ಮೈಸೂರು, (ಮಾ.14) : ಇನ್ನು ಮುಂದೆ ಜೆಡಿಎಸ್ ಜೊತೆ ಕಾಂಗ್ರೆಸ್ ಯಾವುದೇ ಮೈತ್ರಿ ಇಲ್ಲ. ಸಹಕಾರ ಸಂಘಗಳ ಚುನಾವಣೆ ಚಿಹ್ನೆ ಮೇಲೆ ನಡೆಯಲ್ಲ. ಸ್ಥಳೀಯವಾಗಿ ಅವರು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆಡಿಎಸ್ ಗೆ ಯಾವುದೇ ಬೆಂಬಲ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ

 ಮೈಸೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದರು ಅಷ್ಟೆ, ಯಾರು ಹೇಳಿದ್ರು ಅಷ್ಟೆ. ಇನ್ನು ಮುಂದೆ ಮೈತ್ರಿ ಇಲ್ಲ ಕಡ್ಡಿ ಮುರಿದಂತೆ ಹೇಳಿದರು.

 ಜಿ.ಟಿ.ದೇವೇಗೌಡ್ರಿಗೆ ಜೆಡಿಎಸ್ ಬಾಗಿಲು ಬಂದ್..!

ಇದೇ ವೇಳೆ ರಮೇಶ್ ಜಾರಕಿಹೊಳಿ ಸಿ.ಡಿ.ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದು,  ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಲಿ. ಡಿಕೆಶಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ಅವರಿಗೆ ಅನ್ನಿಸಿರಬಹುದು. ನನ್ನನ್ನು ಸಿಕ್ಕಿಸುತ್ತಿದ್ದಾರೆ ಅಂತ ಡಿಕೆಶಿಯೇ ಹೇಳಿದ್ದಾರೆ. ಈಗ ತನಿಖೆ ನಡೆಯುತ್ತಿದೆ. ಇಂತಹ ಪ್ರಕರಣಗಳಿಂದ ರಾಜಕಾರಣಿಗಳ ಮಾನ ಮರ್ಯಾದೆ ಹೋಗುತ್ತೆ. ಜನರು ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡಲು ಶುರು ಮಾಡ್ತಾರೆ. ಆಗ ನಾವೇನು ಮಾಡೋಕಾಗಲ್ಲ ಎಂದರು.