ಬೆಂಗಳೂರು, (ನ.28): ನಿಖಿಲ್ ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಮಧ್ಯೆ ಮುಸುಕಿನ ಗುದ್ದಾಟ ಇತ್ತು. ಇದೀಗ ಅದನ್ನ ಬದಿಗಿಟ್ಟು ಇಬ್ಬರೂ ಅಣ್ತಮ್ಮಂದಿರು ಒಂದಾಗಿದ್ದಾರೆ.

"

ಹೌದು...ಇಂದು (ಶನಿವಾರ) ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಬ್ಬರು ಮುನಿಸು ಮರೆತು ಒಂದಾಗಿ ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ಕಾರ್ಯಕರ್ತರೆಲ್ಲರೂ ಜೋರಾಗಿ ಕೂಗಿ ಶಿಳ್ಳೆ ಹಾಕಿದರು.

ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ರೇವಣ್ಣ : ಗರಂ ಆದ ಜೆಡಿಎಸ್ ನಾಯಕ

ನಿಖಿಲ್ ಕುಮಾರಸ್ವಾಮಿ ಅವರು ಬಾ ಬ್ರದರ್ ಎಂದು ಪ್ರಜ್ವಲ್ ರೇವಣ್ಣ ಅವರನ್ನ ಕರೆದರು. ಹೀಗೆ ಕರೆಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ನಿಖಿಲ್ ಕುಮಾರಸ್ವಾಮಿ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡರು.  ಉಪಚುನಾವಣೆ ವೇಳೆ ಶಿರಾದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೆ ದೂರದಲ್ಲಿ ಇಬ್ಬರು ಕುಳಿತುಕೊಳ್ಳುತ್ತಿದ್ದರು ಇಂದಿನ ಸಭೆಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತ ಮಾತುಕತೆ ನಡೆಸಿದರು.

ನಿಖಿಲ್ ವೇದಿಕೆ ಮೇಲೆ ಬಾ ಬ್ರದರ್ ಎಂದು ಕರೆಯುತ್ತಿದ್ದಂತೆ  ಉಪಚುನಾವಣೆ ವೇಳೆ ಶಿರಾದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೆ ದೂರದಲ್ಲಿ ಇಬ್ಬರು ಕುಳಿತುಕೊಳ್ಳುತ್ತಿದ್ದರು ಇಂದಿನ ಸಭೆಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತ ಮಾತುಕತೆಯಲ್ಲಿ ನಿರತರಾದರು.

ಅಲ್ಲದೇ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಉಂಟಾಗಿದ್ದ ಮೈಮಸ್ಸು ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್, ಶಿರಾದಲ್ಲಿ ಗೊಂದಲ ಉಂಟಾಗಿತ್ತು. ಅಲ್ಪ ಸಮಯದಲ್ಲೇ ಭಾಷಣ ಮುಗಿಸಬೇಕು ಎಂದು ಹೇಳಿದ್ದರಿಂದ ಹಾಗಾಗಿ ಪ್ರಜ್ವಲ್ ಹೆಸರು ಹೇಳಲಾಗಲಿಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಿಗೆ ಹೋಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಹೇಳಿದರು.