ಭುಗಿಲೆದ್ದ ಅಸಮಾಧಾನ: ಸಿಎಂವಿರುದ್ಧ ಸಂಘ ಪರಿವಾರಕ್ಕೆ ದೂರು ನೀಡಲು ನಿರ್ಧರಿಸಿದ ಶಾಸಕ
* ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ
* ಬೊಮ್ಮಾಯಿ ವಿರುದ್ಧ ಕೆಂಡಾಮಂಡಲರಾದ ಬಿಜೆಪಿ ಶಾಸಕ
* ಸಂಘ ಪರಿವಾರಕ್ಕೆ ದೂರು ನೀಡವೆ ಎಂದು ಶಾಸಕ ನೆಹರೂ ಓಲೇಕಾರ್
ಬೆಂಗಳೂರು, (ಆ.04): ಬಹು ನಿರೀಕ್ಷಿತ ಬೊಮ್ಮಾಯಿ ಸಂಪುಟ ಕೊನೆಗೂ ರಚನೆಗೊಂಡಿದ್ದು, ಇಂದು (ಬುಧವಾರ) 29 ಜನರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಮತ್ತೊಂದೆಡೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಹಾವೇರಿ ಶಾಸಕ ನೆಹರೂ ಓಲೇಕಾರ್ ಆಕ್ರೋಶಗೊಂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನೀಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಸ್ಪಷ್ಟಪಡಿಸಿದರು.
ಗೆದ್ದ ಬಿಎಸ್‌ವೈ, ಬೊಮ್ಮಾಯಿ ಸಂಪುಟಕ್ಕೆ 29 ಸಚಿವರ ಸೇರ್ಪಡೆ: ಇಲ್ಲಿದೆ ಮಂತ್ರಿಗಳ ಪಟ್ಟಿ!
ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಸಂಪುಟದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ. ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು, ಹೋರಾಟ ಮಾಡ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ. ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತ್ತ ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ್ ಸಚಿವ ಸ್ಥಾನ ಸಿಗದ್ದಕ್ಕೆ ಶಾಸಕ ಓಲೇಕಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಪ್ರವಾಸಿ ಮಂದಿರದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪರಸಪ್ಪ ಕುಂಬಾರ ಎಂಬ ಬೆಂಬಲಿಗ ಏಕಾಏಕಿ ಉರುಳು ಸೇವೆ ಕೂಡ ಮಾಡಿದ್ದಾರೆ. ಶಾಸಕ ಓಲೇಕಾರರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.