Asianet Suvarna News Asianet Suvarna News

ಕಾಮಗಾರಿ ಪರಿಶೀಲಿಸುವ ತನಕ ಹಣ ಪಾವತಿಸುವಂತಿಲ್ಲ: ಶಾಸಕ ವೀರೇಂದ್ರ ಪಪ್ಪಿ ಸೂಚನೆ

ನಗರದಲ್ಲಿನ ಅವೈಜ್ಞಾನಿಕ ಡಿವೈಡರ್‌ಗಳ ಮೇಲೆ ಬೆಳೆಸಲಾದ ಅಲಂಕಾರಿಕ ಗಿಡಗಳ ವೆಚ್ಚವನ್ನು ಪಾವತಿಸದಂತೆ ತಡೆ ಹಿಡಿಯಲು ಶಾಸಕ ವೀರೇಂದ್ರ ಪಪ್ಪಿ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

No money is released until the work is checked MLA Virendra Pappi notice at chitradurga rav
Author
First Published Jun 13, 2023, 9:49 PM IST | Last Updated Jun 13, 2023, 9:49 PM IST

ಚಿತ್ರದುರ್ಗ (ಜೂ.13) ನಗರದಲ್ಲಿನ ಅವೈಜ್ಞಾನಿಕ ಡಿವೈಡರ್‌ಗಳ ಮೇಲೆ ಬೆಳೆಸಲಾದ ಅಲಂಕಾರಿಕ ಗಿಡಗಳ ವೆಚ್ಚವನ್ನು ಪಾವತಿಸದಂತೆ ತಡೆ ಹಿಡಿಯಲು ಶಾಸಕ ವೀರೇಂದ್ರ ಪಪ್ಪಿ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾಜಿ ಅಧ್ಯಕ್ಷ ಮಂಜನಾಥ ಗೊಪ್ಪೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಲ್‌ ಪಾವತಿಗೆ ತಡೆ ನೀಡಿದರು. ಡಿವೈಡರ್‌ಗಳ ಮೇಲೆ ಮಣ್ಣು ಸುರಿದು ಅದರ ಮೇಲೆ ಚಿಕ್ಕ ಚಿಕ್ಕ ಗಿಡಗಳನ್ನು ನೆಡಲು ಎರಡು ಕೋಟಿ ರು. ಬಿಲ್‌ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪಾಸ್‌ ಮಾಡಬೇಡಿ ಎಂದು ಮಂಜುನಾಥ್‌ ಆಗ್ರಹಿಸಿದರು.

Shakti Scheme: ಚಿತ್ರದುರ್ಗದಲ್ಲಿ ಶಕ್ತಿ ಯೋಜನೆಗೆ ವೀರೇಂದ್ರ ಪಪ್ಪಿ ಚಾಲನೆ

ಐದು ವರ್ಷಕ್ಕೊಮ್ಮೆ ನಗರ ವಿಸ್ತರಣೆ:

ಅಮೃತ ಯೋಜನೆಯಡಿ ಆಗಿರುವ ಕಾಮಗಾರಿಗಳು ಕಳಪೆಯಾಗಿದ್ದರೆ ತನಿಖೆಗೊಳಪಡಿಸಬೇಕು. ಐದು ವರ್ಷಗಳ ಕಾಲ ಸರಿಯಾಗಿ ನೀರು ಪೂರೈಸುವ ಕೆಲಸ ನಿಭಾಯಿಸದಿದ್ದರೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಆಗಿರುವ ಕಾಮಗಾರಿಗಳನ್ನು ತನಿಖೆ ನಡೆಸಲು ನಿರ್ಣಯ ಮಾಡುವಂತೆ ಪೌರಾಯುಕ್ತರಿಗೆ ಎಚ್ಚರಿಸಿದರು. ಮೂವತ್ತು ವರ್ಷಗಳಿಂದ ನಗರದಲ್ಲಿ ಏನಾಗಿದೆ ಎನ್ನುವುದು ಬೇಕಾಗಿಲ್ಲ. ಮುಂದೆ ನಗರವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎನ್ನುವುದು ಮುಖ್ಯ. ಅದಕ್ಕಾಗಿ ಅಧಿಕಾರಿಗಳು ಹಾಗೂ ಸದಸ್ಯರುಗಳ ಪರಸ್ಪರ ಸಹಕಾರ ಬೇಕು. ರಾಜಮಹಾರಾಜರುಗಳು ಆಳಿದ ಐತಿಹಾಸಿಕ ಚಿತ್ರದುರ್ಗ ನಗರ ಹಿಂದೆ ಹೇಗಿತ್ತೋ ಈಗಲೂ ಹಾಗೆ ಇದೆ. ನಗರ ಅಭಿವೃದ್ಧಿ ಆಗದಿರುವು ದಕ್ಕೆ ಏನು ಕಾರಣ ಎಂದು ಒಂದು ವರ್ಷದ ಹಿಂದೆ ಸರ್ವೇ ಮಾಡಿಸಿದ್ದೇನೆ. ಪ್ರತಿ ಐದು ವರ್ಷಗಳಿಗೊಮ್ಮೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರ ವಿಸ್ತರಣೆಯಾಗಬೇಕು. ಅದು ಸಾಧ್ಯವಾಗದೇ ಹೋಗಿದೆ. ಕಾರಣಗಳೇನು ಎನ್ನುವುದನ್ನು ಹುಡುಕುವ ಬದಲು ಅಭಿವೃದ್ಧಿಗೆ ಏನು ಬೇಕೋ ಅದನ್ನು ಸರ್ಕಾರ ಮಟ್ಟದಿಂದ ಮಾಡಿಸಲು ಶ್ರಮಿಸುತ್ತೇನೆ ಎಂದರು.

