ರಾಜ್ಯದಲ್ಲಿ ಕೆಲ ದಿನಗಳ ಹಿಂದೆ  ನಡೆದಿದ್ದ ಖಾತೆ ಬದಲಾವಣೆಯಲ್ಲಿ ಬೇರೋಬ್ಬರ ಪ್ರಭಾವ ಇರುವುದಾಗಿ ರೇವಣ್ಣ ಬಾಂಬ್ ಹಾಕಿದ್ದಾರೆ. 

ಬೆಂಗಳೂರು (ಮಾ.18): ಪ್ರತೀ ಅಧಿವೇಶನದಲ್ಲಿ ಭೂ ಅಕ್ರಮದ ಬಗ್ಗೆ ಚರ್ಚಿಸುವ ಸರ್ಕಾರಗಳಿಗೆ ನಯಸ್ ಭೂ ಹಗರಣದ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಆಗಿಲ್ಲ. ನೈಸ್ ವಿಷಯಕ್ಕೆ ಕೈ ಹಾಕಿದ್ದರಿಂದಲೇ ಕಾನೂನು ಸಚಿವರು ಖಾತೆ ಕಳೆದುಕೊಳ್ಳಬೇಕಾಯಿತು ಎಂದು ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣ ಬಾಂಬ್ ಸಿಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆ.ಸಿ ಮಾಧುಸ್ವಾಮಿ ಹೆಸರು ಪ್ರಸ್ತಾಪಿಸದೇ ಕಾನೂನು ಸಚಿವರನ್ನು ಬದಲಿಸುವಷ್ಟು ಪ್ರಭಾವ ನೈಸ್ ಕಂಪನಿಗಿದೆ. ಸಚಿವರನ್ನು ಬದಲಿಸಿದ್ದಾರೆಂದರು.

ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸುತ್ತಾರಾ ಭವಾನಿ ರೇವಣ್ಣ ? .

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೊಕ್, ನೈಸ್ ಹಗರಣವನ್ನು ಸಹಿಸುವ ಪ್ರಶ್ನೆ ಇಲ್ಲ. 

ನೈಸ್ ಬಳಿ ಇರುವ ಹೆಚ್ಚುವರಿ 400 ಎಕರೆ ಸ್ವಾಧೀನಕ್ಕೆ ಪಡೆಯಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಇದಕ್ಕೆ ಸಿದ್ಧತೆ ನಡೆದಿದ್ದು, ಶಪಡಿಸಿಕೊಳ್ಳಲಾಗುವುದು ಎಂದರು.