ಗೆದ್ದ ಬಿಎಸ್‌ವೈ, ಬೊಮ್ಮಾಯಿ ಸಂಪುಟಕ್ಕೆ 29 ಸಚಿವರ ಸೇರ್ಪಡೆ: ಇಲ್ಲಿದೆ ಮಂತ್ರಿಗಳ ಪಟ್ಟಿ!

* ಸಿಎಂ ಬೊಮ್ಮಾಯಿ ಸಂಪುಟಕ್ಕೆ 29 ನೂತನ ಸಚಿವರ ಸೇರ್ಪಡೆ

* ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು

* ಬಿಎಸ್‌ವೈ ಪುತ್ರ ವಿಜಯೇಂದ್ರನಿಗಿಲ್ಲ ಸಚಿವ ಸ್ಥಾನ

* ಕರಾವಳಿಯ ಮೂವರು ಶಾಸಕರಿಗೆ ಮಂತ್ರಿಗಿರಿ

29 ministers take oath no Deputy CM in Karnataka Cabinet pod

ಬೆಂಗಳೂರು(ಆ.04): ಅಂತೂ ಇಂತೂ ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ರಚನೆಯಾಗಿದೆ. ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ನೂತನ ಸಚಿವರು ಸೇರ್ಪಡೆಗೊಂಡಿದ್ದು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜಾತಿ, ಕ್ಷೇತ್ರ ಎಂದು ಅನೇಕ ಬಗೆಯ ಲೆಕ್ಕಾಆಚಾರ ಹಾಕಿ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

"

ಇನ್ನು ನೂತನ ಸಚಿವರ ಪದಗ್ರಹಣದಿಂದ ಬಿಎಸ್‌ವೈ ಮತ್ತೆ ಕಿಂಗ್ ಮೇಕರ್ ಆಗಿದ್ದಾರೆಂಬುವುದು ಮಾತ್ರ ಸ್ಪಷ್ಟ. ಪುತ್ರ ವಿಜಯೇಂದ್ರನಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಬಿಎಸ್‌ವೈ ಕೊಂಚ ಅಸಮಾಧಾನಗೊಂಡಿದ್ದರೂ, ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ. ಪಿ. ಯೋಗೇಶ್ವರ್, ಯತ್ನಾಳ್ ಹಾಗೂ ಬೆಲ್ಲದ್‌ರವರಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಸಫಲರಾಗಿದ್ದಾರೆ. ಈ ಹಿಂದೆಯೇ ಬೊಮ್ಮಾಯಿಗೆ ಸಿಎಂ ಸ್ಥಾನ ಕೊಡಿಸುವಲ್ಲಿ ಗೆದ್ದಿರುವ ಬಿಎಸ್‌ವೈ, ಈಗ ಎರಡನೇ ಹೆಜ್ಜೆಯಲ್ಲೂ ಗೆದ್ದಿದ್ದಾರೆ. 

