ಬಿಎಲ್ ಸಂತೋಷ್ ಸಂಪರ್ಕದಲ್ಲಿ 40 ಕಾಂಗ್ರೆಸ್ ಶಾಸಕರು: ಇದು ಶುದ್ಧ ಸುಳ್ಳು ಎಂದ ಶ್ರೀರಾಮುಲು!

ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಪರೇಷನ್ ಟಾಕ್ ಪೈಟ್ ಜೋರಾಗಿಯೇ ನಡೆಯುತ್ತಿದೆ. ಆದರೆ ಮಾಜಿ ಸಚಿವ ಬಿ.ಶ್ರೀರಾಮುಲು ಯಾದಗಿರಿಯಲ್ಲಿ ಮಾತನಾಡಿ, ಕಾಂಗ್ರೆಸ್  ಗೆ ರಾಜ್ಯದ ಜನ ಸ್ಪಷ್ಟ ಬಹುಮತದ ಸರ್ಕಾರ ನೀಡಿದ್ದಾರೆ. 

No operation kamala by BJP party sriramulu clarifies at yadgir rav

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.2): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಆದ್ರೆ ಒಂದು ಆಪರೇಷನ್ ಕಮಲ ಹಾಗೂ ಮತ್ತೊಂದು ಅಪರೇಷನ್ ಹಸ್ತದ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಬಿಜೆಪಿ ಯವರು ಹೇಳ್ತಿದ್ದಾರೆ, ಅದೇ ರೀತಿ ಕಾಂಗ್ರೆಸ್ ನವ್ರು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಕಾಂಗ್ರೆಸ್ ನವ್ರು ಹೇಳಿಕೆ ನೀಡ್ತಿದ್ದಾರೆ. ಇದರ ಬೆನ್ನೆಲೆ ಯಾದಗಿರಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಯಾವುದೇ ಅಪರೇಷನ್ ಕಮಲ ಮಾಡುವುದಿಲ್ಲ. ದೇವರಲ್ಲಿ ಪ್ರಾರ್ಥಿಸುತ್ತೇನೆ ಐದು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಪೊರೈಸಲಿ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಾವು ಅಪರೇಷನ್ ಕಮಲ(Operation kamala) ಮಾಡುವುದಿಲ್ಲ:ಬಿ.ಶ್ರೀರಾಮುಲು

ರಾಜ್ಯ ವಿಧಾನಸಭಾ ಚುನಾವಣೆ(Assembly election 2023)ಯಲ್ಲಿ ಕಾಂಗ್ರೆಸ್‌ ಪಕ್ಷ 136 ಸೀಟ್ ಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ(CM Siddaramaiah) ನೇತ್ರತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಹಿಡೇರಿಸುವ ಕೆಲಸ ಮಾಡಲಾಗ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಪರೇಷನ್ ಟಾಕ್ ಪೈಟ್ ಜೋರಾಗಿಯೇ ನಡೆಯುತ್ತಿದೆ. ಆದರೆ ಮಾಜಿ ಸಚಿವ ಬಿ.ಶ್ರೀರಾಮುಲು(B Sriramulu) ಯಾದಗಿರಿಯಲ್ಲಿ ಮಾತನಾಡಿ, ಕಾಂಗ್ರೆಸ್  ಗೆ ರಾಜ್ಯದ ಜನ ಸ್ಪಷ್ಟ ಬಹುಮತದ ಸರ್ಕಾರ ನೀಡಿದ್ದಾರೆ. 136 ಕಾಂಗ್ರೆಸ್ ಶಾಸಕರನ್ನು ಜನ ಆಯ್ಕೆ ಮಾಡಿದ್ದಾರೆ. ನಮ್ಮ ಅಭ್ಯಂತರ ಏನೂ ಇಲ್ಲ. ಬಿಜೆಪಿ ಯಾವುದೇ ಅಪರೇಷನ್ ಕಮಲ ಮಾಡುವುದಿಲ್ಲ. ಅಪರೇಷನ್ ಕಮಲದ ಮೂಲಕ ಸರ್ಕಾರ ಕೆಡವಲಾಗ್ತಿದೆ ಅಂತ ಸುಮ್ಮನೆ ಹೇಳುತ್ತಿದ್ದಾರೆ. ಇದೆಲ್ಲಾ ಕೇವಲ ಊಹಾಪೋಹ ಅಂತ ಸ್ಪಷ್ಟಪಡಿಸಿದರು.

