MLC Election: ಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ: ಕಟೀಲ್‌

*  ಟಿಕೆಟ್‌ ವಂಚಿತರಿಗೆ ಮುಂದೆ ಸೂಕ್ತ ಸ್ಥಾನಮಾನ
*  ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ
*  ಮೋದಿ ಕಾರ್ಯಗಳಿಂದ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಿದೆ  

Nalin Kumar Kateel Talks over MLC Election in Karnataka grg

ಧಾರವಾಡ(ಮೇ.27):  ಮೈಸೂರು, ಬೆಳಗಾವಿ ಹಾಗೂ ಧಾರವಾಡದಲ್ಲಿ ಒಟ್ಟು ನಾಲ್ಕು ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಈ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ ಬಾರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಗೆಲುವಿನ ತಂತ್ರ ಹೆಣೆಯಲು ಪ್ರಮುಖ ಸಭೆ ಮಾಡುತ್ತಿದ್ದೇನೆ. ಈ ವರೆಗೆ ಆಗಿರುವ ಹಾಗೂ ಮುಂದಾಗುವ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದೇನೆ. ಕಳೆದ ಬಾರಿ ಎರಡು ಸ್ಥಾನಗಳನ್ನು ಮಾತ್ರ ಪಡೆದಿದ್ದು ಈ ಬಾರಿ ನಾಲ್ಕೂ ಸ್ಥಾನ ಬಿಜೆಪಿಗೆ ಬರಲಿವೆ ಎಂದರು.

MLC Election: ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‌, ಎಡಪಂಥೀಯರು ನಿಸ್ಸೀಮರು: ಕೇಂದ್ರ ಸಚಿವ ಜೋಶಿ

ಬಿಜೆಪಿ ಟಿಕೆಟ್‌ ವಂಚಿತರ ಅಸಮಾಧಾನದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಆಕಾಂಕ್ಷಿಗಳು ಟಿಕೆಟ್‌ ಅಪೇಕ್ಷೆ ಮಾಡುವುದು ತಪ್ಪಲ್ಲ. ಮುಂದೆ ಅವರಿಗೆ ಸೂಕ್ತ ಸ್ಥಾನ ನೀಡಲಿದೆ ಎಂದು ತಿಳಿಸಿದರು.
ಎಂಟು ವರ್ಷಗಳು ಕಳಂಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ನಾಯಕರಲ್ಲಿ ಒಬ್ಬರು. ಅವರ ಕಾರ್ಯಗಳಿಂದ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಿದೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಸ್ವಾಮಿ ವಿವೇಕಾನಂದರು ಕಂಡ ಭವ್ಯ ಭಾರತದ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವಿದೆ. ಉತ್ತಮ ಅಭಿವೃದ್ಧಿ ಕಾರ್ಯಗಳಿಂದ ದೇಶದ ಆಮೂಲಾಗ್ರ ಬದಲಾವಣೆಗೆ ನಿತ್ಯ ಶ್ರಮಿಸುತ್ತಿದ್ದಾರೆ ಎಂದ ಅವರು, ಮಸೀದಿ-ಮಂದಿರಗಳ ವಿವಾದಗಳ ಪ್ರಶ್ನೆಗೆ ಉತ್ತರಿಸಿದರು. ಇದು ಸೂಕ್ಷ್ಮ್ಮ ಮತ್ತು ಸಾರ್ವಜನಿಕ ವಿಚಾರ. ವಿವಾದಗಳು ನ್ಯಾಯಾಲಯದಲ್ಲಿವೆ. ನ್ಯಾಯಾಲಯದ ಆದೇಶದಂತೆ ತನಿಖೆಯೂ ಸಹ ನಡೆಯಲಿದೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios