ಮೊದಲು ಮರಿಯಾನೆ ಜೀರ್ಣಿಸಿಕೊಳ್ಳಲಿ: ಯೋಗೇಶ್ವರ್‌ಗೆ ನಿಖಿಲ್‌ ಕುಮಾರಸ್ವಾಮಿ ತಿರುಗೇಟು

ಯೋಗೇಶ್ವರ್‌ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ: ನಿಖಿಲ್‌ ಕುಮಾರಸ್ವಾಮಿ 

Nikhil Kumarswamy Slams BJP MLC CP Yogeeshwara grg

ಚನ್ನಪಟ್ಟಣ(ನ.09): ಆನೆ ಇರಲಿ ಮೊದಲು ಮರಿಯಾನೆಯನ್ನು ಅವರು ಜೀರ್ಣಿಸಿಕೊಳ್ಳಲಿ ಎಂದು ವಿಧಾನಪರಿಷತ್‌ ಸದಸ್ಯ ಯೋಗೇಶ್ವರ್‌ಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿರುಗೇಟು ನೀಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್‌ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಲ್ಲಿನ ಮಾಜಿ ಶಾಸಕರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದು, ಮಾಜಿ ಶಾಸಕರು ಮಾಜಿಗಳಿಗೆ ಉಳಿಯಲಿದ್ದಾರೆ ಎಂದು ಟಾಂಗ್‌ ನೀಡಿದರು.

ಚುನಾವಣೆ ವೇಳೆ ಅವರ ಕುಟುಂಬದವರು ಏಕೆ ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ನಾವೆಂದೂ ಅವರನ್ನು ಪ್ರಶ್ನಿಸಲ್ಲ. ಅವರ ಕುಟುಂದವರು ಧಾರಾಳವಾಗಿ ಬಂದು ಪ್ರಚಾರ ಮಾಡಲಿ. ಇದು ಪ್ರಜಾಪ್ರಭುತ್ವ, ಯಾರು ಎಲ್ಲಿ ಬೇಕಾದರೂ ಹೋಗಬಹುದು. ಆ ವಿಚಾರದಲ್ಲಿ ನಾವು ಸಣ್ಣತನದ ರಾಜಕಾರಣ ಮಾಡುವುದಿಲ್ಲ ಎಂದರು.

RAMANAGAR : ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿಪಿವೈ

ಚನ್ನಪಟ್ಟಣ ನಮ್ಮ ತಂದೆ ಪ್ರತಿನಿಧಿಸುವ ಕ್ಷೇತ್ರ. ಎಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಶ್ರೀರಂಗಪಟ್ಟಣದಲ್ಲಿ ಒಂದು ಕಾರ್ಯಕ್ರಮದಲ್ಲಿ ಗುದ್ದಲಿಪೂಜೆ ನೆರವೇರಿಸಲು ಒತ್ತಾಯಿಸಿದರು. ಆದರೆ, ನನಗೆ ಜನ ಶಕ್ತಿ ನೀಡಿದಾಗ ಗುದ್ದಲಿ ಪೂಜೆ ಮಾಡುತ್ತೇನೆ ಎಂದಿದ್ದೆ. ನನ್ನ ಇತಿಮಿತಿಗಳೇನು ಎಂಬುದರ ಅರಿವು ನನಗಿದೆ. ಜೆಡಿಎಸ್‌ ಯುವ ಘಟಕದ ಜವಾಬ್ದಾರಿ ನನ್ನ ಮೇಲಿದೆ. ವರಿಷ್ಠರು ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಇದರ ಜತೆಗೆ ಕುಮಾರಸ್ವಾಮಿಯವರ ಕನಸಿನ ಯೋಜನೆ ಪಂಚರತ್ನ ರಾಜ್ಯದ ಎಲ್ಲಾ ಕಡೆ ಸಂಚರಿಸಲಿದೆ. ಹೀಗಾಗಿ ಅವರು ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನರೊಂದಿಗೆ ನಾನು ನಿಲ್ಲುವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಕಳೆದ 20 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ನಾಲ್ಕು ವರ್ಷದಲ್ಲಿ ಆಗಿವೆ. 1500 ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ, ಸೇತುವೆ, ನೀರಾವರಿ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಂಡಿದೆ. ಯೋಗೇಶ್ವರ್‌ ಕಾಲದಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಅದನ್ನು ಕುಮಾರಣ್ಣ ಸರಿಪಡಿಸಿ ಅಭಿವೃದ್ಧಿಗೊಳಿಸಿದ್ದಾರೆ. ಸಿಪಿವೈ ಅರು ತಿಂಗಳು ಕಾದು ನೋಡಲಿ, ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರ ಮಾದರಿ ತಾಲೂಕು ಆಗಲಿದೆ. 2023ರ ವಿಧಾನಸಭೆ ಚುನಾವಣೆ ನಂತರ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವುದು ಶತಸಿದ್ಧ. ಇದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್‌: ಸಚಿವ ಅಶ್ವತ್ಥ್‌

