ಬೆಂಗಳೂರು, [ನ.26]: ರಾಜ್ಯದ 17 ಅನರ್ಹ ಶಾಸಕರ ವಿರುದ್ಧ ಎನ್ಐಎ (National Investigation Agency) ಕೋರ್ಟ್​ನಲ್ಲಿ ದೇಶದ್ರೋಹ ಆರೋಪ ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು, ‌ತೀರ್ಪು ಕಾಯ್ದಿರಿಸಿದೆ.

ಆಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ಹಣ ವೆಚ್ಚ ಮಾಡಲಾಗಿದ್ದು, 17 ಅನರ್ಹ ಶಾಸಕರು ಈ ಅಕ್ರಮದ ಹಣ ಬಳಕೆ ಮಾಡಿಕೊಂಡು ಬಿಜೆಪಿ ಸೇರಿದ್ದಾರೆ ಎಂದು ಹಿರಿಯ ವಕೀಲ ಬಾಲನ್‌ ಅವರು 17 ಅನರ್ಹ ಶಾಸಕರ ವಿರುದ್ಧ ಎನ್ಐಎಗೆ ದೂರು ದಾಖಲಿಸಿದ್ದರು.

ಆಪರೇಷನ್ ಕಮಲಕ್ಕೆ ಭಯೋತ್ಪಾದಕರಿಂದ ದುಡ್ಡು..? ಕೋರ್ಟ್‌ನಲ್ಲಿ ದೂರು

ಈ ಪ್ರಕರಣದ ವಿಚಾರಣೆ ಇಂದು [ಮಂಗಳವಾರ] ಅಂತ್ಯವಾಗಿದ್ದು, ವಾದ ಆಲಿಸಿದ ಎನ್ಐಎ ಕೋರ್ಟ್, ನವೆಂಬರ್ 30ಕ್ಕೆ ತೀರ್ಪು ‌ಕಾಯ್ದಿರಿಸಿದೆ. 

ದೂರಿನಲ್ಲೇನಿದೆ..? 
ಹಿರಿಯ ವಕೀಲ ಬಾಲನ್‌ ಅವರು 17 ಅನರ್ಹ ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆಪರೇಷನ್ ಕಮಲಕ್ಕೆ ಸಾವಿರಾರು‌ ಕೋಟಿ ಹಣ ವೆಚ್ಚ ಮಾಡಲಾಗಿದ್ದು, 17 ಅನರ್ಹ ಶಾಸಕರು ಈ ಅಕ್ರಮದ ಹಣ ಬಳಕೆ ಮಾಡಿಕೊಂಡು ಬಿಜೆಪಿ ಸೇರಿದ್ದಾರೆ. ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕು. ಅನರ್ಹ ಶಾಸಕರಿಂದ ಸರ್ಕಾರ ಬಂತು ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

 ಅನರ್ಹ ಶಾಸಕರು ಬಿಜೆಪಿ ಸೇರಿದ ಕೂಡಲೇ ಮಂತ್ರಿಗಳು ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಬಾಲನ್ ಆರೋಪಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಹಾಗು ಜೆಡಿಎಸ್ ಅನರ್ಹ ಶಾಸಕ ಪ್ರಕರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಾಗಿದೆ.  17 ಶಾಸಕರು ಅನರ್ಹರು ಎಂದು ಅಂದಿನ ಸ್ಫೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ಎತ್ತಿಹಿಡಿದಿದೆ. 

ಆದ್ರೆ ಉಪಚುನಾವಣೆಗೆ ಸ್ಪರ್ಥಿಸಲು ಅರ್ಹ ಎಂದು ಸುಪ್ರೀಂ ತೀರ್ಪು ಕೊಟ್ಟಾಗಿದೆ. 17 ಅನರ್ಹರ ಪೈಕಿ 14 ಜನ ಬೈ ಎಲೆಕ್ಷನ್ ಗೆ ಸ್ಪರ್ಧೆ ಮಾಡಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.