Asianet Suvarna News Asianet Suvarna News

Ramanagara: ಪಂಚ​ರತ್ನ ಯೋಜನೆ ಅನು​ಷ್ಠಾನದ ಗುರಿ: ನಿಖಿಲ್‌ ಕುಮಾ​ರ​ಸ್ವಾಮಿ

ಜೆಡಿ​ಎಸ್‌ ಪಕ್ಷ ರೂಪಿ​ಸಿ​ರುವ ಪಂಚ​ರತ್ನ ಕಾರ್ಯ​ಕ್ರಮ ಅನುಷ್ಠಾನಗೊಳಿ​ಸು​ವುದೇ ನಮ್ಮ ಗುರಿಯಾಗಿದೆ. ಇದ​ಕ್ಕಾ​ಗಿ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ ಆರಂಭಿ​ಸಿ​ರುವ ಹೋರಾ​ಟಕ್ಕೆ ಅಭೂ​ತ​ಪೂರ್ವ ಸ್ಪಂದನೆ ವ್ಯಕ್ತ​ವಾ​ಗು​ತ್ತಿದೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು. 

Nikhil Kumaraswamy Talks Over JDS Pancharatna Rathayatra At Ramanagara gvd
Author
First Published Dec 3, 2022, 8:24 PM IST

ರಾಮ​ನ​ಗರ (ಡಿ.03): ಜೆಡಿ​ಎಸ್‌ ಪಕ್ಷ ರೂಪಿ​ಸಿ​ರುವ ಪಂಚ​ರತ್ನ ಕಾರ್ಯ​ಕ್ರಮ ಅನುಷ್ಠಾನಗೊಳಿ​ಸು​ವುದೇ ನಮ್ಮ ಗುರಿಯಾಗಿದೆ. ಇದ​ಕ್ಕಾ​ಗಿ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ ಆರಂಭಿ​ಸಿ​ರುವ ಹೋರಾ​ಟಕ್ಕೆ ಅಭೂ​ತ​ಪೂರ್ವ ಸ್ಪಂದನೆ ವ್ಯಕ್ತ​ವಾ​ಗು​ತ್ತಿದೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹೇಳಿ​ದರು. ನಗ​ರದ ನಿರ್ಮಾ​ಣ​ಗೊಂಡಿ​ರುವ ಗ್ಯಾಲಕ್ಸಿ ಸ್ಪೋಟ್ಸ್‌ ರ್‍ ಅಂಡ್‌ ಕಲ್ಚ​ರಲ್‌ ಸೆಂಟರ್‌ ಅನ್ನು ಲೋಕಾ​ರ್ಪಣೆ ಮಾಡಿದ ನಿಖಿಲ್‌ ಕುಮಾ​ರ​ಸ್ವಾಮಿ, 14 ದಿನಕ್ಕೆ ಕಾಲಿ​ಟ್ಟಿ​ರುವ ಪಂಚ​ರತ್ನ ರಥ​ಯಾ​ತ್ರೆಗೆ ಎಲ್ಲೆಡೆ ಜನ​ರಿಂದ ಅಭೂ​ತ​ಪೂರ್ವ ಸ್ವಾಗ​ತ ದೊರ​ಕು​ತ್ತಿದೆ. ಮಕ್ಕ​ಳಿಗೆ ಗುಣ​ಮ​ಟ್ಟದ ಶಿಕ್ಷಣ ಹಾಗೂ ಜನ​ರಿಗೆ ಸೂಕ್ತ ಆ​ರೋಗ್ಯ ಸೇವೆ ಸಿಗು​ತ್ತಿಲ್ಲ. 

ನಿರು​ದ್ಯೋ​ಗಿ​ಗ​ಳಿಗೆ ಉದ್ಯೋ​ಗಾ​ವ​ಕಾಶ ಇಲ್ಲ​ದಂತಾ​ಗಿದೆ. ಇದೆ​ಲ್ಲ​ದಕ್ಕೂ ಪರಿ​ಹಾರ ಕಲ್ಪಿ​ಸ​ಬೇ​ಕೆಂಬುದು ಪಂಚ​ರತ್ನ ಕಾರ್ಯ​ಕ್ರ​ಮದ ಮುಖ್ಯ ಉದ್ದೇ​ಶ​ವಾ​ಗಿದೆ. ಒಂದ​ರಿಂದ ಪದ​ವಿ​ವ​ರೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಪ್ರತಿ ಗ್ರಾಮ ಪಂಚಾ​ಯಿತಿ ಮಟ್ಟ​ದಲ್ಲಿ 30 ಹಾಸಿ​ಗೆಯ ಹೈಟೆಕ್‌ ಆಸ್ಪತ್ರೆ ನಿರ್ಮಾಣ, ಪ್ರತಿ​ಯೊ​ಬ್ಬ​ರಿಗೂ ವಸತಿ ಹಾಗೂ ಪ್ರತಿ ಜಿಲ್ಲೆ​ಯಲ್ಲಿ ಕೈಗಾ​ರಿಕೆ ಸ್ಥಾಪಿಸಿ ಯುವ​ಜ​ನ​ರಿಗೆ ಉದ್ಯೋಗ ನೀಡಿ ನಿರು​ದ್ಯೋಗ ಸಮಸ್ಯೆ ಹೋಗ​ಲಾ​ಡಿ​ಸು​ವುದು ಪಂಚ​ರತ್ನ ಕಾರ್ಯ​ಕ್ರ​ಮ​ಗಳ ಭಾಗ​ವಾ​ಗಿದೆ ಎಂದು ಹೇಳಿ​ದರು.

