1996 ರಿಂದಲೂ ನಾನು ಟಿಕೆಟ್‌ ಆಕಾಂಕ್ಷಿ. ಚುನಾವಣೆಗೆ ನಾಲ್ಕು ಮೂಟೆ ದುಡ್ಡು ತರಬೇಕು. ಈಗ ಶೇ.75 ರಷ್ಟುಸಂಗ್ರಹಿಸಿದ್ದೇನೆ. ಪಕ್ಷದ ಆಕಾಂಕ್ಷಿಗಳು ನನಗೆ ಅವಕಾಶ ಮಾಡಿಕೊಡಬೇಕು. ಬಹಿರಂಗವಾಗಿ ಮನವಿ ಮಾಡಿದ ಕಾಂಗ್ರೆಸ್ ಮುಖಂಡ, ಟಿಕೆಟ್ ಆಕಾಂಕ್ಷಿ ಎಂ.ಡಿ.ಕೃಷ್ಣಮೂರ್ತಿ

ಕೆ.ಆರ್.ಪೇಟೆ (ನ.13) : ಕಳೆದ 40 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವ ನನಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಮನವಿ ಮಾಡಿದರು.

ಪಟ್ಟಣದ ರಾಮದಾಸ್‌ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 1998ರಲ್ಲಿ ಎಸ್‌.ಎಂ.ಕೃಷ್ಣ ಅವರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷನಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ ಎಂದರು.

Assembly Election: ಕೋಲಾರದಲ್ಲಿಂದು ಸಿದ್ದು ಕಣ 'ಪರೀಕ್ಷೆ: ನಾಡಿಮಿಡಿತ ಅರಿಯಲು ಕ್ಷೇತ್ರ ಪರ್ಯಟನೆ...

ಅಧಿಕಾರ ಸಿಕ್ಕಾಗ ಕೆಲಸ ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ರಾಜ್ಯ ಅಪೆP್ಸ… ಬ್ಯಾಂಕ್‌ ನಿರ್ದೇಶಕನಾಗಿ ಒಂದು ವರ್ಷ ಕಾರ್ಯನಿರ್ವಹಿಸಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭಾರತ ಆಹಾರ ನಿಗಮದ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿ, ಕೆಆರ್‌ಐಡಿಎಲ…, ನಿರ್ದೇಶಕನಾಗಿ 2017ರಲ್ಲಿ ಕೆಯುಐಡಿಎಫ್‌ಸಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.

ಪಟ್ಟಣಕ್ಕೆ ಹೇಮಾವತಿ ನದಿಯಿಂದ 27 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ, 12 ಕೋಟಿ ರು. ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಯೋಜನೆ ಹಾಗೂ ಪುರಸಭೆ ವತಿಯಿಂದ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ 6 ಕೋಟಿ ರು. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಕೊಟ್ಟಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ ಎಂದರು.

ನಾನು ತಾಲೂಕು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಹಿರಿಯ ನಾಯಕ ಕೆ.ಬಿ.ಚಂದ್ರಶೇಖರ್‌ ಎರಡು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 7 ಬಾರಿ ಟಿಕೆಚ್‌ ಪಡೆದು ಸ್ಪರ್ಧೆ ಮಾಡಿ ಎರಡು ಬಾರಿ ಗೆದಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯ ಕಾರ್ಯಕರ್ತನಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. 40 ವರ್ಷದ ಸುಧೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ… ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ ಎಂದರು.

ನನಗೀಗ 69 ವರ್ಷ ವಯಸ್ಸಾಗುತ್ತಿದೆ. ಇದು ನನ್ನ ರಾಜಕೀಯ ಜೀವನದ ಅಂತಿಮ ಘಟ್ಟದ ಕೊನೆಯ ಚುನಾವಣೆಯಾಗಿದೆ. 2013ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲರೂ ಕೈ ಜೋಡಿಸಿ ನನಗೆ ಒಂದು ಅವಕಾಶ ನೀಡಿದರೆ ತಾಲೂಕನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ನನಗೆ ಅಧಿಕಾರ ಇದ್ದಾಗ ಹತ್ತು ವರ್ಷದ ನೆನಗುದ್ದಿಗೆ ಬಿದ್ದಿದ್ದ ಯುಡಿಜೆಗೆ ಮರುಚಾಲನೆ ನೀಡಿದೆ. ನಾನು 26 ಕೋಟಿ ಅನುದಾನ ಕೊಡಿಸಿದೆ. ಕಾಮಗಾರಿ ಮುಗಿಸಲು ಇನ್ನೂ ಮೂರ್ನಾಲ್ಕು ಕೋಟಿ ಬೇಕಿದೆ. ಸಚಿವ ಕೆ.ಸಿ.ನಾರಾಯಣಗೌಡ ಕಾಮಗಾರಿ ಮುಗಿಸದಿರುವುದು ದುರಂತ. ಪಟ್ಟಣದ ರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ಈಗಿನ ಸಚಿವರ ಕೊಡುಗೆ ಏನೂ ಇಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೋಡಿಮರನಹಳ್ಳಿದೇವರಾಜು, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಎಂ.ಜೆ.ಶಶಿಧರ್‌, ಕಾಂಗ್ರೆಸ್‌ ಜಿಲ್ಲಾ ವಕ್ತಾರ ಮಾದಾಪುರ ರಾಮಕೃಷ್ಣೇಗೌಡ, ನಿವೃತ್ತ ಪ್ರಾಶುಂಪಾಲ ಜಾನೇಗೌಡ್ರು, ಜಿಲ್ಲಾ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ್‌ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

ಭಿನ್ನಮತ ಬದಿಗಿಟ್ಟು ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ: ಸುರ್ಜೇವಾಲಾ

ಚುನಾವಣೆಗೆ ನಾಲ್ಕು ಮೂಟೆ ದುಡ್ಡು ತರಬೇಕು:

1996 ರಿಂದಲೂ ನಾನು ಟಿಕೆಟ್‌ ಆಕಾಂಕ್ಷಿ. ಚುನಾವಣೆಗೆ ನಾಲ್ಕು ಮೂಟೆ ದುಡ್ಡು ತರಬೇಕು. ಈಗ ಶೇ.75 ರಷ್ಟುಸಂಗ್ರಹಿಸಿದ್ದೇನೆ. ಪಕ್ಷದ ಆಕಾಂಕ್ಷಿಗಳು ನನಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಸಂಪನ್ಮೂಲಕ್ಕಾಗಿ ಎರಡು ತಿಂಗಳು ಶ್ರಮವಹಿಸಿ ಹಣವನ್ನು ಕ್ರೂಢಿಕರಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದೆ. ಬರಿಗೈಲಿ ರಾಜಕಾರಣ ಮಾಡಲ್ಲ. ಎದುರಾಳಿ ನೂರು ರು. ಕೊಟ್ಟರೆ, ನಾವು 75 ರು.ಗಳನ್ನಾದರೂ ಕೊಡಬೇಕು. ಬಿಜೆಪಿಯವರು ಹಣ ಲೂಟಿ ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಅವರು ಚುನಾವಣೆ ವೇಳೆ ಹೆಚ್ಚು ದುಡ್ಡು ಕೊಡಲಿದ್ದಾರೆ.

ಎಂ.ಡಿ.ಕೃಷ್ಣಮೂರ್ತಿ, ಟಿಕೆಟ್‌ ಆಕಾಂಕ್ಷಿ