Asianet Suvarna News Asianet Suvarna News

ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಎಂ ಆಗಲಿ ಪಿಎಂ ಆಗಲಿ ಶಿಕ್ಷೆ ಆಗಲಿ: ಎಂಟಿಬಿ ನಾಗರಾಜ್

ರಾಜಕೀಯ ಅನ್ನೋದು ಪ್ರಜಾಸೇವೆ ಆಗಬೇಕು, ಆದರೆ ಇಂದು ಪ್ರಜಾಸೇವೆ ಬಿಟ್ಟು ಸ್ವಾರ್ಥ ಸೇವೆಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

Neither CM nor PM should be punished in Muda and Valmiki scam Says MTB Nagaraj gvd
Author
First Published Aug 11, 2024, 5:08 PM IST | Last Updated Aug 11, 2024, 5:08 PM IST

ಕೋಲಾರ (ಆ.11): ರಾಜಕೀಯ ಅನ್ನೋದು ಪ್ರಜಾಸೇವೆ ಆಗಬೇಕು, ಆದರೆ ಇಂದು ಪ್ರಜಾಸೇವೆ ಬಿಟ್ಟು ಸ್ವಾರ್ಥ ಸೇವೆಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು. ನಗರದ ಹೊರವಲಯದ ಅಂತರಗಂಗೆ ಬುದ್ದಿಮಾಂದ್ಯ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿ, ಮೈಸೂರು ಪಾದಯಾತ್ರೆ ಮತ್ತು ಕಾಂಗ್ರೆಸ್ ಜನಾಂದೋಲನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ತನಿಖೆ ನಿಷ್ಪಕ್ಷಪಾತವಾಗಿರಲಿ: ಪ್ರಜೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸ್ವಾರ್ಥ ಸೇವೆಗೆ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ, ಮುಡಾ ಮತ್ತು ವಾಲ್ಮೀಕಿ ಹಗರಣದ ಬಗ್ಗೆ, ಸಿದ್ದರಾಮಯ್ಯ ಪಕ್ಷ, ಜಾತಿಯನ್ನು ಬದಿಗೊತ್ತಿ, ಪಾರದರ್ಶಕವಾದ ತನಿಖೆ ಮಾಡಬೇಕು, ಯಾರೇ ತಪ್ಪು ಮಾಡಿದರು ಶಿಕ್ಷೆಯಾಗಬೇಕು, ಬಡವರ ತೆರಿಗೆ ಹಣ ದುರುಪಯೋಗವಾಗಿದೆ, ಇದರ ಬಗ್ಗೆ ತನಿಖೆಯಾಗಬೇಕು, ಎಸ್‌ಐಟಿ, ಇಡಿ, ಸಿಬಿಐ, ಎಲ್ಲಾ ತನಿಖೆ ನಿಷ್ಪಕ್ಷಪಾತವಾಗಿರಬೇಕು ಎಂದು ಒತ್ತಾಯಿಸಿದರು.

ರಾಜಕಾರಣದಲ್ಲಿ ಎಲ್ಲಿವರೆಗೂ ಭ್ರಷ್ಟಾಚಾರ ಇರುತ್ತದೆ, ಅಲ್ಲಿವರೆಗೂ ರಾಜಕಾರಣಿಗಳ ಕೆಸರು ಎರಚಾಟ ಇರುತ್ತದೆ. ಸಿದ್ದರಾಮಯ್ಯರಿಗೆ ಟಾರ್ಗೇಟ್ ಮಾಡುವ ಪ್ರಶ್ನೆ ಇಲ್ಲ, ತನಿಖೆಯಲ್ಲಿ ಯಾರೇ ತಪಿತಸ್ಥರು ಎಂದು ಸಾಬೀತಾದರೆ ಅದು ಸಿಎಂ ಆಗಲಿ ಪಿಎಂ ಆಗಲಿ ಶಿಕ್ಷೆ ಆಗಲಿ. ಚಿಕ್ಕವರು ಮಾಡಿದರೂ ಅದು ತಪ್ಪು ದೊಡ್ಡವರು ಮಾಡಿದ್ದರೂ ಸಹ ಅದು ತಪ್ಪು, ರಾಜೀನಾಮೆ ಕೇಳುವ ಹಕ್ಕು ಪ್ರತಿಪಕ್ಷದವರಿಗೆ ಇದೆ ಎಂದು ಹೇಳಿದರು.

ಡಿಕೆಶಿ ಗಂಡಸ್ತನದ ಪ್ರಶ್ನಿಸಿದ ಎಚ್ಡಿಕೆ ಸಂಸ್ಕೃತಿ ಅನಾವರಣ: ಶಾಸಕ ಕೆ.ಎಂ.ಉದಯ್ ಆಕ್ರೋಶ

ರಾಜ್ಯಪಾಲರಿಗೆ ಅಧಿಕಾರವಿದೆ: ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದರೆ ತನಿಖೆ ಮಾಡಲಿ. ರಾಜ್ಯಪಾಲರಿಗೆ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಅವರು ಕ್ರಮ ಕೈಗೊಳ್ಳುತ್ತಾರೆ, ಹಣ ಹಣ ಎಂದು ಹಣ ಮಾಡುತ್ತಾರೆ. ಒಂದು ದಿನ ಹೆಣವಾಗಿ ಹೋಗುತ್ತಾರೆ, ವ್ಯಾಪಾರದಲ್ಲಿ ಹಣ ಮಾಡುತ್ತಾರೆ ಅದು ಬೇರೆ ಎಂದರು.

Latest Videos
Follow Us:
Download App:
  • android
  • ios