ಕೆಂಪೇ​ಗೌ​ಡರಿಗೆ 'ಪ್ರತಿಮೆ' ಗೌರವ ಸಮರ್ಪಣೆ: ಸಚಿವ ಅಶ್ವತ್ಥ್‌ ನಾರಾಯಣ

ಗ್ಯಾಲಕ್ಸಿ ಸ್ಪೋರ್ಟ್ಸ್ ಸೆಂಟರ್‌ ಲೋಕಾ​ರ್ಪ​ಣೆ: ವೇದಿಕೆ ಕಾರ್ಯ​ಕ್ರಮ ಆರಂಭಕ್ಕೂ ಮುನ್ನ ಸೆಂಟರ್‌ನಲ್ಲಿರುವ ಬ್ಯಾಡ್ಮಿಂಟನ್‌ ಕೋರ್ಚ್‌, ಟೆಬಲ್‌ ಟೆನಿಸ್‌, ಈಜು ಕೊಳ, ಜಿಮ್‌ ಅನ್ನು ವೀಕ್ಷಣೆ ಮಾಡಿದ ನಿಖಿಲ್‌ ರವ​ರು,ಜನ​ರಿಗೆ ಒಳ ಕ್ರೀಡಾಂಗ​ಣದ ಅವ​ಶ್ಯ​ಕತೆ ಇತ್ತು. ಆ ಕಾರ್ಯ ಸುಸ​ಜ್ಜಿತ ಒಳ ಕ್ರೀಡಾಂಗಣ ನಿರ್ಮಾ​ಣದ ಮೂಲಕ ಸಾಕಾ​ರ​ಗೊಂಡಿದೆ. ಈ ಸೆಂಟರ್‌ನಲ್ಲಿ ಜನರು ಒಂದು ಅಥವಾ ಹೆಚ್ಚಿನ ಕ್ರೀಡಾ ಚಟು​ವ​ಟಿ​ಕೆ​ಗ​ಳಲ್ಲಿ ಭಾಗ​ವ​ಹಿ​ಸಲು ಅನು​ಕೂ​ಲ​ವಾ​ಗ​ಲಿದೆ. ಮಾನ​ಸಿಕ ಹಾಗೂ ದೈಹಿ​ಕ​ವಾಗಿ ಸದೃ​ಢ​ವಾ​ಗಿ​ರಲು ಕ್ರೀಡೆ ಸಹ​ಕಾ​ರಿ​ಯಾ​ಗಿದೆ. ಯುವ​ಜ​ನರು ಜಿಮ್‌ಗಳಲ್ಲಿ ಏಕಾಏಕಿ ವರ್ಕ್ಔಟ್‌ ಮಾಡ​ಬಾ​ರದು. ಆಗಾಗ ಆರೋಗ್ಯ ತಪಾ​ಸಣೆಗೆ ಒಳ​ಗಾದ ನಂತರ ಜಿಮ್‌ನಲ್ಲಿ ತರ​ಬೇ​ತು​ದಾ​ರರ ಮಾರ್ಗ​ದ​ರ್ಶ​ನ​ದಲ್ಲಿ ವರ್ಕೌಟ್‌ ಮಾಡು​ವು​ದು ಸೂಕ್ತ ಎಂದು ಹೇಳಿ​ದರು.

Ramanagara: ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯೇ ಇಲ್ಲ!

ಶಾಸಕ ಎ.ಮಂಜು​ನಾಥ್‌, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ಹರೀ​ಸಂದ್ರ ಗ್ರಾಪಂ ಮಾಜಿ ಅಧ್ಯಕ್ಷೆ ಆಶಾ ಮಂಚೇ​ಗೌ​ಡ, ಗ್ಯಾಲಕ್ಸಿ ಸ್ಪೋರ್ಟ್ಸ್ ಅಂಡ್‌ ಕಲ್ಚ​ರಲ್‌ ಅಸೋ​ಸಿ​ಯೇ​ಷನ್‌ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಉಪಾ​ಧ್ಯಕ್ಷ ಮುನಿ​ರಾಜು, ಖಜಾಂಚಿ ಎಸ್‌.ಮ​ಮತಾ, ಕಾರ್ಯ​ದರ್ಶಿ ಆರ್‌.ನಿ​ತೀನ್‌, ನಿರ್ದೇ​ಶ​ಕ​ರಾದ ಗೀತಾ, ಉಮಾ ರವಿ, ಸುನಂದಮ್ಮ ಇತರರಿ​ದ್ದ​ರು.

Follow Us:
Download App:
  • android
  • ios