Asianet Suvarna News Asianet Suvarna News

ಲಿಂಗಾಯತ ಸೇರಿ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ: ಎಚ್‌.ಡಿ.ದೇವೇಗೌಡ

‘ನಾನು ಲಿಂಗಾಯತ ಸೇರಿ ನಾನು ಯಾವುದಾದರೂ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ನಗರದ ಎನ್.ಆರ್.ಸಂತೋಷ್ ಅವರ ನಿವಾಸದ ಬಳಿ ನಡೆದ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

No injustice done to any community Says HD DeveGowda gvd
Author
First Published Jan 20, 2024, 8:03 AM IST

ಅರಸೀಕೆರೆ (ಜ.19): ‘ನಾನು ಲಿಂಗಾಯತ ಸೇರಿ ನಾನು ಯಾವುದಾದರೂ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ನಗರದ ಎನ್.ಆರ್.ಸಂತೋಷ್ ಅವರ ನಿವಾಸದ ಬಳಿ ನಡೆದ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ‘ಯಾವುದಾದರೂ ಸಮುದಾಯಕ್ಕೆ ಅನ್ಯಾಯ ಮಾಡಿದ್ದರೆ ಹೇಳಿ, ಅರಸೀಕೆರೆ ಕುಡಿಯುವ ನೀರಿಗೆ ೨೪ ಬೋರ್ವೆಲ್ ಕೊರೆಸಿದೆ. ಆದರೆ ಆ ನೀರು ಕುಡಿಯುಲು ನೀರು ಯೋಗ್ಯವಲ್ಲ ಅಂದರು. ಹೇಮಾವತಿ ನದಿಯಿಂದ ನೇರವಾಗಿ ನೀರು ತಂದೆ. 

ಯಾವುದೇ ಒಬ್ಬ ವ್ಯಕ್ತಿಯ ಹೆಸರು ಹೇಳಿ ಮತ ಕೇಳಲು ಬಂದಿಲ್ಲ. ಅವರು ದೊಡ್ಡವರಿರಬಹುದು ಅವರ ಬಗ್ಗೆ ಮಾತನಾಡಲ್ಲ’ ಎಂದು ಮೂಲಕ ಪರೋಕ್ಷವಾಗಿ ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಗೌಡರು, ‘ದೆಹಲಿಯಲ್ಲಿ ಮೋದಿ ಅವರ ಪಕ್ಕ ಕುಮಾರಸ್ವಾಮಿ, ರೇವಣ್ಣ ನಿಂತಿದ್ದರು, ಅವರನ್ನು ಬಿಟ್ಟು ನನ್ನನ್ನು ಕೈ ಹಿಡಿದು ಕೂರಿಸಿ ನೀವು ದೇಶಕ್ಕೆ ಸೇವೆ ಮಾಡಿದ್ದೀರಿ ಎಂದರು. ನನ್ನ ಬಗ್ಗೆ ಗ್ರೇಟ್ ಮ್ಯಾನ್ ಎಂದು ಟ್ವೀಟ್ ಮಾಡಿದರು’ ಎಂದು ಪ್ರಧಾನಿ ಮೋದಿ ಅವರನ್ನು ಹೊಗಳಿದರು. ಸಂತೋಷ್‌ಗೆ ಅವಕಾಶ: ‘ನನ್ನ ಜೀವನದ ಕಡೆಯ ಘಟ್ಟದಲ್ಲಿದ್ದೇನೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 

ಗೋಧ್ರಾ ಹೇಳಿಕೆ: ನನ್ನನ್ನು ಅರೆಸ್ಟ್ ಮಾಡಿ, ನನಗೆ VVIP ಟ್ರೀಟ್ಮೆಂಟ್ ಬೇಕಾಗಿಲ್ಲ: ಬಿ.ಕೆ.ಹರಿಪ್ರಸಾದ್