ಒಳಚರಂಡಿ ವ್ಯವಸ್ಥೆಯಿಂದಾಗಿ ನಗರಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಕೊಳಚೆ ನೀರು ಮಲ್ಲಾಪುರ ಕೆರೆ ಸೇರಿ ಅಲ್ಲಿಂದ ಗೋನೂರಿಗೆ ಹೋಗುತ್ತದೆ. ನಗರಸಭೆಯಲ್ಲಿ ಕೇವಲ ಒಬ್ಬರೆ ಇಂಜಿನಿಯರ್‌ ಇದ್ದಾರೆ. ಇನ್ನು ನಾಲ್ಕೈದು ಇಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಿ. ಇಲ್ಲಿಯವರೆಗೂ ಕಾಮಗಾರಿಗಳಲ್ಲಿ ಆಗಿರುವ ತಾರತಮ್ಯಗಳನ್ನು ಪಟ್ಟಿಮಾಡಿ, ಇನ್ನು ಮುಂದೆ ನಗರದ 35 ವಾರ್ಡ್‌ಗಳಲ್ಲಿಯೂ ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಲಾಗುವುದು ಎಂದರು.

ಡಿವೈಡರ್‌ ತೆಗೆಯಲು ಕ್ರಮ:

ನಗರದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಡಿವೈಡರ್‌ಗಳನ್ನು ತೆಗೆಯುವುದಕ್ಕಾಗಿ ಸಂಬಂಧಪಟ್ಟಇಲಾಖೆಯವರಿಂದ ವರದಿ ಕೇಳಿದ್ದೇನೆ. ಶೇ.80ರಷ್ಟುಪೇಪರ್‌ ವರ್ಕ್ ಮುಗಿದಿ ದೆ. ಜುಲೈ ತಿಂಗಳೊಳಗೆ ಮುಗಿಸಬೇಕೆಂಬ ಗುರಿಯಿದೆ. ಸದಸ್ಯರುಗಳು ಚುರುಕಾಗಿ ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳಿ. ಖಾತೆ ಬದಲಾವಣೆ, ಇ-ಸ್ವತ್ತಿಗಾಗಿ ಜನರನ್ನು ವಿನಾಕಾರಣ ಅಲೆದಾಡಿಸಬೇಡಿ ಎಂದು ಪೌರಾಯುಕ್ತರು ಹಾಗೂ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದರು. 10, 11, 12 ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಮುಸ್ಲಿಂರಿದ್ದಾರೆ. ಅಂತಹ ವಾರ್ಡ್‌ಗಳನ್ನು ಹಿಂದಿನ ಶಾಸಕರು ಕಡೆಗಣಿಸಿದ್ದಾರೆ. ಒಂದು ಬೋರ್‌ ಕೂಡ ಕೊರೆಸಿಲ್ಲ. ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ಸದಸ್ಯರು ನೋವು ತೋಡಿಕೊಂಡರು.