ಇದೇ ವೇಳೆ ನಿಖಿಲ್‌ ಕುಮಾರಸ್ವಾಮಿ ತಾಲೂಕಿನ ಸಿಂಗರಾಜಿಪುರ, ಬ್ರಹ್ಮಣಿಪುರ, ಅಂಬಾಡಹಳ್ಳಿ, ತಗಚಗೆರೆ ಗ್ರಾಮಗಳಿಗೆ ಭೇಟಿ ನೀಡಿದರು. ಕನಕಪುರದ ಸುಂಡಗಟ್ಟದಲ್ಲಿ ಆನೆ ದಾಳಿಯಿಂದ ಮೃತಪಟ್ಟಅರಣ್ಯ ಇಲಾಖೆ ವಾಚರ್‌ ಹೊಳಸಾಲಯ್ಯಅಂತಿಮ ಸಂಸ್ಕಾರದಲ್ಲಿ ಭಾಗಿಯಾದರು. ಸಿಂಗರಾಜಿಪುರದಲ್ಲಿ ಇತ್ತೀಚೆಗೆ ಮೃತ ಪಟ್ಟಕುಮಾರ ಮನೆಗೆ ಭೇಟಿ ನೀಡಿ ಕುಕ್ಕುರ್‌ ಬ್ಲಾಸ್ಟ್‌ನಿಂದ ಗಾಯಗೊಂಡಿದ್ದ ಮಗು ಭವ್ಯಳ ಆರೋಗ್ಯ ವಿಚಾರಿಸಿ ವೈದ್ಯಕೀಯ ನೆರವಿನ ಭರವಸೆ ನೀಡಿದರು.

ಯಾರ ಅಪ್ಪಣೆಯೂ ಬೇಕಿಲ್ಲ:

ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿಯವರು. ರಾಮನಗರ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಅವಿನಭಾವ ಸಂಬಂಧವಿದೆ. ಆದ್ದರಿಂದ ಇಲ್ಲಿನ ಜನರ ಕಷ್ಟಸುಖದಲ್ಲಿ ಭಾಗಿಯಾಗಲು, ಅವರ ಸಂಕಷ್ಟಕೇಳಲು ನಾನು ಬಂದಿದ್ದೇನೆ. ಜನರ ಕಷ್ಟಕೇಳಲು ಬರಲು ನನಗೆ ಯಾರ ಅಪ್ಪಣೆಯ ಅಗತ್ಯವೂ ಇಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್‌ ದೇವರಾಜು, ಮುಖಂಡರಾದ ಸಿ.ಲಿಂ.ನಾಗರಾಜು, ಬಾನುಪ್ರಕಾಶ್‌ ಮುಂತಾದರು ಇದ್ದರು.
 

Latest Videos
Follow Us:
Download App:
  • android
  • ios