ಪಾಕಿಸ್ತಾನದ ಭಯೋತ್ಪಾದಕರು 27 ಜನರನ್ನು ಕಗ್ಗೊಲೆ ಮಾಡಿರೋದು ಈಡೀ ವಿಶ್ವ ಖಂಡಿಸಿದೆ. ರಾಷ್ಟ್ರಭಕ್ತರನ್ನ ಕಗ್ಗೊಲೆ ಮಾಡಿ ಭಯೋತ್ಪಾದಕರು ತಮ್ಮ ಶವಪೆಟ್ಟಿಗೆಗೆ ಕೊನೆ ಮೊಳೆಯನ್ನು ಹೊಡೆದುಕೊಂಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. 

ಶಿವಮೊಗ್ಗ (ಏ.26): ಪಾಕಿಸ್ತಾನದ ಭಯೋತ್ಪಾದಕರು 27 ಜನರನ್ನು ಕಗ್ಗೊಲೆ ಮಾಡಿರೋದು ಈಡೀ ವಿಶ್ವ ಖಂಡಿಸಿದೆ. ರಾಷ್ಟ್ರಭಕ್ತರನ್ನ ಕಗ್ಗೊಲೆ ಮಾಡಿ ಭಯೋತ್ಪಾದಕರು ತಮ್ಮ ಶವಪೆಟ್ಟಿಗೆಗೆ ಕೊನೆ ಮೊಳೆಯನ್ನು ಹೊಡೆದುಕೊಂಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮೃತ ಮಂಜುನಾಥ್ ಅಂತಿಮ ದರ್ಶನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಭಯೋತ್ಪಾದನೆಗೆ ಸಪೋರ್ಟ್ ಮಾಡುವಂತ ದೇಶಕ್ಕೆ ರಾಜತಾಂತ್ರಿಕವಾಗಿ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡಿದೆ. ಸಿಂಧೂ ನದಿ ನೀರನ್ನು ಈಗಾಗಲೇ ಕೇಂದ್ರ ಸರ್ಕಾರ ಬಂದ್ ಮಾಡಿದೆ. 

ಅಖಂಡ ಭಾರತ ನಿರ್ಮಾಣಕ್ಕೆ ಇದು ಮೊದಲ ಹೆಜ್ಜೆಯಾಗಿದೆ. ಕಾಂಗ್ರೆಸ್ ನಾಯಕರು ಈಗ ದೇಶದ ಜೊತೆಗೆ ಇರಬೇಕು. ರಾಜ್ಯದ ಕೆಲ ನಾಯಕರು ಇದು ಇಂಟಲಿಜೆನ್ಸ್ ಫೆಲ್ಯೂರ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಜೆಹಳ್ಳಿ-ಕೆಜೆ ಹಳ್ಳಿ ಘಟನೆಗೆ ಏನು ಹೇಳಬೇಕು. ಇದು ರಾಜಕಾರಣ ಮಾಡೋ ಸಮಯ ಅಲ್ಲ. ಉಗ್ರರ ದಾಳಿಯಿಂದ ಮೃತರಾದವರಿಗೆ ರಾಜ್ಯ ಸರ್ಕಾರ ಪರಿಹಾರ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಇದಕ್ಕೆ ಪರಿಹಾರ ನೀಡುವುದೇ ಸಮಸ್ಯೆಗೆ ಪರಿಹಾರವಲ್ಲ. ಇಂತಹ ಕೃತ್ಯಗಳಿಗೆ ಇತಿಶ್ರೀ ಹಾಡಬೇಕು ಎಂದರು.

