Asianet Suvarna News Asianet Suvarna News

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಇರಿಸು ಮುರಿಸು: ದಳ ನಾಯಕರಿಂದ ಹೊಸ ಬೇಡಿಕೆ..!

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಎರಡು ಪಕ್ಷದಲ್ಲಿ ಈಗ ಭಾರೀ ಚರ್ಚೆ ಶುರುವಾಗಿದೆ. ಕಳೆದ 4-5 ತಿಂಗಳ ಹಿಂದೆ ಒಬ್ಬರಿಗೆ ಒಬ್ಬರು ಪೈಪೋಟಿ ನೀಡಿ ವಿಧಾನಸಭಾ ಚುನಾವಣೆ ಮಾಡಿದ ಕಾರ್ಯಕರ್ತರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ಏಕಾಏಕಿ ಬಿಜೆಪಿ- ಜೆಡಿಎಸ್ ‌ಹೈಕಮಾಂಡ್ ನಾಯಕರು ‌ಮೈತ್ರಿಗೆ ಮಾಡಿಕೊಂಡಿದ್ದು, ಸ್ಥಳೀಯ ಮಟ್ಟದ ನಾಯಕರಿಗೆ ಭಾರೀ ಇರಿಸು ಮುರಿಸು ಆಗಿದೆ. 

New Demand from JDS Leaders in Raichur grg
Author
First Published Sep 28, 2023, 12:23 PM IST

ರಾಯಚೂರು(ಸೆ.28):  ಲೋಕಸಭಾ ಚುನಾವಣೆಗೆ ಇನ್ನೂ 6-7 ತಿಂಗಳು ಬಾಕಿಯಿದೆ. ಈಗಾಗಲೇ ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗಾಗಿ ತಯಾರಿ ಶುರು ಮಾಡಿವೆ. ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ನಾನಾ ರೀತಿಯ ಕಸರತ್ತು ಶುರು ಮಾಡಿದೆ‌. ಅದರ ಭಾಗವಾಗಿ ಪ್ರತಿ ಲೋಕಸಭಾ ಕ್ಷೇತ್ರಕ್ಕೂ ಸಚಿವರನ್ನ ವೀಕ್ಷಕರಾಗಿ ನೇಮಕ ‌ಮಾಡಿದ್ದು, ನೇಮಕಗೊಂಡ ಸಚಿವರು ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರನ್ನ ಸಂಪರ್ಕ ಮಾಡಿ, ಸಭೆಗಳು ನಡೆಸಿ ಲೋಕಸಭಾ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿ ಹೈಕಮಾಂಡ್‌ಗೆ ನೀಡಲು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. 

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕೆ.ಎಚ್. ಮುನಿಯಪ್ಪ ಅವರನ್ನ ವೀಕ್ಷಕರಾಗಿ ನೇಮಿಸಿದ್ದಾರೆ. ಮುಂದಿನ‌ ದಿನಗಳಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಕಾಂಗ್ರೆಸ್ ಸಚಿವರನ್ನ ವೀಕ್ಷಕರಾಗಿ ನೇಮಕ ಮಾಡುತ್ತಿದ್ದಂತೆ ಜೆಡಿಎಸ್ - ಬಿಜೆಪಿ ಜೊತೆಗೆ ಮೈತ್ರಿಯಾಗಿ ಕಾಂಗ್ರೆಸ್ ಸೋಲಿಸಲು ನಾನಾ ಸಿದ್ಧತೆ ನಡೆದಿವೆ. ಬಿಜೆಪಿ- ಜೆಡಿಎಸ್ ಮೈತ್ರಿಗೆ ಕೆಲ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಲು ಮುಂದಾಗಿದ್ದಾರೆ. 

ಜೆಡಿಎಸ್- ಬಿಜೆಪಿ ಮೈತ್ರಿ: ದೇವದುರ್ಗ ಶಾಸಕಿ ಕರೆಮ್ಮ ಹೇಳಿದ್ದಿಷ್ಟು

ಜೆಡಿಎಸ್‌ನಿಂದ ಪುನಶ್ಚೇತನ ಪರ್ವ ಕಾರ್ಯ: 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿಸಲು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಗೆ ಮುಂದಾಗಿದೆ. ಈ ಮೈತ್ರಿಗೆ ಜೆಡಿಎಸ್ ನ ಕೆಲ ಶಾಸಕರು ಹಾಗೂ ಮಾಜಿ ಶಾಸಕರು ಅಪಸ್ವರ ವ್ಯಕ್ತಪಡಿಸಿದರು. ಹೀಗಾಗಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಕೊಪ್ಪಳದಲ್ಲಿ ಪುನಶ್ಚೇತನ ಪರ್ವ ಕಾರ್ಯಕ್ರಮ ‌ನಡೆಯಿತು. ಈ ಕಾರ್ಯಕ್ರಮದಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು. 

ಈ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ವಿಚಾರವಾಗಿ ಚರ್ಚೆಗಳು‌ ನಡೆದಿವೆ. ಇತ್ತ ಕೆಲ ಮುಖಂಡರು ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿದಂತೆ ಐದು ಲೋಕಸಭಾ ಕ್ಷೇತ್ರಗಳು ಇವೆ. ಆ ಐದು ಲೋಕಸಭಾ ಕ್ಷೇತ್ರದ ಪೈಕಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಬದಲು ಜೆಡಿಎಸ್ ಅಭ್ಯರ್ಥಿ ಗಳಿಗೆ ಟಿಕೆಟ್ ನೀಡಬೇಕೆಂದು ಜೆಡಿಎಸ್ ಮುಖಂಡರು ‌ಬೇಡಿಕೆ ಇಟ್ಟಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ‌ನೀಡಲು ಆಗ್ರಹ: 

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಎರಡು ಪಕ್ಷದಲ್ಲಿ ಈಗ ಭಾರೀ ಚರ್ಚೆ ಶುರುವಾಗಿದೆ. ಕಳೆದ 4-5 ತಿಂಗಳ ಹಿಂದೆ ಒಬ್ಬರಿಗೆ ಒಬ್ಬರು ಪೈಪೋಟಿ ನೀಡಿ ವಿಧಾನಸಭಾ ಚುನಾವಣೆ ಮಾಡಿದ ಕಾರ್ಯಕರ್ತರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ಏಕಾಏಕಿ ಬಿಜೆಪಿ- ಜೆಡಿಎಸ್ ‌ಹೈಕಮಾಂಡ್ ನಾಯಕರು ‌ಮೈತ್ರಿಗೆ ಮಾಡಿಕೊಂಡಿದ್ದು, ಸ್ಥಳೀಯ ಮಟ್ಟದ ನಾಯಕರಿಗೆ ಭಾರೀ ಇರಿಸು ಮುರಿಸು ಆಗಿದೆ. ಆದ್ರೂ ಕೆಲ ಬಿಜೆಪಿ ಮುಖಂಡರು ಈ ಮೈತ್ರಿ ಬಗ್ಗೆ ಎಲ್ಲಿಯೂ ಮಾತನಾಡಲು‌ ಮುಂದೆ ಬರುತ್ತಿಲ್ಲ. ಕೆಲ ಜೆಡಿಎಸ್ ಶಾಸಕರು ನೇರವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕೆಲ ಜೆಡಿಎಸ್ ಮುಖಂಡರು ‌ಈ ಮೈತ್ರಿ ಈಗ ಬೇಕಿತ್ತಾ ಎಂಬ ಮಾತುಗಳು ಸಹ ಆಡಲು ಶುರು ಮಾಡಿದ್ದಾರೆ. ಇದರ ಮಧ್ಯೆ ರಾಯಚೂರಿನ ಜೆಡಿಎಸ್ ಮುಖಂಡರು ಕೊಪ್ಪಳದಲ್ಲಿ ನಡೆದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೆ ನೀಡಬೇಕೆಂದು ಹೊಸ ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರು ನನ್ನ ಮತ್ತು ಮಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ: ಮೈತ್ರಿಗೆ ಶಾಸಕಿ ಕರೆಮ್ಮ ವಿರೋಧ

ಪರಿಶಿಷ್ಟ ಪಂಗಡಕ್ಕೆ ಮೀಸಲು ಆಗಿರುವ ರಾಯಚೂರು ಲೋಕಸಭಾ ಕ್ಷೇತ್ರ. ಈ ಲೋಕಸಭಾ ಕ್ಷೇತ್ರದಲ್ಲಿ 8  ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 8 ವಿಧಾನಸಭಾ ಕ್ಷೇತ್ರದಲ್ಲಿ 4 ವಿಧಾನಸಭಾ ಕ್ಷೇತ್ರಗಳು ಅಂದ್ರೆ ಸುರಪುರ, ರಾಯಚೂರು ಗ್ರಾಮೀಣ, ದೇವದುರ್ಗ, ಮಾನ್ವಿ ಕ್ಷೇತ್ರವು ಎಸ್.ಟಿ. ಮೀಸಲು ಕ್ಷೇತ್ರಗಳಾಗಿವೆ. ಇನ್ನೂಳಿದ ನಾಲ್ಕು ಕ್ಷೇತ್ರಗಳಾದ ಶಹಾಪೂರು, ರಾಯಚೂರು ನಗರ ಹಾಗೂ ಯಾದಗಿರಿ ಸಾಮಾನ್ಯ ಮೀಸಲು ಕ್ಷೇತ್ರಗಳಾಗಿದ್ದು, ಲಿಂಗಸೂಗೂರು ಎಸ್ ಸಿ ಮೀಸಲು ‌ಕ್ಷೇತ್ರವಾಗಿದೆ. 

8 ಕ್ಷೇತ್ರಗಳ ಪೈಕಿ ದೇವದುರ್ಗ ಕ್ಷೇತ್ರದಲ್ಲಿ ‌ಮಾತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‌ಜೆಡಿಎಸ್ ಅಭ್ಯರ್ಥಿ ‌ಗೆಲುವು ಸಾಧಿಸಿದ್ದು ಬಿಟ್ಟರೇ.. ಇನ್ನುಳಿದ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಕೆಲ ಮತಗಳ ಅಂತರದಿಂದ ‌ಸೋಲು‌ ಅನುಭವಿಸಿದ್ದಾರೆ. ಹೀಗಾಗಿ ಈಗ ಬಿಜೆಪಿ- ಜೆಡಿಎಸ್ ಮೈತ್ರಿ ಆಗಿದೆ. ಈ ಮೈತ್ರಿಯಲ್ಲಿ ರಾಯಚೂರು ಲೋಕಸಭಾ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೆ ನೀಡಿದ್ರೆ ಜೆಡಿಎಸ್ ಗೆ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಬಲ ಬರುತ್ತೆ ಎಂಬುವುದು ಜೆಡಿಎಸ್ ಮುಖಂಡರ ಮನವಿ ಆಗಿದೆ. ಇತ್ತ ಜೆಡಿಎಸ್ ವರಿಷ್ಠರು ಕಲ್ಯಾಣ ಕರ್ನಾಟಕಕ್ಕೆ ಯಾವ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕಬೇಕು ಎಂಬುವುದರ ಬಗ್ಗೆ ಈವರೆಗೂ ಎಲ್ಲಿಯೂ ಹೇಳಿಕೆ ‌ನೀಡಿಲ್ಲ.‌

Follow Us:
Download App:
  • android
  • ios