ಶಾಂತಿಸಾಗರದಿಂದ ನೀರು ಸರಬರಾಜು ಮಾಡಿಕೊಳ್ಳುವುದಕ್ಕಾಗಿ ನಿರ್ಮಿಸಿರುವ ಟ್ಯಾಂಕ್‌ಗಳು ಕಳಪೆಯಾಗಿದೆ. ಬೇಕಾಬಿಟ್ಟಿಪೈಪ್‌ ಹಾಕಿ ಬಿಲ್‌ ತೆಗೆದುಕೊಂಡಿದ್ದಾರೆ. 35 ವಾರ್ಡ್‌ಗಳಲ್ಲಿ ಯಾವ್ಯಾವ ಕಾಮಗಾರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇಲ್ಲಿಯವರೆಗೂ ಆಗಿರುವ ಅಕ್ರಮ, ಹಗರಣಗಳ ತನಿಖೆಯಾಗಲಿ ಎಂದು ಸದಸ್ಯ ನಸ್ರುಲ್ಲಾ ದೂರಿದಾಗ ಯಾವುದೇ ಬಿಲ್‌ ಪಾಸ್‌ ಮಾಡಬೇಡಿ ತನಿಖೆಗೊಳಪಡಿಸಿ ಎಂದು ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.

ಸದಸ್ಯರಿಂದ ದೂರುಗಳ ಸುರಿಮಳೆ:

25ನೇ ವಾರ್ಡ್‌ ಸದಸ್ಯ ಜೈನುಲ್ಲಾಬ್ದಿನ್‌ ಮಾತನಾಡಿ, ನನ್ನ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಕೊಳಚೆ ಪ್ರದೇಶದಲ್ಲಿ ಒಂದು ಬೋರ್‌ ಇಲ್ಲ. ಕುಡಿಯುವ ನೀರಿಗೆ ತೊಂದರೆಯಿದೆ. ಹಿಂದಿನ ಶಾಸಕರು ನಮ್ಮ ವಾರ್ಡ್‌ನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂದು ಆಪಾದಿಸಿದರು. 32 ನೇ ವಾರ್ಡ್‌ ಸದಸ್ಯೆ ತಾರಕೇಶ್ವರಿ, ನನ್ನ ಗಮನಕ್ಕೆ ತಾರದೆ ಆಶ್ರಯ ಮನೆಗಳನ್ನು ನೀಡಲಾಗಿದೆ ಎಂದು ತನ್ನ ಅಸಹಾಯಕತೆಯನ್ನು ಶಾಸಕರ ಎದುರು ತೋಡಿಕೊಂಡರು. ಏಳನೆ ವಾರ್ಡ್‌ ಸದಸ್ಯೆ ಪಿ.ಕೆ.ಮೀನಾಕ್ಷಿ ನನ್ನ ವಾರ್ಡ್‌ ಅತ್ಯಂತ ಪುರಾತನ, ಹಿಂದುಳಿದಿದೆ. ಆಗಿರುವ ಕಾಮಗಾರಿಗಳೆಲ್ಲಾ ಕಳಪೆಯಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಸ್ವಚ್ಛತೆಯಿಲ್ಲ. ಬೋರ್‌ ಹಾಕಿಸಿಕೊಡಿ ಎಂದು ಶಾಸಕರಲ್ಲಿ ವಿನಂತಿಸಿದರು.

ನಾನು ಸೇಡಿನ ರಾಜಕಾರಣ ಮಾಡಲು ಹೋಗಲ್ಲ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ನಗರಸಭೆ ಮಾಜಿ ಅಧ್ಯಕ್ಷೆ ತಿಪ್ಪಮ್ಮ, ಮಾಜಿ ಉಪಾಧ್ಯಕ್ಷೆ ಶ್ವೇತಾ ವೀರೇಶ್‌, ಸದಸ್ಯರುಗಳಾದ ವೆಂಕಟೇಶ್‌, ಪೂಜಾ, ಗೀತಾ, ನಾಗಮ್ಮ, ಕೆ.ಬಿ.ಸುರೇಶ್‌, ಮಾಜಿ ಸದಸ್ಯರುಗಳಾದ ಫಕೃದ್ದಿನ್‌, ದಾವೂದ್‌, ರಮೇಶ್‌, ನಗರಸಭೆ ಮ್ಯಾನೇಜರ್‌ ಮಂಜುಳಾ, ಲೆಕ್ಕ ಅಧೀಕ್ಷಕ ಮೆಹಬೂಬ್‌ಆಲಿ, ಸಹಾಯಕ ಇಂಜಿನಿಯರ್‌ ಗಿರೆಡ್ಡಿ, ಪರಿಸರ ಇಂಜಿನಿಯರ್‌ ಜಾಫರ್‌, ಹೆಲ್ತ್‌ ಇನ್ಸ್‌ಪೆಕ್ಟರ್‌ಗಳು ಸಭೆಯಲ್ಲಿ ಹಾಜರಿದ್ದರು.

Latest Videos
Follow Us:
Download App:
  • android
  • ios