ರಾಜಕೀಯಕ್ಕಾಗಿ ಮಾತ್ರವೇ ಈ ಸಮಾವೇಶ: ರಾಜ್ಯದ ಕಾಡುಗೊಲ್ಲ ಸಮುದಾಯ ಚಿಕ್ಕೋಡಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ಏ. ೨೦ ರಂದು ಹಮ್ಮಿಕೊಂಡಿರುವ ಯಾದವ ಸಮಾವೇಶಕ್ಕೆ ಭಾಗವಹಿಸಬೇಡಿ. ಈ ಸಮಾವೇಶಕ್ಕೂ ನಮಗೂ ಸಂಬಂಧ ಇಲ್ಲ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ ಹೇಳಿದರು. ಅವರು ನಗರದ ಕಾಡುಗೊಲ್ಲರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಗೊಲ್ಲ ಯಾದವ ಸಂಘಕ್ಕೂ, ಕರ್ನಾಟಕದ ಮೂಲ ನಿವಾಸಿಗಳಾದ ಬುಡಕಟ್ಟು, ಅಲೆಮಾರಿ ಸಮುದಾಯದ ಕಾಡುಗೊಲ್ಲರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ರಾಜಕಾರಣಕ್ಕಾಗಿ ಕಾಡುಗೊಲ್ಲರನ್ನು ಉಪಯೋಗಿಸಿಕೊಂಡು ಅವರ ಯಾವ ಬೇಡಿಕೆಗಳನ್ನೂ ಈಡೇರಿಸಿಕೊಳ್ಳಲು ಬಿಡುತ್ತಿಲ್ಲ ಎಂದರು.

ಹಿಂದುಳಿದ ಚಾ.ನಗರಕ್ಕೆ ಬಂಪರ್‌ ಗಿಫ್ಟ್‌: ಮಲೆಮಹದೇಶ್ವರದ ಬೆಟ್ಟದಲ್ಲಿ ಹಲವು ಯೋಜನೆ ಘೋಷಣೆ

ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಕರ್ಯದರ್ಶಿ ಎಂ.ಚಂದ್ರಣ್ಣ ಮಾತನಾಡಿ, ಕಾಡುಗೊಲ್ಲರು ಜನಪದ ವೀರಗಾರರಾದ ಚಿತ್ರ, ಮುತ್ತಿ, ಚಂದ್ರ, ಕಾಟಯ್ಯ, ದೊಡ್ಡೋನು ಜುಂಜುಪ್ಪ, ಕ್ಯಾತಯ್ಯ, ಚಿಕ್ಕಣ್ಣ, ಸಿರಿಯಣ್ಣ, ಸೀಗಣ್ಣ, ಗೌರಸಂದ್ರದ ಮಾರಮ್ಮ, ಕರಿಯಮ್ಮ, ಕರಡಿ ಬುಳ್ಳಪ್ಪ, ಈರಣ್ಣ, ಅಜ್ಜಪ್ಪ, ಇತರೆ ನೂರಾರು ಸಾಂಸ್ಕೃತಿಕ ವೀರಗಾರರನ್ನು ಕುಲದೈವಗಳು ಎಂದು ಮೂಲ ಜಾನಪದ ಶೈಲಿಯಲ್ಲಿ ಆರಾಧನೆ ಮಾಡುತ್ತಿದ್ದೇವೆ. ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲ, ಇತರೆ ಉಪಪಂಗಡಗಳಲ್ಲಿ ಹುಟ್ಟಿನಿಂದ ಬುಡಕಟ್ಟು ಜೀವ ವೈವಿಧ್ಯದಿಂದ ಎಲ್ಲಾ ಸಮುದಾಯಗಳ ಜೊತೆಗೆ ಸೌಹಾರ್ಧತೆಯಿಂದ ಬಡತನದಲ್ಲಿ ಬದುಕುತ್ತಿದ್ದೇವೆ. ಆದರೆ ಗೊಲ್ಲ ಸಮುದಾಯದವರು ನಗರ ಪ್ರದೇಶಗಳಲ್ಲಿ ವಾಸವಾಗಿ ಅಭಿವೃದ್ಧಿ ಹೊಂದಿದ್ದು, ಕಾಡುಗೊಲ್ಲರನ್ನು ರಾಜಕೀಯವಾಗಿ, ಆರ್ಥಿಕವಾಗಿ ತುಳಿಯಲು ಯತ್ನಿಸುತ್ತಿದ್ದಾರೆ ಎಂದರು.