Shivamogga: 5 ಹೊಸ ಬಸ್ ಸಂಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿಶಾನೆ!

ತಾಲೂಕಿನ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ಸೌಲಭ್ಯದ ಬಹುದಿನದ ಬೇಡಿಕೆಗೆ ಪೂರಕವಾಗಿ ಸಾರಿಗೆ ಸಚಿವರು 5 ಹೊಸ ಬಸ್ ಸಂಚಾರ ಆರಂಭಿಸುವ ಮೂಲಕ ಸ್ಪಂದಿಸಿದ್ದು, ಈ ದಿಸೆಯಲ್ಲಿ ಸಾರಿಗೆ ಸಚಿವರಿಗೆ ತಾಲೂಕಿನ ಎಲ್ಲ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. 
 

BJP State President BY Vijayendra launch 5 New Buses at Shivamogga gvd

ಶಿಕಾರಿಪುರ (ಮಾ.01): ತಾಲೂಕಿನ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ಸೌಲಭ್ಯದ ಬಹುದಿನದ ಬೇಡಿಕೆಗೆ ಪೂರಕವಾಗಿ ಸಾರಿಗೆ ಸಚಿವರು 5 ಹೊಸ ಬಸ್ ಸಂಚಾರ ಆರಂಭಿಸುವ ಮೂಲಕ ಸ್ಪಂದಿಸಿದ್ದು, ಈ ದಿಸೆಯಲ್ಲಿ ಸಾರಿಗೆ ಸಚಿವರಿಗೆ ತಾಲೂಕಿನ ಎಲ್ಲ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ನೂತನ ಬಸ್ ಗಳಿಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸರ್ಕಾರಿ ಬಸ್ ಸಂಚಾರದ ಹಲವು ದಿನದ ಬೇಡಿಕೆಗೆ ಶಿವಮೊಗ್ಗದ ಹಿರಿಯ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ ಅಂದಾಜು 30 ಬಸ್ ಅಗತ್ಯವಿದೆ ಎಂದು ಸಂಸದ ರಾಘವೇಂದ್ರ ಹಾಗೂ ತಾವು ಪ್ರತ್ಯೇಕವಾಗಿ 2-3 ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರನ್ನು ಖುದ್ದು ಬೇಟಿ ಮಾಡಿ ಒತ್ತಾಯಿಸಿದ್ದಾಗಿ ತಿಳಿಸಿದ ಅವರು, ಈ ಬಗ್ಗೆ ಸಚಿವರು ಸ್ಪಂದಿಸಿ ಬಸ್ ಸಂಚಾರ ಆರಂಭಿಸುವ ಭರವಸೆ ನೀಡಿದ್ದರು. ಇದೀಗ 5 ಬಸ್ ಸಂಚಾರವನ್ನು ಆರಂಭಿಸಿದ್ದು, ಈ ದಿಸೆಯಲ್ಲಿ ಸಾರಿಗೆ ಸಚಿವರಿಗೆ ತಾಲೂಕಿನ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ.ವೈ.ವಿಜಯೇಂದ್ರ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟುಹಬ್ಬದ ಸಂದರ್ಘದ ಅಂಗವಾಗಿ ಬಸ್ ಬಿಡುಗಡೆಗೆ ಸಾರಿಗೆ ಸಚಿವರು ಸ್ಪಂದಿಸಿದ್ದು, ಇದರೊಂದಿಗೆ ಉಳಿದ 25 ಬಸ್ ಸಂಚಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಅವರು ಬಸ್ ಸಂಚಾರವನ್ನು ಶಾಲಾಕಾಲೇಜು ವೇಳೆಗೆ ಹೊಂದಿಸಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಈ ದಿಸೆಯಲ್ಲಿ ಸುಗಮ ಸಂಚಾರಕ್ಕೆ ಖಾಸಗಿ ಬಸ್ ಮಾಲೀಕರು ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಬದಲ್ಲಿ ಕೆ.ಎಸ್‌ಆರ್‌ಟಿ ಸಿ ವಿಭಾಗೀಯ ಸಂಚಾರ ಅಧಿಕಾರಿ ದಿನೇಶ್, ತಾಂತ್ರಿಕ ಶಿಲ್ಪಿ ದೇವರಾಜ ಗೌಡ್ರು, ಡಿಪೋ ಮ್ಯಾನೇಜರ್ ಸೌಮ್ಯ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮುಖಂಡ ವಸಂತಗೌಡ,ಶಿವಪ್ಪಯ್ಯ, ರಾಘವೇಂದ್ರ,ಪ್ರವೀಣಬೆಣ್ಣೆ,ವೀರಣ್ಣಗೌಡ,ಪ್ರವೀಣಶೆಟ್ಟಿ,ಸಿ.ಬಸವರಾಜು,ರವಿಕಾಂತ ಮತ್ತಿತರರು ಹಾಜರಿದ್ದರು.

Latest Videos
Follow Us:
Download App:
  • android
  • ios