ಪಕ್ಷ ತೊರೆದವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಅವರು ಸಹ ನಮ್ಮನ್ನು ಭೇಟಿ ಮಾಡಿಲ್ಲ  - ಆರ್‌ ವಿ ದೇಶಪಾಂಡೆ  ಸಿಎಂ ಹುದ್ದೆಗೆ ಯಾವುದೇ ಪೈಪೋಟಿ ನಡೆದಿಲ್ಲ ಎಂದ ದೇಶಪಾಂಡೆ

ಹುಬ್ಬಳ್ಳಿ (ಜು.04): ಪಕ್ಷ ತೊರೆದವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳುವ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ. ಅವರು ಸಹ ನಮ್ಮನ್ನು ಭೇಟಿ ಮಾಡಿಲ್ಲ ಎಂದು ಶಾಸಕ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

 ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವ 17 ಜನರು ಕಾಂಗ್ರೆಸ್‌ಗೆ ಬರುವುದಾದರೆ ಮೊದಲು ಅರ್ಜಿ ಹಾಕಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು. 

ಡಿಕೆಶಿ ಹೇಳಿದ್ರು ಅಂತಾ ಕಾಂಗ್ರೆಸ್‌ಗೆ ಅರ್ಜಿ ಹಾಕೋಕಾಗುತ್ತಾ? .

ಇದೇ ವೇಳೆ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿ, ಪಕ್ಷದಲ್ಲಿ ಸಿಎಂ ಹುದ್ದೆಗೆ ಯಾವುದೇ ಪೈಪೋಟಿ ನಡೆದಿಲ್ಲ ಎಂದರು. 

ಇನ್ನು ಸಿಎಂ ಹುದ್ದೆಗೆ ಕುರಿತು ಚರ್ಚೆ ನಡೆಯುತ್ತಿದೆಯೆಂದರೆ ಅದು ಪಕ್ಷಕ್ಕಿರುವ ಡಿಮ್ಯಾಂಡ್‌ ಅಲ್ವಾ ಎಂದು ಹಾಸ್ಯ ಚಟಾಕಿ ಹಾರಿಸಿದರು.