ಬಿ.ಎಲ್‌. ಸಂತೋಷ್‌ ಹೇಳಿಕೆ ಶತಮಾನದ ಜೋಕ್‌: ಕಾಂಗ್ರೆಸ್‌ ವ್ಯಂಗ್ಯ

ಬಿ.ಎಲ್.ಸಂತೋಷ್ 40 ಕಾಂಗ್ರೆಸ್ ಶಾಸಕರು ಸಂಪರ್ಕ ಎಂಬುದು ಶುದ್ಧ ಸುಳ್ಳು: ಶ್ರೀರಾಮುಲು

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್(BL Santosh) ಅವರು ಸಭೆಯೊಂದರಲ್ಲಿ ಕಾಂಗ್ರೆಸ್ ನ 40 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಇದನ್ನು ಅಲ್ಲಗಳೆದಿದ್ದಾರೆ. ಸಂತೋಷ ಅವ್ರು ಈ ಹೇಳಿಕೆ ನೀಡಿಲ್ಲ. ಆ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ, ಆ ರೀತಿ ಸಂತೋಷ್ ಅವ್ರು ಮಾತಾಡಿಲ್ಲ. ಅದೆಲ್ಲಾ ಶುದ್ಧ ಸುಳ್ಳು ಅಂತ ಹೇಳಿದರು. ಕಾಂಗ್ರೆಸ್ ನವ್ರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ಗೊಂದಲವನ್ನು ಉಂಟು ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ(Congress government)ಕ್ಕೆ ಕಿವಿ ಕೇಳಿಸ್ತಿಲ್ಲ, ಕಣ್ಣು ಕಾಣಿಸುತ್ತಿಲ್ಲ: ರಾಮುಲು

ಕಲ್ಯಾಣ ಕರ್ನಾಟಕ(kalyana karnataka) ಭಾಗದ ರೈತರು ಕೃಷ್ಣ, ಹಾಗೂ ತುಂಗಭದ್ರಾ ನದಿಯ ಮೇಲೆ ಅವಲಂಬಿತರಾಗಿದ್ದಾರೆ. ಈಗ ರೈತರ ಪರಿಸ್ಥಿತಿ ಏನಾಗಿದೆ ಎಂಬುದು ಕಾಂಗ್ರೆಸ್ ನೋಡಲಿ. ರೈತರ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಕೊಡಬೇಕು. ಆದರೆ ಈಗ ಒಂದು ದಿನಕ್ಕೆ 3-4 ತಾಸು ವಿದ್ಯುತ್ ಸಿಗ್ತಿಲ್ಲ. ವಿದ್ಯುತ್ ಉತ್ಪಾದನೆ ಮಾಡಬೇಕೆನ್ನುವ ಪರಿಕಲ್ಪನೆಯೂ ಸರ್ಕಾರಕ್ಕೆ ಇಲ್ಲ. ಸಾಲ ಮಾಡಿಕೊಂಡು, ಹಣ ಕಟ್ಟಲಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ ಎಂದರು.

ರಾಜ್ಯದಲ್ಲಿ 75 ರೈತರು ಆತ್ಮಹತ್ಯೆ(Farmers suicide) ಮಾಡಿಕೊಂಡಿದ್ದಾರೆ. ಹೀಗಾಗಿ ಬರಗಾಲ ಪೀಡಿತ ತಾಲೂಕುಗಳನ್ನು ಘೋಷಿಸುವಂತೆ ಒತ್ತಾಯ ಮಾಡ್ತಿದ್ದೇವೆ. ಆದ್ರೆ ಕಾಂಗ್ರೆಸ್ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ, ಕಣ್ಣು ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.

ಸಂತೋಷ್‌ ಹೇಳಿಕೆ: 40 ಏಕೆ, 136 ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಡಿಕೆಶಿ

ಕಾಂಗ್ರೆಸ್ 50% ಕಮಿಷನ್ ಸರ್ಕಾರ 

ಕಾವೇರಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರ ಬಗ್ಗೆ ಯೋಚನೆ ಮಾಡ್ತಿಲ್ಲ. ಕೇವಲ I.N.D.I.A ಒಕ್ಕೂಟವನ್ನು ತೃಪ್ತಿಪಡಿಸಲು ಕಾವೇರಿ ನೀರು ಬಿಡಲಾಗಿದೆ. ಕೇವಲ ಗ್ಯಾರೆಂಟಿಗಳ ಮೂಲಕ ಜನರ ಜೀವನ ನಡೆಯಲ್ಲ. ಲೋಕಸಭೆ ಚುನಾವಣೆವರೆಗೂ ಮಾತ್ರ ಗ್ಯಾರೆಂಟಿ ನಡೆಯುತ್ತವೆ. ಬಿಬಿಎಂಪಿಯಲ್ಲಿ 50% ಕಮಿಷನ್ ಕೇಳ್ತಿದ್ದಾರೆ. ಹಾಗಾಗಿ ಇದೊಂದು 50% ಕಮಿಷನ್ ಸರ್ಕಾರ. ಮೂರು ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದು ಕೇವಲ ವರ್ಗಾವಣೆ ದಂಧೆ. ನಮ್ಮ ಶಾಸಕರು, ಮಾಜಿ ಶಾಸಕರು ಯಾರು ಕೂಡ ಪಕ್ಷ ಬಿಡಲ್ಲ ಎಂದು ಬಿ.ಶ್ರೀರಾಮುಲು ಹೇಳಿದರು.

Latest Videos
Follow Us:
Download App:
  • android
  • ios