ಜೆಡಿಎಸ್- ಬಿಜೆಪಿ ಮೈತ್ರಿ: ದೇವದುರ್ಗ ಶಾಸಕಿ ಕರೆಮ್ಮ ಹೇಳಿದ್ದಿಷ್ಟು
ಪಕ್ಷದ ತೀರ್ಮಾನಕ್ಕೂ ಸದಾಬದ್ಧವಾಗಿ ಕೆಲಸ ಮಾಡುವೆ. ನನ್ನ ಹೋರಾಟ ಕ್ಷೇತ್ರದಲ್ಲಿ ನಿರಂತರವಾಗಿ ಮುಂದುವರೆಯುತ್ತದೆ. ಕ್ಷೇತ್ರದ ಜನರಿಗೆ ನನ್ನ ಮೊದಲ ಆದ್ಯತೆಯಾಗಿದೆ. ಕ್ಷೇತ್ರದ ಜನರು ತೋರಿಸಿದ ದಾರಿಯಲ್ಲಿ ನಾವು ನಡೆಯುತ್ತೇವೆ. ನನಗೆ ಜೆಡಿಎಸ್ ಪಕ್ಷವೂ ಮುಖ್ಯ. ನನ್ನ ಕ್ಷೇತ್ರದಲ್ಲಿ ಜನರು ಹೇಳಿದಂತೆ ನನ್ನ ತೀರ್ಮಾನ ಆಗಿರುತ್ತೆ ಎಂದ ಶಾಸಕಿ ಕರೆಮ್ಮ
ರಾಯಚೂರು(ಸೆ.26): ಲೋಕಸಭಾ ಚುನಾವಣೆ ವಿಚಾರಕ್ಕೆ ಮೈತ್ರಿ ಆಗಿದೆ. ಪಕ್ಷದ ಸಿದ್ಧಾಂತ ಮತ್ತು ವರಿಷ್ಠರ ತೀರ್ಮಾನ ಬಿಟ್ಟು ನಾವು ಎರಡನೇ ಮಾತು ಆಡುವುದಿಲ್ಲ ಎಂದು ದೇವದುರ್ಗ ಶಾಸಕಿ ಕರೆಮ್ಮ. ಜಿ.ನಾಯಕ ತಿಳಿಸಿದ್ದಾರೆ.
ಇಂದು(ಮಂಗಳವಾರ) ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಅವರು, ನನ್ನ ಕ್ಷೇತ್ರದ ಬಗ್ಗೆ ನನ್ನ ನೋವು ನಾನು ಹೇಳಿಕೊಂಡಿದ್ದೇನೆ.. ದೇವದುರ್ಗ ಕ್ಷೇತ್ರದ ಸ್ಥಿತಿಗತಿ ಬಗ್ಗೆ ನಿಮಗೆ ಗೊತ್ತು. ನಾನು ದೊಡ್ಡ ಶ್ರೀಮಂತಳು ಅಲ್ಲ. ನಾನು ಯಾವುದೇ ದುಡ್ಡು ಕೊಟ್ಟು ಮತ ತೆಗೆದುಕೊಂಡಿಲ್ಲ. ದೇವದುರ್ಗದ ಜನರು ದುಡ್ಡು ಇರುವವರ ವಿರುದ್ಧ ಓಟು ಮಾಡಿ ನನ್ನನ್ನ ಗೆಲ್ಲಿಸಿದ್ದಾರೆ. ದೇವದುರ್ಗ ಮತದಾರರ ತೀರ್ಮಾನವೇ ನನ್ನ ಅಂತಿಮ ತೀರ್ಮಾನ ಎಂದು ಹೇಳಿದ್ದಾರೆ.
ರಾಜ್ಯದ ಹಿತಕ್ಕಾಗಿ ಅಲ್ಲ, ವೈಯಕ್ತಿಕ ಲಾಭಕ್ಕೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ: ಎನ್‌ಎಸ್ ಬೋಸರಾಜು ವ್ಯಂಗ್ಯ
ಪಕ್ಷದ ತೀರ್ಮಾನಕ್ಕೂ ಸದಾಬದ್ಧವಾಗಿ ಕೆಲಸ ಮಾಡುವೆ. ನನ್ನ ಹೋರಾಟ ಕ್ಷೇತ್ರದಲ್ಲಿ ನಿರಂತರವಾಗಿ ಮುಂದುವರೆಯುತ್ತದೆ. ಕ್ಷೇತ್ರದ ಜನರಿಗೆ ನನ್ನ ಮೊದಲ ಆದ್ಯತೆಯಾಗಿದೆ. ಕ್ಷೇತ್ರದ ಜನರು ತೋರಿಸಿದ ದಾರಿಯಲ್ಲಿ ನಾವು ನಡೆಯುತ್ತೇವೆ. ನನಗೆ ಜೆಡಿಎಸ್ ಪಕ್ಷವೂ ಮುಖ್ಯ. ನನ್ನ ಕ್ಷೇತ್ರದಲ್ಲಿ ಜನರು ಹೇಳಿದಂತೆ ನನ್ನ ತೀರ್ಮಾನ ಆಗಿರುತ್ತೆ ಎಂದ ಶಾಸಕಿ ಕರೆಮ್ಮ ಸ್ಪಷ್ಟಪಡಿಸಿದ್ದಾರೆ.