Asianet Suvarna News Asianet Suvarna News

ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಾರೆ: ಮಾಜಿ ಶಾಸಕಿ ರೂಪಾಲಿ ನಾಯ್ಕ

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ವಿಶ್ವ ಮಾನವ ನರೇಂದ್ರ ಮೋದಿಜೀ ಅವರು ಮೂರನೇ ಭಾರಿ ಪ್ರಧಾನಿ ಆಗಲೆಂದು ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸತತವಾಗಿ ಅವಿಶ್ರಾಂತವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ನೀವು ನೀಡಿದ ಅವಿಶ್ರಾಂತ ಸೇವೆಗೆ ಗೆಲುವಿಗೆ ನಾಂದಿಯಾಗಲಿದೆ ಎಂದರು.

Narendra Modi to become PM for third time Says Ex MLA Roopali Naik gvd
Author
First Published May 26, 2024, 7:04 PM IST

ಅಂಕೋಲಾ (ಮೇ.26): ತಾಲೂಕಿನ ಒಕ್ಕಲಿಗರ ಸಭಾಭವನದಲ್ಲಿ ಬಿಜೆಪಿ ಅವಲೋಕನಾ ಸಭೆ ಯಶಸ್ವಿಯಾಗಿ ನಡೆಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ವಿಶ್ವ ಮಾನವ ನರೇಂದ್ರ ಮೋದಿಜೀ ಅವರು ಮೂರನೇ ಭಾರಿ ಪ್ರಧಾನಿ ಆಗಲೆಂದು ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸತತವಾಗಿ ಅವಿಶ್ರಾಂತವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ನೀವು ನೀಡಿದ ಅವಿಶ್ರಾಂತ ಸೇವೆಗೆ ಗೆಲುವಿಗೆ ನಾಂದಿಯಾಗಲಿದೆ ಎಂದರು.

ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಬಿಜೆಪಿಯನ್ನು ಆಡಳಿತಕ್ಕೆ ತರಲು ಅಂಕೋಲಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಪ್ರಮುಖರು ತಮಗೆ ನೀಡಿದ ಸವಾಲನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕೋಲಾದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರಿಂದ ಮತದಾನ ಮಾಡಿಸಿದ್ದು, ಈ ನಿಮ್ಮ ಸಹಕಾರಕ್ಕೆ ನಾನು ಸದಾ ಚಿರಋಣಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಸದನದಲ್ಲಿ ಆಕಳಿಸುತ್ತಿದ್ರು: ಕೇಂದ್ರ ಸಚಿವ ಜೋಶಿ ವ್ಯಂಗ್ಯ

ಕಾಂಗ್ರೆಸ್ಸಿಗರಿಗೆ ಅಭಿವೃದ್ಧಿಯ ಮಾತನಾಡುವ ನೈತಿಕ ಹಕ್ಕಿಲ್ಲ: ಳೆದ ಒಂದು ವರ್ಷದಲ್ಲಿ ಶಾಸಕ ಸತೀಶ ಸೈಲ್ ಅವರು ಕಾರವಾರ- ಅಂಕೊಲಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇನು ಎಂದು ಪ್ರಶ್ನಿಸಿದರೆ ಶಂಭು ಶೆಟ್ಟಿ ಅವರಿಗೆ ಜಾಣ ಕುರುಡು. ಅದಕ್ಕೆ ಉತ್ತರವನ್ನೇ ಹೇಳುತ್ತಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದೆ ಅಭಿವೃದ್ಧಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಪ್ರಮುಖರು ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಪ್ರಮುಖರು, ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯ ಬಗ್ಗೆ ಯಾವ ಕಳಕಳಿ ಇದೆ. ವಿಧಾನಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಚರ್ಚೆಗೆ ಬಂದಾಗ ತುಟಿ ಬಿಚ್ಚದೆ ಇದ್ದ ಇವರು ಜಿಲ್ಲೆಯ ಯಾವ ಸಮಸ್ಯೆಗೆ ಸ್ಪಂದಿಸಿದ ಉದಾಹರಣೆ ಇದೆ. ಚುನಾವಣೆಗೆ ಟಿಕೆಟ್ ಸಿಕ್ಕಮೇಲೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನು ಮಾಡಿದ್ದಾರೆ. ಚುನಾವಣೆ ಮುಗಿದ ಮೇಲೆ ಜಿಲ್ಲೆಯತ್ತ ಮುಖವನ್ನೂ ಹಾಕಿಲ್ಲ. ಜಿಲ್ಲೆಯ ಬಗ್ಗೆ ಅವರಿಗೆ ಎಷ್ಟು ಕಳಕಳಿ ಇದೆ ಎನ್ನುವುದು ಇದೇ ಉದಾಹರಣೆ.

ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅಭಿವೃದ್ಧಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರೆ ಅಂಜಲಿ ಅವರಿಗೆ ಆಗಿದ್ದಾದರೂ ಏನು. ತಿಳಮಾತಿ ಕಾಮಗಾರಿ ಯಾರು ಶಾಸಕರಾಗಿದ್ದ ಅವಧಿಯಲ್ಲಿ ವಾಪಸ್ ಹೋಗಿದೆ ಎಂದು ದಾಖಲೆ ಪಡೆಯಲಿ. ಸೈಲ್ ಶಾಸಕರಾಗಿದ್ದ ಅವಧಿಯಲ್ಲೆ ಯೋಜನೆ ಸ್ಥಗಿತಗೊಂಡಿದೆ. ಇದೂ ಶಂಭು ಶೆಟ್ಟಿ ಅವರಿಗೆ ಸರಿಯಾದ ಮಾಹಿತಿ ಇಲ್ಲವೇ ಅಥವಾ ರೂಪಾಲಿ ಎಸ್. ನಾಯ್ಕ ಅವರ ಮೇಲೆ ಗೂಬೆ ಕೂರಿಸಲು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾಗಿದೆ.

ಬೆಟ್ಟಗುಡ್ಡ, ರಸ್ತೆಗಳಲ್ಲಿ ಮಂಜಿನ ಮೆರವಣಿಗೆ: ಮಳೆಗಾಲಕ್ಕೂ ಮುನ್ನವೇ ಮಡಿಕೇರಿ ಕೂಲ್ ಕೂಲ್

ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ ವ್ಯಕ್ತವಾಗಿತ್ತು. ಸ್ಥಳೀಯರ ವಿರೋಧವೇ ಕ್ರೀಡಾಂಗಣ ನಿರ್ಮಾಣಕ್ಕೆ ಹಿನ್ನಡೆ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇರವಡಿ ಉಳಗಾ ಸೇತುವೆಗೆ ಭೂಸ್ವಾಧೀನ ಸೇರಿದಂತೆ ಸ್ಪಷ್ಟ ಯೋಜನೆಯೆ ಇಲ್ಲದೆ ಕಾಮಗಾರಿ ಆರಂಭಿಸಿದ್ದೆ ವಿಳಂಬಕ್ಕೆ ಕಾರಣ. ರೂಪಾಲಿ ನಾಯ್ಕ ಅದಕ್ಕೆ ಹಣವನ್ನೂ ಬಿಡುಗಡೆ ಮಾಡಿಸಿದ್ದರು. ಅದೇ ರೀತಿ ಮಂಜಗುಣಿ ಗೋಕರ್ಣ ಸೇತುವೆ ಕೂಡ ಸೈಲ್ ಅವಧಿಯಲ್ಲೇ ಆರಂಭವಾಗಿತ್ತು. ಹಾಗಿದ್ದರೆ ಸೈಲ್ ಶಾಸಕರಾಗಿ ಒಂದು ವರ್ಷವಾದರೂ ಏಕೆ ಈ ಎರಡೂ ಸೇತುವೆಗಳನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

Latest Videos
Follow Us:
Download App:
  • android
  • ios