Asianet Suvarna News

ಮದವೆ ಮಂಟಪದಲ್ಲೂ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ

 ಕಾಂಗ್ರೆಸ್‍ನಲ್ಲಿ `ಮುಂದಿನ ಸಿಎಂ' ಹೇಳಿಕೆ ವಿವಾದ
ಮದುವೆ ಮಂಟಪದಲ್ಲೂ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ
ಶಾಸಕರೊಬ್ಬರ ಪುತ್ರಿ ವಿವಹದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಜೈಕಾರ

Next CM Siddaramaiah Sloganeering in Congress MlA daughter  marriage Function at Davanagere rbj
Author
Bengaluru, First Published Jul 2, 2021, 5:04 PM IST
  • Facebook
  • Twitter
  • Whatsapp

ಬೆಂಗಳೂರು, (ಜುಲೈ.02): `ಮುಂದಿನ ಸಿಎಂ' ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಬಣಗಳು ಹುಟ್ಟಿಕೊಂಡಿದ್ದು, ಭಿನ್ನಮತ ಸ್ಪೋಟಗೊಂಡಿದೆ.

ಈ ಮುಂದಿನ ಸಿಎಂ ವಿವಾದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ಮುಂದಾಗಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿರುವ ಘಟನೆ ನಡೆದಿದೆ.

ಮೈಸೂರಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ಮೊಳಗದ ಮುಂದಿನ ಸಿಎಂ ಘೋಷಣೆ 

ಹೌದು...ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ಶಾಸಕ ರಾಮಪ್ಪ ಪುತ್ರಿ ವಿವಾಹ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿಯಗಿದ್ರು. ಈ ವೇಳೆ ಮದುವೆ ಕಲ್ಯಾಣ ಮಂಟಪದ ಬಳಿ ಕಾರ್ಯಕರ್ತರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ, ಜೈಕಾರ ಹಾಕಿದ್ದಾರೆ.

ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಸಾಮಾಜಿಕ ಅಂತರ ಮರೆತು ಜನರು ಗುಂಪು ಸೇರಿ ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದರು.

ಮದುವೆಗೆ ಕೇವಲ 40 ಜನರಿಗೆ ಮಾತ್ರ ಅವಕಾಶ ಇದೆ. ಆದ್ರೆ, ಜನಪ್ರತಿನಿಧಿಗಳು  ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದು, ಶಾಸಕರಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯನಾ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

Follow Us:
Download App:
  • android
  • ios