ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ ಎಡಬಿಡಂಗಿತನದ್ದು: ಡಿ.ಕೆ.ಶಿವಕುಮಾರ್‌

ರಾಮನಗರ ಜಿಲ್ಲೆಯ ಜನರಿಗೂ, ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

The opposition to the name change of Ramanagara district is wrong says dk shivakumar gvd

ಕನಕಪುರ (ಜು.29): ರಾಮನಗರ ಜಿಲ್ಲೆಯ ಜನರಿಗೂ, ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮೊದಲು ಕನಕಪುರ ಲೋಕಸಭಾ ಕ್ಷೇತ್ರವಾಗಿತ್ತು. ಇಲ್ಲಿಂದಲೇ ಜಾಫರ್ ಷರೀಫ್, ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಆರಿಸಿ ಹೋಗಿದ್ದರು. ಕನಕಪುರ ಲೋಕಸಭಾದ ಹೆಸರನ್ನು ಬದಲಿಸಿದಾಗ ಚಕಾರ ಎತ್ತದ ಮಹಾನ್ ನಾಯಕರು, ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರಿಗೆ ಟೀಕೆ ಮಾಡುತ್ತಿರುವುದು ಅವರ ಎಡಬಿಡಂಗಿತನವನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.

ಬಿಜೆಪಿ ಪಾದಯಾತ್ರೆಯ ಪ್ರತಿದಿನ ಅವರ ಹಗರಣ ಬಯಲು: ಮುಡಾ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಾದಯಾತ್ರೆ ಮಾಡುವ ಒಂದೊಂದು ದಿನವೂ ಬಿಜೆಪಿ ಅವಧಿಯ ಒಂದೊಂದು ಹಗರಣ ಬಯಲು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಬಿಜೆಪಿ ನಾಯಕರು ಪಾದಯಾತ್ರೆ ಮಾಡುವ ಮೂಲಕ ಅವರ ಅಕ್ರಮಗಳನ್ನು ಬಯಲು ಮಾಡುವ ಸದಾವಕಾಶವನ್ನು ನಮಗೆ ಒದಗಿಸಿಕೊಟ್ಟಿದ್ದಾರೆ. ಅವರು ಪಾದಯಾತ್ರೆ ಮಾಡುವಾಗ ಪ್ರತಿ ದಿನವೂ ಅವರ ಅಕ್ರಮಗಳನ್ನು ನಾವು ಬಯಲು ಮಾಡುತ್ತೇವೆ. ವಿಧಾನಸಭೆ ಕಲಾಪದ ವೇಳೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿರುವ ಹಗರಣಗಳ ದಾಖಲೆಗಳನ್ನು ನಿತ್ಯ ಒಂದರಂತೆ ಬಿಡುಗಡೆ ಮಾಡುತ್ತೇವೆ ಎಂದರು.

ವಾಲ್ಮೀಕಿ, ಮುಡಾ ಅಕ್ರಮ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆ.3ರಿಂದ ಬಿಜೆಪಿ-ಜೆಡಿಎಸ್ 7 ದಿನಗಳ ಪಾದಯಾತ್ರೆ

ಬಿಜೆಪಿ ಅವರು ಪಾದಯಾತ್ರೆ-ಹೋರಾಟ ಮಾಡುವುಕ್ಕೂ ಮುನ್ನ, ಅವರ ಕಾಲದಲ್ಲಾಗಿರುವ ಅಕ್ರಮಗಳ ಬಗ್ಗೆ ಮೊದಲು ಉತ್ತರ ನೀಡಲಿ. ಅವರ ಕಾಲದ ಅಕ್ರಮಗಳಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರೋ ಅಥವಾ ಆಗಿನ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರೋ ಎಂಬುದನ್ನು ತಿಳಿಸಲಿ. ಈಗಲೂ ಬಿಜೆಪಿ ಅವರ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಹಾಗೆಯೇ, ನಮ್ಮ ಕಾಲದ ಅಕ್ರಮ ಎಂದು ಹೇಳುತ್ತಿರುವ ವಿಚಾರದ ಬಗ್ಗೆಯೂ ಬಹಿರಂಗ ಚರ್ಚೆಗೆ ಅವರು ಬರಲಿ. ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಆರ್‌. ಅಶೋಕ್‌, ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಯಾರಾದರೂ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

Latest Videos
Follow Us:
Download App:
  • android
  • ios