ಹೀಗಿದೆ ಕರ್ನಾಟಕ ನೂತನ ಸಚಿವರ ಪಟ್ಟಿ

* ಗೋವಿಂದ ಕಾರಜೋಳ, ಮುಧೋಳ ಕ್ಷೇತ್ರ, ದಲಿತ

* ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ ಕ್ಷೇತ್ರ, ಕುರುಬ

* ಆರ್‌. ಅಶೋಕ್, ಪದ್ಮನಾಭನಗರ ಕ್ಷೇತ್ರ, ಒಕ್ಕಲಿಗ

* ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರ, ವಾಲ್ಮೀಕಿ

* ವಿ. ಸೋಮಣ್ಣ, ಗೋವಿಂದರಾಜನಗರ ಕ್ಷೇತ್ರ, ಲಿಂಗಾಯತ

* ಉಮೇಶ್ ಕತ್ತಿ, ಹುಕ್ಕೇರಿ ಕ್ಷೇತ್ರ, ಲಿಂಗಾಯತ

* ಎಸ್‌. ಅಂಗಾರ, ಸುಳ್ಯ ಕ್ಷೇತ್ರ, ದಲಿತ

* ಜೆ. ಸಿ. ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ ಕ್ಷೇತ್ರ, ಲಿಂಗಾಯತ

* ಅರಗಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ, ಒಕ್ಕಲಿಗ

* ಡಾ. ಅಶ್ವತ್ಥ್ ನಾರಾಯಣ್, ಮಲ್ಲೇಶ್ವರಂ ಕ್ಷೇತ್ರ, ಒಕ್ಕಲಿಗ

* ಸಿ. ಸಿ. ಪಾಟೀಲ್, ನರಗುಂದ ಕ್ಷೇತ್ರ, ಲಿಂಗಾಯತ

* ಆನಂದ್ ಸಿಂಗ್, ವಿಜಯನಗರ ಕ್ಷೇತ್ರ, ರಜಪೂತ

* ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ, ಬಿಲ್ಲವ

* ಪ್ರಭು ಚೌಹಾಣ್, ಔರಾದ್ ಕ್ಷೇತ್ರ, ಲಂಬಾಣಿ

* ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರ, ಲಿಂಗಾಯತ

* ಶಿವರಾಮ್ ಹೆಬ್ಬಾರ್, ಯಲ್ಲಾಪುರ ಕ್ಷೇತ್ರ, ಬ್ರಾಹ್ಮಣ

* ಎಸ್‌. ಟಿ. ಸೋಮಶೇಖರ್, ಯಶವಂತಪುರ ಕ್ಷೇತ್ರ, ಒಕ್ಕಲಿಗ

* ಬಿ. ಸಿ. ಪಾಟೀಲ್, ಹಿರೇಕೆರೂರು ಕ್ಷೇತ್ರ, ಲಿಂಗಾಯತ

* ಭೈರತಿ ಬಸವರಾಜ್, ಕೆ. ಆರ್‌. ಪುರಂ ಕ್ಷೇತ್ರ, ಕುರುಬ

* ಡಾ. ಕೆ. ಸುಧಾಕರ್, ಚಿಕ್ಕಬಳ್ಳಾಪುರ ಕ್ಷೇತ್ರ, ಒಕ್ಕಲಿಗ

* ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ, ಒಕ್ಕಲಿಗ

* ಶಶಿಕಲಾ ಜೊಲ್ಲೆ, ನಿಪ್ಪಾಣಿ ಕ್ಷೇತ್ರ, ಲಿಂಗಾಯತ

* ಎಂಟಿಬಿ ನಾಗರಾಜ್, ಎಂಎಲ್‌ಸಿ, ಕುರುಬ

* ನಾರಾಯಣಗೌಡ, ಕೆ. ಆರ್‌. ಪೇಟೆ ಕ್ಷೇತ್ರ, ಒಕ್ಕಲಿಗ

* ಬಿ. ಸಿ. ನಾಗೇಶ್, ತಿಪಟೂರು ಕ್ಷೇತ್ರ, ಬ್ರಾಹ್ಮಣ

* ಸುನಿಲ್ ಕುಮಾರ್, ಕಾರ್ಕಳ ಕ್ಷೇತ್ರ, ಈಡಿಗ

* ಹಾಲಪ್ಪ ಆಚಾರ್, ಯಲಬುರ್ಗಾ ಕ್ಷೇತ್ರ, ರೆಡ್ಡಿ ಲಿಂಗಾಯತ

* ಶಂಕರ್ ಪಾಟೀಲ್ ಮುನೇನಕೊಪ್ಪ, ನವಲಗುಂದ ಕ್ಷೇತ್ರ, ಲಿಂಗಾಯತ 

* ಮುನಿರತ್ನ, ಆರ್‌. ಆರ್‌. ನಗರ ಕ್ಷೇತ್ರ, ನಾಯ್ಡು

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಟ್ಟು 29 ಮಂದಿಯಲ್ಲಿ, 6 ಮಂದಿ ಹೊಸ ಮುಖಗಳು. ಅಲ್ಲದೇ ವಲಸಿಗರಲ್ಲಿ ಇಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಂಪುಟದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. 

Latest Videos
Follow Us:
Download App:
  • android
  • ios