ನಾನು ಹೋಗುವ ಮುಂಚೆ ಅರಸೀಕೆರೆಯಲ್ಲಿ ಜೆಡಿಎಸ್ ಗೆಲ್ಲಬೇಕು. ಯಾರನ್ನು ನಿಲ್ಲಿಸಬೇಕು’ ಎಂದು ಅಶೋಕ್‌ಗೆ ಕೇಳಿದರು. ಅದಕ್ಕೆ ಸಂತೋಷ್ ಅವರನ್ನು ನಿಲ್ಲಿಸಿ ಎಂದು ಬಾಣಾವರ ಅಶೋಕ್ ಹೇಳಿದರು. ಮುಂದುವರಿದು ‘ಅಶೋಕ್ ನಿನ್ನನ್ನು ಕೈ ಬಿಡಲ್ಲ, ವಿಧಾನ ಪರಿಷತ್‌ನಲ್ಲಿ ಕೂರಿಸುತ್ತೇನೆ’ ಎಂದರು. ‘ಯಾರೇ ಏನು ಹೇಳಲಿ ಅಶೋಕ್‌ಗೆ ನಾನು ಮೋಸ ಮಾಡುವುದಿಲ್ಲ. ನಾನು ಓಟಿಗೋಸ್ಕರ ಹೇಳುತ್ತಿಲ್ಲ. ಸಭೆಯಲ್ಲಿ ಮಾತು ಕೊಟ್ಟಿದ್ದೇನೆ.  ಸಂತೋಷ್ ವಿಧಾನಸಭೆಗೆ ಹೋಗಲಿ, ಅಶೋಕ್ ವಿಧಾನ ಪರಿಷತ್‌ಗೆ ಹೋಗಲಿ’ ಎಂದು ಹರಿಸಿದರು.  ಈ ಮೂಲಕ ಮುಂದಿನ ಚುನಾವಣೆಯಲ್ಲೂ ಸಂತೋಷ್ ಅವರೇ ಅಭ್ಯರ್ಥಿ ಎಂದು ಗೌಡರು ಹೇಳಿದರು. 

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ ಏನು ಮಾಡಲಿಲ್ಲ ಎಂದು ಅಪ ಪ್ರಚಾರ ಮಾಡಿದರು, ನಾವು ಜಾತ್ಯಾತೀತವಾಗಿ ಎಲ್ಲರಿಗೂ ಶಕ್ತಿ ತುಂಬೊ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ನಾವು ಮಾಡಿದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡುತ್ತೇವೆ. ಮನೆ ಮನೆಗೂ ನಮ್ಮ ಕೆಲಸಗಳ ಮಾಹಿತಿ ತಲುಪಿಸುತ್ತೇವೆ. ಸಣ್ಣಪುಟ್ಟದಾಗಿ ಏನೋ ಮಾಡಿ ಡಂಗೂರ ಹೊಡೆಯೋದು ಸಾಧನೆ ಅಲ್ಲ’ ಎಂದು ಪರೋಕ್ಷವಾಗಿ ಶಿವಲಿಂಗೇಗೌಡರಿಗೆ ತಿರುಗೇಟು ನೀಡಿದರು. ‘ಸಾವಿರಾರು ಕೋಟಿ ಅನುದಾನವನ್ನು ಕೇವಲ ರಸ್ತೆ ಅಭಿವೃದ್ಧಿಗೆ ತಂದಿದ್ದೇವೆ. ರೇವಣ್ಣ ಅವರು ಇಂಧನ ಸಚಿವರಿದ್ದಾಗ ರೈತರು ೫ ಸಾವಿರ ರು. ಕೊಟ್ಟರೆ ಟಿಸಿ ಹಾಕಿಕೊಡುತ್ತಿದ್ದರು. 

ಕೆಲ ಸ್ವಾಮೀಜಿಗಳಿಂದ ರಾಜಕೀಯಕ್ಕಾಗಿ ಶ್ರೀ ರಾಮಮಂದಿರ ಬಗ್ಗೆ ಅಪಸ್ವರ: ಸಂಸದ ಪ್ರತಾಪ್ ಸಿಂಹ

ಈಗ ದುಬಾರಿ ಮಾಡಿದ್ದಾರೆ. ಆದರೂ ಟಿಸಿ ಕೊಡುತ್ತಿಲ್ಲ, ಕೊಟ್ಟರೂ ರೈತರೇ ಸಂಪೂರ್ಣ ಖರ್ಚು ಭರಿಸಬೇಕು ಎಂದು ದೂರಿದರು. ಇದು ರೈತರ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು. ದೇವೇಗೌಡರ ಪ್ರಯತ್ನದಿಂದ ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳ ಆಗಿದೆ’ ಎಂದರು. ಸಭೆಯಲ್ಲಿ ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಬೇಲೂರಿನ ಮಾಜಿ ಶಾಸಕ ಲಿಂಗೇಶ್, ಜೆಡಿಎಸ್ ಮುಖಂಡ ಎನ್‌.ಆರ್‌. ಸಂತೋಷ್ ತಾಲೂಕ್ ಅಧ್ಯಕ್ಷ ಚಂದ್ರಶೇಖರ್ ಇದ್ದರು. ಅರಸೀಕೆರೆಯ ಎನ್.ಆರ್.ಸಂತೋಷ್ ಅವರ ನಿವಾಸದ ಬಳಿ ನಡೆದ ಪಕ್ಷದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿದರು.

Follow Us:
Download App:
  • android
  • ios