BJP Politics: ವಿಧಾನಸಭೆ ಚುನಾವಣೆ ರಣತಂತ್ರಕ್ಕೆ ಬಿಜೆಪಿ ಟೀಮ್- ಪ್ರತಾಪ್ ಸಿಂಹಗೆ ಹೊಸ ಜವಬ್ದಾರಿ!
ರಾಜ್ಯ ಬಿಜೆಪಿ ಈಗ ಹೋದಲ್ಲಿ ಬಂದಲ್ಲಿ ಚುನಾವಣೆ ತಯಾರಿ ಕರಿತಾಗಿಯೇ ಸಭೆ, ಸಮಾವೇಶ ಮಾಡೋದರ ಬಗ್ಗೆ ಯೋಚಿಸುತ್ತಾ ಇರುತ್ತದೆ. ಮುಂದಿನ ಚುನಾವಣೆಗೆ ಪ್ರತಾಪ್ ಸಿಂಹ, ಲಕ್ಷ್ಮಣ ಸವದಿ ಉಮೇಶ್ ಜಾದವ್, ಗೋಪಿನಾಥ್ ರೆಡ್ಡಿ ಟೀಮ್ ರೆಡಿ
ವರದಿ - ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ಮೈಸೂರು ( ಜು.21}: ರಾಜ್ಯ ಬಿಜೆಪಿ ಈಗ ಹೋದಲ್ಲಿ ಬಂದಲ್ಲಿ ಚುನಾವಣೆ ತಯಾರಿ ಕರಿತಾಗಿಯೇ ಸಭೆ, ಸಮಾವೇಶ ಮಾಡೋದರ ಬಗ್ಗೆ ಯೋಚಿಸುತ್ತಾ ಇರುತ್ತದೆ. ಕಾರಣ ಇನ್ನೂ ಏಳೆಂಟು ತಿಂಗಳ ಒಳಗೆ ಮಹಾ ಚುನಾವಣೆ ಎದಿಗೊಳ್ಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಏರಲು ಪ್ರಯತ್ನ ಮಾಡುತ್ತಿರುವ ಜೊತೆಗೆ ಆ ಪಕ್ಷದಲ್ಲಿ ಈಗ ಸಿಎಂ ರೇಸ್ ಗಾಗಿ ಪೈಪೋಟಿ ಜೋರಾಗಿದೆ. ಇಬ್ಬರ ಜಗಳದಲ್ಲಿ ರಾಜಕೀಯವಾಗಿ ತಮಗೆ ಎಷ್ಟು ಲಾಭ ಆಗುತ್ತೆ ಅಂತ ಸಹಜವಾಗಿ ಬಿಜೆಪಿ ಯೋಚಿಸುತ್ತಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಷ್ಟು ಜಗಳ ಆಡ್ತಾರೊ ಅದರ ಒಂದಿಷ್ಟು ಲಾಭ ಬಿಜೆಪಿಗೆ ಆಗಬಹುದು. ಜಾತಿ ಸಮುದಾಯ ಮತಗಳು ಸ್ಪಿಲ್ಟ್ ಆಗಿ,ಅದು ತಮಗೆ ವರದಾನ ಆಗಬಹುದು ಎಂಬ ನಿರೀಕ್ಷೆ ಬಿಜೆಪಿಗಿದೆ. ಹಾಗಾಗಿ ಯಾವಾಗೆಲ್ಲಾ ಡಿಕೆಶಿ ಸಿದ್ದರಾಮಯ್ಯ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಿಎಂ ಆಗುವ ಆಸೆ ಹೊರ ಹಾಕ್ತಾರೆ, ಆವಾಗೆಲ್ಲಾ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲಕ ಅಥವಾ ಸಚಿವರು ಶಾಸಕರು ಮಾಧ್ಯಮಕ್ಕೆ ತರಹೆವಾರಿ ಹೇಳಿಕೆ ನೀಡಿ ಕಾಂಗ್ರೆಸ್ ಒಡೆದ ಮನೆ ಎನ್ನೋದನ್ನ ಮೈಕ್ ನಲ್ಲಿ ಅನೌವ್ಸ್ ಮಾಡ್ತಾರೆ. ಬಿಜೆಪಿಯ ರಣತಂತ್ರದಲ್ಲಿ ನಿಶ್ಚಿತವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಜಗಳವನ್ನು ಹೈಲೆಟ್ ಮಾಡೋದು ಕೂಡ ಒಂದು ಅಸ್ತ್ರ. ಈಗ ಚುನಾವಣೆಗೆ ಅಸ್ತ್ರ ಸಿದ್ಧಮಾಡಲು ರಾಜ್ಯ ಬಿಜೆಪಿ ಒಂದು ಟೀಮ್ ರೆಡಿ ಮಾಡಿದೆ. ನಾಲ್ವರು ಸದಸ್ಯರ ಒಂದು ತಂಡ ಚುನಾವಣೆ ರಣತಂತ್ರ, ಟ್ರೆಂಡ್ ಸೆಟ್ ಮಾಡಲು ಪಕ್ಷಕ್ಕೆ ಇನ್ ಪುಟ್ ನೀಡಲಿದೆ.
BJP Politics: ಮಂಡಿ ನೋವಿದ್ದ ಅಟಲ್‌ರನ್ನು ಬದಲಿಸದ ನಾವು ಸಿಎಂ ಬದ್ಲಿಸ್ತೀವಾ?: ಪ್ರತಾಪ್ ಸಿಂಹ
ಪ್ರತಾಪ್ ಸಿಂಹ, ಲಕ್ಷ್ಮಣ ಸವದಿ ಉಮೇಶ್ ಜಾದವ್, ಗೋಪಿನಾಥ್ ರೆಡ್ಡಿ ಟೀಮ್::
ಕಳೆದವಾದ ಹಾಸನದಲ್ಲಿ ಬಿಜೆಪಿ(BJP) ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ತೆಗೆದುಕೊಂಡ ನಿರ್ಣುದಂತೆ, ವಿಧಾನಸಭೆ ಚುನಾವಣೆಗೆ ಸ್ಟಾಟರ್ಜಿ ಟೀಮ್ ಮಾಡಲಾಗಿದೆ. ನಾಲ್ವರು ಸದಸ್ಯರ ತಂಡ ರಚಿಸಿರುವ ರಾಜ್ಯ ಬಿಜೆಪಿ ಘಟಕ ಸಂಸದ ಪ್ರತಾಪ್ ಸಿಂಹ(Pratap simha), ಮಾಜಿ ಸಚಿವ ಲಕ್ಷ್ಮಣ ಸವದಿ(Lakshman savadi), ಎಂಎಲ್ ಸಿ ಗೋಪಿನಾಥ್ ರೆಡ್ಡಿ(MLC Gopinath reddy), ಸಂಸದ ಉಮೇಶ್ ಜಾದವ್(MP Umesh jadhav) ಅವರನ್ನು ಒಳಗೊಂಡ ತಂಡ ಮಾಡಿದೆ. ಈ ನಾಲ್ವರು ಸದಸ್ಯರ ಸಮಿತಿ ವಿಧಾನಸಭೆ ಚುನಾವಣೆಗೆ ಪಕ್ಷಕ್ಕೆ ಸಕಾಲದಲ್ಲಿ ಇನ್ ಪುಟ್(Input)ನೀಡಲಿದೆ. ಜೊತೆಗೆ ಪಕ್ಷಕ್ಕೆ ರಣತಂತ್ರ ರೂಪಿಸಲು ಈ ಟೀಮ್ ರಚಿಸಲಾಗಿದ್ದು ಪಕ್ಷದ ಕಾರ್ಯಕ್ರಮ, ಸರ್ಕಾರದ ಯೋಜನೆಗಳು, ವಿಪಕ್ಷಗಳ ಆರೋಪ, ಟೀಕೆ ಮತ್ತು ವಿಪಕ್ಷಗಳ ಒಳಗೆ ಇರುವ ನೆಗೆಟಿವ್ ವಿಚಾರಗಳನ್ನು ಕಲೆ ಹಾಕಿ, ಯಾವ ವಿಚಾರವನ್ನು ಟ್ರೆಂಡ್ ಮಾಡಬೇಕು. ಜನರ ಮುಂದೆ ಯಾವೆಲ್ಲಾ ಅಂಶ ಇಡಬೇಕು ಎಂಬ ಸಲಹೆಯನ್ನು ಪಕ್ಷಕ್ಕೆ ನೀಡಲಿದೆ. ಆಮೂಲಕ ಪಕ್ಷದ ಸಂಘಟನೆ ಮತ್ತು ಚುನಾವಣೆ ವೇಳೆ ಹೈಲೆಟ್ ಮಾಡಬೇಕಾದ ವಿಚಾರಗಳ ಮೇಲೆ ನಾಲ್ವರ ಸಮಿತಿ ಸಭೆ ಮಾಡಿ ಪ್ರಸ್ತುತ ವಿದ್ಯಮಾನಗಳು ಅದರಿಂದ ರಾಜಕೀಯ ಲಾಭ ನಷ್ಟಗಳ ಮೇಲೆ ಸ್ಟಡಿ ಮಾಡಲಿದೆ..
'ನಮ್ಮ ಕೋರಿಕೆ ಈಡೇರಿದೆ, ನಮಗೆ ಒಳ್ಳೆಯ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ'
ಹಳೆ ಮೈಸೂರು ಭಾಗದ ಇಬ್ಬರು, ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕದ ಇಬ್ಬರಿಗೆ ಜವಬ್ದಾರಿ ಯಾಕೆ?
ಅಂದಹಾಗೆ ಬಿಜೆಪಿಗೆ ಇಲ್ಲಿ ತನಕ ಹಳೆ ಮೈಸೂರು ಭಾಗದಲ್ಲಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವ
ಬಲ ಬಿಜೆಪಿಗೆ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಬಲ ಪಡಿಸಲು ಪಕ್ಷ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಮೇಲಿಂದ ಮೇಲೆ ಸಮಾವೇಶ, ಅನ್ಯ ಪಕ್ಷದ ಸ್ಥಳಿಯ ನಾಯಕರನ್ನು ಸೆಳೆಯುವ ಪ್ಲಾನ್ ಮಾಡಿರುವ ಬಿಜೆಪಿ ಈಗ ಸ್ಟಾಟರ್ಜಿ ಟೀಮ್ ಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹರಿಗೆ ಜವಬ್ದಾರಿ ನೀಡಿದೆ. ಅಂತೆಯೆ ಕಲ್ಯಾಣ ಕರ್ನಾಟಕದಲ್ಲಿ ಈಬಾರಿ ಬಿಜೆಪಿ 40 ಸ್ಥಾನಗಳ ಪೈಕಿ 25 ಗುರಿ ಹೊಂದಿದೆ. ಮೈಕ್ರೊ ಲೆವೆಲ್ ನಲ್ಲಿ ಪಕ್ಷ ಸಂಘಟನೆ ಮಾಡಿ, ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಪಕ್ಷದ ಬೇರನ್ನು ಗಟ್ಟಿ ಮಾಡಲು ಲಕ್ಷ್ಮಣ ಸವದಿ ಹಾಗೂ ಸಂಸದ ಉಮೇಶ್ ಜಾದವ್ ಗೆ ಪಕ್ಷ ಜವಬ್ದಾರಿ ನೀಡಿದೆ. ಅಂತೆಯೆ ಬೆಂಗಳೂರು ಮೂಲದ, ಎಂ ಎಲ್ ಸಿ ಗೋಪಿನಾಥ್ ರೆಡ್ಡಿಗೂ ಪಕ್ಷ ಈ ಸಮಿತಿಯಲ್ಲಿ ಅವಕಾಶ ನೀಡಿದೆ.