ಇದೇ ಮೊದಲ ಬಾರಿಗೆ ಎನ್‌ಡಿಎ ರಾಜ್ಯಸಭೆ ಸಂಖ್ಯಾಬಲ 104ಕ್ಕೆ | ಕಾಂಗ್ರೆಸ್‌ನ ಅತ್ಯಂತ ಕನಿಷ್ಠ ಪ್ರಾತಿನಿಧ್ಯ | ಇನ್ನಷ್ಟು ಬೆಂಬಲ ಸಿಗುವ ಸಾಧ್ಯತೆ
ನವದೆಹಲಿ(ನ.04): ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಸೇರಿ ಬಿಜೆಪಿಯ 9 ಅಭ್ಯರ್ಥಿಗಳು ಸೋಮವಾರ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ತನ್ಮೂಲಕ 242 ಸಂಖ್ಯಾಬಲದ ಸಂಸತ್ತಿನ ಮೇಲ್ಮನೆಯಲ್ಲಿ ಇದೇ ಮೊದಲ ಬಾರಿಗೆ ಎನ್‌ಡಿಎ ಸಂಖ್ಯಾಬಲ 104ಕ್ಕೇರಿದೆ. ಮತ್ತೊಂದೆಡೆ ದೀರ್ಘಕಾಲೀನವರೆಗೂ ರಾಜ್ಯಸಭೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಪ್ರತಿಪಕ್ಷ ಕಾಂಗ್ರೆಸ್ ಸಂಖ್ಯೆ 38ಕ್ಕೆ ಕುಸಿದಿದೆ.
DMK ಜೊತೆ ಮೈತ್ರಿ ಇಲ್ಲ, 2021ರ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ ಏಕಾಂಗಿ ಸ್ಪರ್ಧೆ
ಇದು ರಾಜ್ಯಸಭೆಯಲ್ಲಿ ಈವರೆಗಿನ ಕಾಂಗ್ರೆಸ್‌ನ ಅತ್ಯಂತ ಕನಿಷ್ಠ ಪ್ರಾತಿನಿಧ್ಯವಾಗಿದೆ. ಉತ್ತರಪ್ರದೇಶದಲ್ಲಿ 10 ಮತ್ತು ಉತ್ತರಾಖಂಡದಲ್ಲಿ 1 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು 9 ಸ್ಥಾನ ಗೆದ್ದಿದ್ದಾರೆ. ಈ ಮೂಲಕ ಪಕ್ಷದ ಟಾಲಿ 92 ಸ್ಥಾನಗಳಿಗೆ ಏರಿಕೆಯಾಗಿತ್ತು.
ಎನ್‌ಡಿ ಸಂಖ್ಯೆ ಈಗ ಸದ್ಯ 104 ಆಗಿದ್ದು ಮತ್ತು ಇನ್ನು ನಾಲ್ಕು ನಾಮನಿರ್ದೇಶಿತ ಸದಸ್ಯರ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಈ ಮೂಲಕ ರಾಜ್ಯಸಭೆಯಲ್ಲಿ ಒಟ್ಟು ಸಂಖ್ಯಾ ಬಲದ ಅರ್ಧ 121ರ ಗಡಿ ಮುಟ್ಟುವ ಸಾಧ್ಯತೆ ಇದೆ.
ಮೊದಲ ಬಾರಿ ಕೋವಿಡ್ ಸೋಂಕಿತರಿಂದ ಮತದಾನ
ಒಐಎಡಿಎಂಕೆಯಿಂದ ಒಂಬತ್ತು, ಬಿಜೆಡಿಯಿಂದ 9, ಏಳು ಸಂಸದರೊಂದಿಗೆ ಟಿಆರ್ಎಸ್ ಮತ್ತು ರಾಜ್ಯಸಭೆಯಲ್ಲಿ ಆರು ಸಂಸದರನ್ನು ಹೊಂದಿರುವ ವೈಎಸ್ಆರ್ಸಿಪಿ ಮುಂತಾದ ಕೆಲವು ಸ್ನೇಹಪರ ಪಕ್ಷಗಳಿಂದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಬೆಂಬಲ ಪಡೆಯಬಹುದು. ಈ ಪಕ್ಷಗಳು ಎನ್‌ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.
