ಮಂಡ್ಯ[ಜ.23]  ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಇಟ್ಟುಕೊಳ್ಳುತ್ತದೆಯೋ ಅಥವಾ ಜೆಡಿಎಸ್‌ಗೆ ಬಿಟ್ಟುಕೊಡುತ್ತದೆಯೋ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.  ಅಭಿಷೇಕ್ ಅಂಬರೀಶ್, ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಹಲವು ಸಾರಿ ಕೇಳಿಬಂದಿದೆ. ಇದೆ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದವರು ನಿಖಿಲ್ ಬಳಿ ಪ್ರಶ್ನೆ ಮಾಡಿದ್ದರು.

ಮಂಡ್ಯದಲ್ಲಿ ತಮ್ಮ ಸಿನಿಮಾ ‘ಸೀತಾರಾಮ ಕಲ್ಯಾಣ’ ದ ಶೂಟಿಂಗ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದರು. ಈ ವೇಳೆ ಚಿತ್ರಕ್ಕೆ ಸಂಬಂಧಿಸಿ ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು. ನಿಖಿಲ್ ಗೆ ಮಂಡ್ಯದಲ್ಲಿ ಸೀಟ್ ಸಿಕ್ಕಿದ್ರೆ ರಾಜಕೀಯಕ್ಕೆ ಬರ್ತಿರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಿಖಿಲ್ ‘ಸಿನಿಮಾನ ಸಿನಿಮಾ ರೀತಿ ನೋಡಿ‌ ಅದನ್ನ ಪೋಲಿಟಿಸೈಜ್ ಮಾಡೋದು ಬೇಡ’ ಎಂಬ ಉತ್ತರ ನೀಡಿದರು.

ಅಂಬರೀಶ್ ಕುಟುಂಬಕ್ಕಿಲ್ಲ ಮಂಡ್ಯ ಟಿಕೆಟ್

ಒಟ್ಟಿನಲ್ಲಿ ರಾಜಕಾರಣ ಬೇರೆ, ಸಿನಿಮಾ ಬೇರೆ ಎಂದು ನಿಖಿಲ್ ಈ ಮೂಲಕ ಸ್ಪಷ್ಟಪಡಿಸಿದರು.  ಸಿನಿಮಾವನ್ನು ಸಿನಿಮಾ  ಎಂದೇ ನೋಡಿ ಎನ್ನುವ ಮೂಲಕ ರಾಜಕಾರಣದ ಪ್ರಶ್ನೆ ಕೇಳಬೇಡಿ ಎಂದು ತಿಳಿಸಿದರು.