ಚೆನ್ನೈ(ನ.04): 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳ್‌ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ಅಧ್ಯಕ್ಷ ಕಮಲ್‌ ಹಾಸನ್‌ ಹೇಳಿದ್ದಾರೆ. 

ಚುನಾವಣಾ ಪೂರ್ವಸಿದ್ಧತೆ ವಿಚಾರವಾಗಿ ಚೆನ್ನೈನ ಹೋಟೆಲ್‌ವೊಂದರಲ್ಲಿ ಪಕ್ಷದ ಜಿಲ್ಲಾ ಕಾರ‍್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ, ಎಐಎಡಿಎಂಕೆ ಅಥವಾ ಇನ್ಯಾವುದೇ ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದೂಡಿಕೆಯಾಯ್ತು ಚುನಾವಣಾ ಫಲಿತಾಂಶದ ಡೇಟ್ : ವಿರುದ್ಧ ಅರ್ಜಿ

ಚುನಾವಣಾ ಪೂರ್ವ ಮೈತ್ರಿ ಬದಲು ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದರು. ಇದೇ ವೇಳೆ ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿಗೆ ಸಂಬಂಧಿಸಿದಂತೆ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.

ಎಲ್ಲಾ ಕ್ಷೇತ್ರಗಳಿಗೆ ಬೂತ್ ಸಮಿತಿಗಳನ್ನು ರಚಿಸಿ ಕೆಲಸ ಮಾಡುವುದು ಮತ್ತು ಪಕ್ಷಕ್ಕೆ ಧನಸಹಾಯ ನೀಡುವುದರ ಜೊತೆಗೆ ಕಮಲ್ ಹಾಸನ್ ರಾಜ್ಯವ್ಯಾಪಿ ಪ್ರಚಾರ ಪ್ರವಾಸದ ಯೋಜನೆಗಳನ್ನು ರೂಪಿಸುವುದನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ.

ಮೊದಲ ಬಾರಿ ಕೋವಿಡ್‌ ಸೋಂಕಿ​ತ​ರಿಂದ ಮತ​ದಾ​ನ

ಕಮಲ್ ಹಾಸನ್ ಪಕ್ಷದ ನಿಲುವಿನ ಪ್ರಕಾರ, ಹಸನ್ ಆಡಳಿತಾರೂಢ BJP ಬಿಜೆಪಿ ಮತ್ತು ರಾಜ್ಯದ ಎಐಎಡಿಎಂಕೆ ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೂ ನಿಯಮಿತವಾಗಿ ಸಭೆ ನಡೆಸಿದ್ದಾರೆ. ಕಮಲ್ ಹಾಸನ್ ಅವರ ಸಿದ್ಧಾಂತ ಎಡಪಂಥದಿಂದ ಪ್ರೇರೇಪಿತವಾಗಿದೆ ಎಂದು ದೃಢವಾಗಿ ಹೇಳಲಾಗುತ್ತದೆ.