ಬಿಜೆಪಿ ನಮಗೆ ಸಚಿವ ಸ್ಥಾನ ನೀಡುವ ಮೂಲಕ ಅ​ಧಿಕಾರವನ್ನು ನೀಡಿದೆ ಡಿ.ಕೆ.ಶಿವಕುಮಾರ್‌ ಹೇಳಿದರೆಂದು ಕಾಂಗ್ರೆಸ್‌ ಪಕ್ಷ ಸದಸ್ಯತ್ವ ಬಯಸಿ ಅರ್ಜಿ ಹಾಕಲು ಆಗುತ್ತಾ ಈಗ ನನಗೆ ಸಿಕ್ಕಿರುವ ಅ​ಧಿಕಾರ ವ್ಯಾಪ್ತಿಯಲ್ಲಿ ನನ್ನ ಕರ್ಮಭೂಮಿ ಹೊಸಕೋಟೆ ಅಭಿವೃದ್ಧಿಗೆ ಶ್ರಮಿಸುತ್ತೇನೆ

ಹೊಸಕೋಟೆ (ಜು.04): ಬಿಜೆಪಿ ನಮಗೆ ಸಚಿವ ಸ್ಥಾನ ನೀಡುವ ಮೂಲಕ ಅ​ಧಿಕಾರವನ್ನು ನೀಡಿದೆ. ಆದರೆ ಡಿ.ಕೆ.ಶಿವಕುಮಾರ್‌ ಹೇಳಿದರೆಂದು ಕಾಂಗ್ರೆಸ್‌ ಪಕ್ಷ ಸದಸ್ಯತ್ವ ಬಯಸಿ ಅರ್ಜಿ ಹಾಕಲು ಆಗುತ್ತಾ ಎಂದು ಸಚಿವ ಎಂಟಿಬಿ ನಾಗರಾಜ್‌ ಪ್ರಶ್ನಿಸಿದ್ದಾರೆ. 

ಹೊಸಕೋಟೆಯಲ್ಲಿ ಶನಿವಾರ ಮಾತನಾಡಿದ ಎಂಟಿಬಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವ 17 ಜನರು ಕಾಂಗ್ರೆಸ್‌ಗೆ ಬರುವುದಾದರೆ ಮೊದಲು ಅರ್ಜಿ ಹಾಕಲಿ. ನಂತರ ಪಕ್ಷದ ತೀರ್ಮಾನ ನೋಡೋಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು, ‘ಉಳಿದ 16 ಜನರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. 

ಎಂಟಿಬಿಗೆ ಚುನಾವಣೆಗೆ ಟಿಕೆಟ್ ಕೊಡಿಸಿದ್ದು ನಾನೆ : ಡಿಕೆಶಿ

ಆದರೆ ನಾನು ಮಾತ್ರ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದಲ್ಲಿ ಅಗತ್ಯ ಅನುದಾನ ಧಕ್ಕದ ಹಿನ್ನೆಲೆ ಪಕ್ಷ ಬಿಟ್ಟು ಬಂದೆ. ಈಗ ನನಗೆ ಸಿಕ್ಕಿರುವ ಅ​ಧಿಕಾರ ವ್ಯಾಪ್ತಿಯಲ್ಲಿ ನನ್ನ ಕರ್ಮಭೂಮಿ ಹೊಸಕೋಟೆ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.