ಸೀತಾಮಾತೆಯ ರಕ್ಷಿಸಿದ ಬಜರಂಗಿ ಬೇಕು; ಬಜರಂಗದಳವಲ್ಲ- ನೀತಾ ಡಿಸೋಜಾ

ನಮಗೆ ಬೇಕಿರುವುದು ಸೀತಾ ಮಾತೆ ರಕ್ಷಿಸಿದ ಬಜರಂಗಿ, ಜನರಲ್ಲಿ ಕೋಮುದ್ವೇಷ ಹುಟ್ಟಿಸುತ್ತಿರುವ ಬಜರಂಗದಳವಲ್ಲ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೀತಾ ಡಿಸೋಜಾ ಹೇಳಿದರು.

Need Bajrangi who saved Sita Mata Not Bajrang Dal says Netta D'Souza at hubballi rav

ಹುಬ್ಬಳ್ಳಿ (ಮೇ.5) : ನಮಗೆ ಬೇಕಿರುವುದು ಸೀತಾ ಮಾತೆ ರಕ್ಷಿಸಿದ ಬಜರಂಗಿ, ಜನರಲ್ಲಿ ಕೋಮುದ್ವೇಷ ಹುಟ್ಟಿಸುತ್ತಿರುವ ಬಜರಂಗದಳವಲ್ಲ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೀತಾ ಡಿಸೋಜಾ(Netta D'Souza) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗದಳ(Bajarangadala)ದ ಹೆಸರಿನಲ್ಲಿ ಹಲವು ಕಡೆಗಳಲ್ಲಿ ದಬ್ಬಾಳಿಕೆ, ದೈಹಿಕ ಹಲ್ಲೆಗಳು ನಡೆದಿವೆ. ಇದರ ಕುರಿತು ಧ್ವನಿ ಎತ್ತಿದರೆ ಪ್ರಧಾನಿ ಮೋದಿಯಾದಿಯಾಗಿ ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಎಲ್ಲಿಲ್ಲದ ಕೋಪ ಬರುತ್ತದೆ ಎಂದರು.

ದೇವದುರ್ಗ: ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!

ಮಹಿಳೆಯರಿಗೆ ಬಜರಂಗಿ (ಹನುಮಾನ್‌)ಯ ಅವಶ್ಯಕತೆ ಇದೆ. ಅದೇ ಬಜರಂಗದಳದ ಅವಶ್ಯಕತೆ ನಮಗಿಲ್ಲ. ಇವರು ಜನರಲ್ಲಿ ಕೋಮುದ್ವೇಷ ಹುಟ್ಟಿಸುತ್ತಾ, ಜಾತಿ ಜಾತಿಗಳ ನಡುವೆ ವೈಷಮ್ಯ ಬೆಳೆಸುತ್ತಾ ಸಮಾಜದಲ್ಲಿ ಅಶಾಂತಿ, ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಹಾಗಾಗಿ, ಇವರ ಮೇಲೆ ಮಹಿಳೆಯರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲರಂತೆ ಮಹಿಳೆಯರು ನಿರ್ಭೀತಿಯಿಂದ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮಹಿಳೆಯರ ಕಲ್ಯಾಣಕ್ಕೆ ಬೇಕಾದ ವ್ಯವಸ್ಥೆ, ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ ಸರ್ಕಾರ ಮಹಿಳೆಯರ ಏಳ್ಗೆಗೆ ಶ್ರಮಿಸುವುದರೊಂದಿಗೆ ಅವರ ಕಲ್ಯಾಣಕ್ಕೆ ಬೇಕಾದ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ.

ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯ ಅಡಿ .2000 ಗ್ಯಾರಂಟಿ ಯೋಜನೆ ರೂಪಿಸಿದೆ. ಹಾಗೆಯೇ ಅಧಿಕಾರಕ್ಕೆ ಬಂದ ಕೂಡಲೇ ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಸಂಚರಿಸಿದ್ದು, ಎಲ್ಲೆಡೆ ಕಾಂಗ್ರೆಸ್‌ ಪರ ಅಲೆಯಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗಾಗಲೇ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭವಾಗಿದ್ದು, ಹೋದ ಎಲ್ಲ ಕಡೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಮೋದಿ ರೋಡ್‌ ಶೋ ಕಾರ್ಯಕ್ರಮದಲ್ಲಿ ಬದಲಾವಣೆ: ಯಾಕೆ ಗೊತ್ತಾ ?

ಈ ವೇಳೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ದೀಪಾ ಗೌರಿ, ಡಾ. ಸ್ಮಿತಾ ಇದ್ದರು.

Latest Videos
Follow Us:
Download App:
  • android
  • ios