ಕೊಟ್ಟಿರುತ್ತಾರೆ. ಬಿಜೆಪಿಯವರ ಆಡಳಿತದಲ್ಲೇ ಸೈಟ್ ಕೊಟ್ಟಿದ್ದಾರೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. 

ಸಿದ್ದು, ಡಿಕೆಶಿ ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ‌: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಅದಕ್ಕಾಗಿ ಇನ್ಸೆಂಟಿವ್ ಸೈಟ್ ಕೊಟ್ಟಿದ್ದಾರೆ.ಅನುಪಾತದ ಆಧಾರದ ಮೇಲೆ ಸೈಟ್ ಕೊಡಲಾಗಿರುತ್ತದೆ. ಅದರಲ್ಲಿ ತಪ್ಪೇನಿದೆ? ಡಿನೋಟಿಫಿಕೇಷನ್ ಮಾಡದೇ ಇನ್ಸೆಂಟಿವ್ ಸೈಟ್ ಪಡೆದಿರೋದಕ್ಕೆ ಖುಷಿ ಪಡಬೇಕು ಎಂದರು. ಮುಡಾ ಅಕ್ರಮ ಆರೋಪ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ವಿರುದ್ಧ ನಮ್ಮ ಸಿಎಂ ಕಠಿಣವಾಗಿದ್ದಾರೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗುತ್ತದೆ. ಏನೇ ಇದ್ದರೂ ನಮ್ಮ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆ ಮಾಡುತ್ತಾರೆ. ಈ ಬಗ್ಗೆ ನನಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

Latest Videos
Follow Us:
Download App:
  • android
  • ios